ಜೆ.ಎಸ್.ಎಸ್ ಸೆಂಟ್ರಲ್ ಶಾಲೆ ಚಾಂಪಿಯನ್

ಧಾರವಾಡ 03: 17 ವರ್ಷದೊಳಗಿನ ಅಂತರ ಶಾಲಾ ಬಾಲಕರ ಫುಟ್ ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಕೇಂದ್ರಿಯ ಶಾಲೆ, ಗೆಲವು ಸಾಧಿಸಿ ಚಾಂಪಿಯನ್ನ ಪಟ್ಟ ಮುಡಿಗೇರಿಸಿಕೊಂಡಿದೆ.

ಡಾ. ಸತೀಶ ಕನ್ನಯ್ಯ ಅವರ ಸ್ಮರಣಾರ್ಥ ಕರ್ನಾ ಟಕ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ 17 ವರ್ಷದೊಳಗಿನ ಅಂತರ ಶಾಲಾ ಬಾಲಕರ ಫುಟ್ ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಸ್ಪಧರ್ೆಯಲ್ಲಿ ಬೇರೆ ಬೇರೆ ಶಾಲೆಯ 18 ತಂಡಗಳು ಪಾಲ್ಗೊಂಡಿದ್ದವು. 

ಗೆಲುವಿನ ತಂಡದಲ್ಲಿ ಕ್ಯಾಪ್ಟನ್ ವೃಷಬ್ ಉಪಾದ್ಯೆ, ಮೋಹಕ ಮುತ್ತಲಮನಿ, ನಾಗಸಂತೋಷ ಪವಾರ್, ಆರ್ಯನ್ ಶೆಟ್ಟಿ, ಪ್ರತೀಕ್ ಬೊಮ್ಮಕ್ಕನವರ್, ಸುಮೀತ್ ಮಿಸ್ಕಿನ್, ದೇವಾಂಶ ವಸ್ತ್ರದ್, ಹರ್ಷವರ್ಧನ ಕುರ್ತಕೋಟಿ, ಗರ್ವಿತ್ ಸಿಂಗ್, ಪ್ರಭಂಜನ್ ಸಂಗಮ, ವಿನಾಯಕ ನಂದಿ, ಸಂತೋಷ ಜೂಲಕಟ್ಟಿ, ಜೈದ್, ವಸಿಷ್ಠ ಅಂಚಟಗೇರಿ, ವರುಣ್ ಚೀನಿವಾಲರ್ ಹಾಗೂ ದಿಶಾಂತ್ ಸೋಲಂಕಿ ಮತ್ತು ಉತ್ತಮ ಗೋಲ್ಕೀಪರ್ ಪ್ರಶಸ್ತಿಗೆ ತಂಡದ ಹರ್ಷವರ್ಧನ ಕುರ್ತಕೋಟಿ ಭಾಜನರಾಗಿದ್ದಾರೆ.

ವಿಜೇತ ತಂಡಕ್ಕೆ ಸಂಸ್ಥೆಯ ಕಾರ್ಯದಶರ್ಿ ಡಾ. ನ.ವಜ್ರಕುಮಾರ್, ವಿತ್ತಾಧಿಕಾರಿ ಡಾ. ಅಜಿತ್ಪ್ರಸಾದ, ಪ್ರಾಚಾರ್ಯ ಸಾಧನಾ.ಎಸ್ ಹಾಗೂ ಶಾಲೆಯ ದೈಹಿಕ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.