ವ್ಯಕ್ತಿಗಳಿಗೆ ಮಾನವೀಯ ನೆಲೆಯಲ್ಲಿ ಚಿಕಿತ್ಸೆಯನ್ನು ನೀಡುವದು ಅತ್ಯವಶ್ಯಕ
ಬೆಳಗಾವಿ 22: ಸುತ್ತಲಿನ ಸಮಸ್ಯೆ, ನೈತಿಕ ಮತ್ತು ಕಾನೂನು ಚೌಕಟ್ಟುಗಳು ಜಾಗತಿಕವಾಗಿ ಬದಲಾಗುತ್ತವೆಯಾದರೂ ಕೂಡ ಪರಿಕಲ್ಪನೆ, ಸಹಾನುಭೂತಿ, ಸ್ವಾಯತ್ತತೆ ಮತ್ತು ಜೀವನದ ಅಂತ್ಯದ ನಿರ್ಧಾರಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಮಾನವೀಯ ನೆಲೆಯಲ್ಲಿ ಚಿಕಿತ್ಸೆಯನ್ನು ನೀಡುವದು ಅತ್ಯವಶ್ಯಕ ಎಂದು ನ್ಯಾಯವಾದಿ ನೈನಾ ನೇರ್ಲಿ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಗೌರವಯುತ ಸಾವು ಹಾಗೂ ಜೀವಂತ ವಿಲ್ ಪರಿಕಲ್ಪನೆಯ ಅನುಷ್ಠಾನದ ಕುರಿತು ಉಪನ್ಯಾಸ ನೀಡಿದ ಅವರು, ಸೂಪ್ರೀಂ ಕೋರ್ಟ ತೀರ್ಿನಂತೆ ರಾಜ್ಯ ಸರಕಾರವು ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ವಿಶೇಷವಾಗಿ ಮಾರಕ ಕಾಯಿಲೆ ಅಥವಾ ಅಸಹನೀಯ ನೋವಿನಿಂದ ಬಳಲುತ್ತ ತೀವ್ರವಾದ ದೈಹಿಕ ವೇದನೆ ಅನುಭವಿಸುವ ಸಂದರ್ಭಗಳಲ್ಲಿ, ಅತ್ಯಂತ ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾನೂನು ಅನುವು ಮಾಡಿಕೊಡುತ್ತದೆ. ಇದು ದೈಹಿಕ ಸ್ವಾಯತ್ತತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ತತ್ವಗಳಿಗೆ ಅನುಗುಣವಾಗಿ ಜನರು ತಮ್ಮ ಇಚ್ಛೆಗೆ ವಿರುದ್ಧವಾಗಿ ದೀರ್ಘಕಾಲದ ನೋವು ಅಥವಾ ವೈದ್ಯಕೀಯ ಚಿಕಿತ್ಸೆಯಿಂದ ವಿಮುಕ್ತರಾಗುವದಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಅವರು ತಿಳಿಸಿದರು.
ವ್ಯಕ್ತಿಗಳು ತಮ್ಮ ಆರೋಗ್ಯ ರಕ್ಷಣೆಯ ಆದ್ಯತೆಗಳನ್ನು ಮುಂಚಿತವಾಗಿ ರೂಪಿಸಲು ಈ ಕಾನೂನು ಅನುವು ಮಾಡಿಕೊಡುತ್ತದೆ. ಅಲ್ಲದೇ ವಿಶೇಷವಾಗಿ ಜೀವ ಉಳಿಸಲು ಕೃತಕ ಜೀವಸಾಧಕಗಳ ಮೂಲಕ ಚಿಕಿತ್ಸೆ ನೀಡಲು ಅಸಮರ್ಥರಾಗಿದ್ದರೂ ಸಹ ಅವರ ಆಯ್ಕೆಗಳನ್ನು ಗೌರವಿಸಲಾಗುತ್ತದೆ ಎಂದರು.
ಐರಿಷ ಕವಿ ಸ್ಕರ್ ವೈಲ್ಡ್ ಅವರು "ಸಾವು ತುಂಬಾ ಸುಂದರವಾಗಿರಬೇಕು. ಮೃದುವಾದ ಭೂಮಿ ಮೇಲೆ ಮಲಗಿ, ತಲೆಯ ಮೇಲೆ ಹುಲ್ಲು ಕಡ್ಡಿಗಳನ್ನು ಬೀಸುತ್ತಾ ಮೌನವನ್ನು ಆಲಿಸಿ, ನಿನ್ನೆ ಮತ್ತು ನಾಳೆ ಇಲ್ಲದಿರುವುದು. ಸಮಯವನ್ನು ಮರೆತು, ಜೀವನವನ್ನು ಕ್ಷಮಿಸಿ, ಶಾಂತಿಯಿಂದ ಇರುವುದು!" ಎಂದು ಹೇಳಿದ್ದಾರೆ ಅದರಂತೆ ಈ ಕಾನೂನು ಜೀವರಕ್ಷಕ ಸಾಧನಗೌರವಯುತ
ಘನತೆಯಿಂದ ಸಾಯುವ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಅನುಷ್ಠಾನಕ್ಕೆ ತಂದು ಜೀವನದ ಅಂತ್ಯದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಕಾರ್ಯಗತಗೊಳಿಸಬೇಕು. ಈ ಪರಿಕಲ್ಪನೆಯ ಕುರಿತು ಆಸ್ಪತ್ರೆಗಳು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ, ಕ್ಲಿನಿಕಲ್ ಸೇವೆಗಳ ನಿರ್ದೇಶಕ ಡಾ. ಆರ್. ಬಿ. ನೆರ್ಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.