ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಒಕ್ಕಲಗೇರಿಯಲ್ಲಿ ತೋಂಟದ ಶ್ರೀಗಳಿಂದ ಜಾಗೃತಿ ಪಾದಯಾತ್ರೆ
J. Tontadarya Jatra Mahotsava Okkalageri organized a awareness walk by the monks of Tonta.
ಲೋಕದರ್ಶನ ವರದಿ
ಗದಗ 28 : ನಗರದ ಜ. ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ವ್ಯಸನಮುಕ್ತ ಸಮಾಜ ಜಾಗೃತಿಗಾಗಿ ನಗರದ ಒಕ್ಕಲಗೇರಿಯ ರಾಚೋಟೇಶ್ವರ ದೇವಸ್ಥಾನದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಓಣಿಯ ಪ್ರಮುಖ ರಸ್ತೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ಪೂಜ್ಯಶ್ರೀ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಜೋಳಿಗೆಯಲ್ಲಿ ಓಣಿಯ ನಾಗರಿಕರು ಮದ್ಯದ ಪೌಚ್‌ಗಳು, ಗುಟ್ಕಾ ಪಾಕೇಟ್‌ಗಳು ಹಾಗೂ ತಂಬಾಕು ಉತ್ಪನ್ನಗಳನ್ನು ಹಾಕಿ ಇನ್ಮುಂದೆ ದುಷ್ಚಟದಿಂದ ದೂರಾಗಿ ಹೊಸ ಬದುಕನ್ನು ಸಾಗಿಸುತ್ತೆವೆ ಎಂದು ಪ್ರಮಾಣ ಮಾಡಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸಿರಸಂಗಿ ಮಹಾಲಿಂಗೇಶ್ವರ ಶ್ರೀಮಠದ ಪೂಜ್ಯಶ್ರೀ ಬಸವಮಹಾಂತ ಸ್ವಾಮಿಗಳು, ಬೈರನಹಟ್ಟಿಯ ಪೂಜ್ಯಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಓಣಿಯ ಹಿರಿಯರಾದ ಕೊಟ್ರ್ಪ ಕಮತರ, ಎಂ.ಎಂ.ಹಿರೇಮಠ, ಅನಿಲ್ ಮೇಲಗೇರಿ, ಶಿವಕುಮಾರಗೌಡ ಪಾಟೀಲ, ಆಂಜನೇಯ ಕಟಗಿ, ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ವಿನಾಯಕ ಮಾನ್ವಿ, ಕಾರ್ಯದರ್ಶಿಗಳಾದ ಚೇತನ ಅಂಗಡಿ, ಜಾತ್ರಾ ಮಹೋತ್ಸವದ ಉಪಾಧ್ಯಕ್ಷರಾದ ಶಿವಯ್ಯ ನಾಲ್ವತ್‌ವಾಡಮಠ, ಸುಭಾಷ ಚಂದ್ರ್ಪನವರ, ಎಂ.ಜಿ. ಹೂಗಾರ, ಚಂದ್ರಶೇಖರ ರಾಜೂರ, ಎಸ್.ವಿ. ಪವಾಡಿಗೌಡ್ರ, ಉಮೇಶಗೌಡ್ರ ಪಾಟೀಲ, ಯಲ್ಲೋಸಾ ಹಬೀಬ, ವಿರುಪಾಕ್ಷಪ್ಪ ದಲಾಲಿ, ಈರಣ್ಣ ಗಡಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪಾದಯಾತ್ರೆಯ ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿಯ ಚಿತ್ತಾರ ಬಿಡಿಸಿ, ಪುಷ್ಟಗಳನ್ನು ಹರಡಿ ಪಾದಯಾತ್ರೆಯನ್ನು ಬರಮಾಡಿಕೊಂಡರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 