ದೇಶವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ನ್ಯಾ. ಸುರೇಶ

ಮೂಡಲಗಿ: ನಮ್ಮ ಇಂದಿನ ಸ್ವಾತಂತ್ರ್ಯ ಮತ್ತು ನೆಮ್ಮದಿಯ ಬದುಕಿನ ಹಿಂದೆ ಲಕ್ಷಾಂತರ ಜನರ ಹೊರಾಟ ಮತ್ತು ತ್ಯಾಗಗಳೂ ಇವೆ. ಹಾಗಾಗಿ ದೇಶವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು. ಬಡತನ, ಅನಕ್ಷರತೆ ಮತ್ತು ಅಸಮಾನತೆಗಳಿಂದ ಮುಕ್ತಿಯೆ ನಿಜವಾದ ಸ್ವಾತಂತ್ರ್ಯ ಎಂದು ನ್ಯಾಯಾಧೀಶ ಸುರೇಶ ಎಸ್.ಎನ್. ಹೇಳಿದರು. 

ಪಟ್ಟಣದ ದಿವಾನಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ಆವರಣದಲ್ಲಿ ಧ್ವಜಾರೊಹಣವನ್ನು ನೇರವೇರಿಸಿ ಮಾತನಾಡಿದರು. 

ಈ ಸಂಧರ್ಭದಲ್ಲಿ ಕೆ.ಪಿ ಮಗದುಮ್, ಎಸ್.ವಾಯ್. ಹೊಸಟ್ಟಿ, ಎಲ್.ವಾಯ್.ಅಡಿಗುಡಿ,ಕು. ಎ.ಎಚ್. ಗೊಡ್ಯಾಗೋಳ, ಎಮ್.ಆಯ್.ಬಡಿಗೇರ,ಶಿಲ್ಪಾ ಗೊಡಿಗೌಡರ ನ್ಯಾಯಲಯದ ಸಿಬ್ಬಂದಿ ವರ್ಗ, ಮಂಜುನಾಥ ಸೈನಿಕ ತರಬೇತಿಯ ಶಿಬಿರಾರ್ಥಿಗಳು ಹಾಗೂ ಪೋಲಿಸ್ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.