ರೋಮ್, ಮೇ 9, ಇಟಲಿಯಲ್ಲಿ ಕರೋನ ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 30,ಸಾವಿರ ದಾಟಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯವು ಪ್ರಕಟಿಸಿದ ಇತ್ತೀಚಿನ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ.ಶುಕ್ರವಾರ 243 ಹೊಸ ಸಾವು- ನೋವುಗಳು ವರದಿಯಾಗಿದ್ದು, ಒಟ್ಟುಸೋಂಕಿತರ 30,201 ಕ್ಕೆ ಏರಿಕೆಯಾಗಿದೆ. ದೃ ಡಪಡಿಸಿದ ಪ್ರಕರಣಗಳ ದೈನಂದಿನ ಸಂಖ್ಯೆ 1,327 ಆಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 217,185 ಕ್ಕೆ ತಲುಪಿದೆ.ಇಟಲಿ ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಸಾವಿನ ಪ್ರಕರಣಕ್ಕೆ ಸಾಕ್ಷಿಯಾಗಿದೆ ಅಮೆರಿಕ ಮತ್ತು ಯುಕೆಯಲ್ಲಿ ಕ್ರಮವಾಗಿ 77,178 ಮತ್ತು 31,315 ಸಾವಿನ ಪ್ರಕರಣ ವರದಿಯಾಗಿದೆ. ಸಾಂಕ್ರಾಮಿಕ ರೋಗದ ತೀವ್ರತೆ ಕಡಿಮೆಯಾಗುತ್ತಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಐಎಸ್‌ಎಸ್) ಅಧ್ಯಕ್ಷ ಸಿಲ್ವಿಯೊ ಬ್ರೂಸಾಫೆರೊ ಹೇಳಿದ್ದಾರೆ.