ಲೋಕದರ್ಶನ ವರದಿ
ಬೈಲಹೊಂಗಲ 04: ಮಾನವನ ಜೀವನದ ಪ್ರತಿಯೊಂದು ಹಂತದಲ್ಲಿ ರಕ್ತದ ಅವಶ್ಯಕತೆ ಇರುವದರಿಂದ, ರಕ್ತದಾನ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ.ಬಿ. ತುರಮರಿ ಹೇಳಿದರು.
ಅವರು ಬುಧವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಹಾಗೂ ಬಿಮ್ಸ್ ಆಸ್ಪತ್ರೆ ಬೆಳಗಾವಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಉಧ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ಬಿ.ಕೆ.ಮದವಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕ ಯುವತಿಯರು ಆಗಾಗ ರಕ್ತದಾನ ಮಾಡುವ ಹವ್ಯಾಸ ಬೆಳಿಸಿಕೊಳ್ಳಬೇಕು ಹಾಗೂ ರಕ್ತದಾನದಿಂದ ಸಾಮಾಜಿಕ ಮತ್ತು ವ್ಯಯಕ್ತಿಕವಾಗಿ ಆಗುವ ಲಾಭಗಳ ಬಗ್ಗೆ ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಬಸವರಾಜ ಕುಡಸೋಮಣ್ಣವರ ಮಿನಾಕ್ಷಿ ಕುಲಕಣರ್ಿ ಸಮಾರಂಭ ಉಪಸ್ಥಿತರಿದ್ದರು ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಿ.ಎಸ್.ಹಾಡಕರ, ಡಾ. ಅವಿನಾಶ, ಡಾ. ನೇಹಾ ಶಾನಭಾಗ ಹಾಗೂ ಡಾ. ರೂಪಾ ಕೆ.ಎನ್ ಉಪನ್ಯಾಸಕರು, ವಿದ್ಯಾರ್ಥಿನಿಯರು ಇದ್ದರು.
ಡಾ. ಎಸ್.ಎಸ್.ಭಗವತಿ ಸ್ವಾಗತಿಸಿದರು, ಡಾ.ವಿಶಾಲಾಕ್ಷಿ ಹೊನ್ನಾಕಟ್ಟಿ ನಿರೂಪಿಸಿದರು. ಹೇಮಲತಾ ತೋರಗಲ್ಲ ವಂದಿಸಿದರು.