ಭಾರತೀಯ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ: ಡಾ. ಅರುಣ ಇನಾಮದಾರ
It is the responsibility of all of us to preserve Indian heritage: Dr. Arun Inamdara
ವಿಜಯಪುರ, 02 : ಐದು ಸಾವಿರ ವರ್ಷಗಳ ಸುಧೀರ್ಘ ಇತಿಹಾಸವಿರುವ ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆ ಶ್ರೀಮಂತವಾದುದಾಗಿದೆ. ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ” ಎಂದು ಬಿ.ಎಲ್.ಡಿ.ಇ. ಡಿಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಇನಾಂದಾರ ಹೇಳಿದರು.
ಇಂಟ್ಯಾಚ್ ಮತ್ತು ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇದ್ರದ ಸಹಯೋಗದಲ್ಲಿ ಹಮ್ಮಿಕೊಂಡ ರಸಪ್ರಶ್ನೆ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಹಿರಿಯರು, ತ್ಯಾಗಿಗಳು, ಸಂತರು, ಯೋಗಿಗಳು ಬಿಟ್ಟು ಹೋಗಿರುವ ಸಾಂಸ್ಕೃತಿಕ ಪರಿಸರವು ಒಂದಾದರೆ. ಬೆಟ್ಟ, ಗುಡ್ಡ, ಕೊಳ್ಳ, ಸರೋವರ ಹೀಗೆ ಪ್ರಕೃತಿದತ್ತವಾಗಿ ಬಂದಿರುವ ಪರಿಸರ ಇನ್ನೊಂದೆಡೆ. ಇವು ಅಷ್ಟೇ ಅಲ್ಲದೆ ಸ್ಮಾರಕಗಳು, ವಾಸ್ತುಕಲೆ, ಶಿಲ್ಪಕಲೆ ಮತ್ತು ಚಿತ್ರಕಲೆ ಇಂತವುಗಳನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುವುದೇ ಭಾರತದ ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆ ಮತ್ತು ಕಲೆಯನ್ನು ಕಾಪಾಡಿಕೊಳ್ಳುವುದೇ ಇಂಟ್ಯಾಚ್‌ದ ಮುಖ್ಯ ಉದ್ದೇಶವಾಗಿದೆ. ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಪರಂಪರೆಯ ಅರಿವು ಮೂಡಿಸುವುದು ಅವಶ್ಯ” ಎಂದರು.
ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿಯವರು ಅಧ್ಯಕ್ಷತೆ ವಹಿಸಿದ್ದರು. ಸಹ ಸಂಚಾಲಕ ಡಾ. ವಿ.ಡಿ.ಐಹೊಳ್ಳಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ರಸಪ್ರಶ್ನೆ ಕಾರ‌್ಯಕ್ರಮ ನಡೆಸಿಕೊಟ್ಟರು. ಡಾ. ಸುಭಾಸ ಕನ್ನೂರ ಕಾರ‌್ಯಕ್ರಮ ನಿರೂಪಿಸಿದರು. 10 ಶಾಲೆಗಳ 86 ವಿದ್ಯಾರ್ಥಿಗಳು ರಸಪ್ರಶ್ನೆ ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಪೃಥ್ವಿ ಕಾರಾಜೀಣಗಿ ಮತ್ತು ಅನುಪ್ರಿಯಾ ಆರ್. ಕುಲಕರ್ಣಿ ಪ್ರಥಮ ಸ್ಥಾನ, ಗೀತಾಂಜಲಿ ಮಾದರಿ ಪ್ರೌಢಶಾಲೆಯ ಶಿಫ್ರಾ ಹಿರೇಮಠ ಮತ್ತು ನಿರಂಜನ ಮಠಪತಿ ದ್ವಿತೀಯ ಸ್ಥಾನ ಪಡೆದರು. ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸುನಂದಾ ಘಾಟಗೆ ಪ್ರಾರ್ಥಿಸಿದರು. ಕಾರ‌್ಯಕ್ರಮದಲ್ಲಿ ದಾಕ್ಷಾಯಣಿ ಬಿರಾದಾರ, ಆರ್.ಎಸ್.ಪಟ್ಟಣಶೆಟ್ಟಿ, ದಾನಮ್ಮ ಪಾಟೀಲ, ಶೀಲಾ ಮೋರಟಗಿ, ಇಸ್ಮಾಯಿಲ್ ಮುಳಸಾವಳಗಿ ಶ್ರೀಮತಿ ಆರ್.ಎನ್.ಮಸಳಿ, ಅನೀಲ ಪೋತೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ‌್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ‌್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 