ಬೆಳಗಾವಿ 09: ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಬಾಣಂತಿಯರು ಹಾಗೂ ನವಜಾತ ಶಿಶುಗಳು ಮೃತಪಡುತ್ತಿರುವುದು ವಿಪರ್ಯಾಸ. ಸರಕಾರ ಆಸ್ಪತ್ರೆಯ ಬಗ್ಗೆ ಕಳಕಳಿ ಇಲ್ಲ. ಈ ಕುರಿತು ಸದನದಲ್ಲಿ ಚರ್ಚೆ ಮಾಡುತ್ತೇವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಪ್ರತಿ ವರ್ಷ ಸಾವಾಗುತ್ತವೆ ಎಂಬ ಸಚಿವ ಗುಂಡೂರಾವ್ ಹೇಳಿಕೆಗೆ ನಾವು ರಾಜಕೀಯ ಮಾಡುತ್ತಿಲ್ಲ. ಸಚಿವರಾದವರು ಸರಕಾರಿ ಆಸ್ಪತ್ರೆಯ ಮೇಲೆ ಗಮನ ಹರಿಸಬೇಕು. ಸಾವು ನೋವು ಆದಾಗ ವಿಪಕ್ಷಗಳು ತಮ್ಮ ಜವಾಬ್ದಾರಿ ಮಾಡುತ್ತದೆ. ಈ ವಿಚಾರ ಗಂಭೀರವಾಗಿ ಪರಿಗಣಿಸಬೇಕಿತ್ತು ಎಂದು ಹೇಳಿದ್ದಾರೆ.
ಸರಕಾರಿ ಆಸ್ಪತ್ರೆಗಳ ಮೇಲೆ ರಾಜ್ಯ ಸರಕಾರದ ಹಿಡಿತ ಇಲ್ಲ :
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಸರಕಾರಿ ಆಸ್ಪತ್ರೆ ಹಾಗೂ ಇನ್ನಿತರರ ಇಲಾಖೆಯ ಮೇಲೆ ಕಂಟ್ರೋಲ್ ಇಲ್ಲ. ರಾಜ್ಯದಲ್ಲಿ ಗೊಂದಲದ ವಾತಾರಣ ಇದೆ. ಆಸ್ಪತ್ರೆಗಳು ಶವಗಾರವಾಗುತ್ತಿವೆ. ಸರಕಾರ ಆಸ್ಪತೆಗಳ ಬಗ್ಗೆ ಗಮನ ಕೊಟ್ಟಿಲ್ಲ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಚಲುವ ನಾರಾಯಣ ಸ್ವಾಮಿ ಹೇಳಿದರು.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರದ ದಾಹದಲ್ಲಿ ಏನೇಲ್ಲಾ ಭಷ್ಟಾಚಾರ ಮಾಡಬಹುದು ಎನ್ನುವುದರಲ್ಲಿ ಕಾಂಗ್ರೆಸಿಗರು ಮುಳುಗಿದ್ದಾರೆ. ಸರಕಾರಕ್ಕೆ ಆಸ್ಪತ್ರೆಯ ಬಗ್ಗೆ ಕಳಕಳಿ ಇಲ್ಲ. ಕಳಪೆ ಗುಣಮಟ್ಟದ ಓಷಧಿ ನೀಡಿರುವುದರಿಂದ ಬಾಣಂತಿಯರು ಹಾಗೂ ನವಜಾತ ಶಿಶುಗಳ ಮರಣವಾಗುತ್ತಿವೆ.. ಈ ಕುರಿತು ಅಧಿವೇಶನದಲ್ಲಿ ಬಿಜೆಪಿ ಧ್ವನಿ ಎತ್ತಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.