ಮನುಷ್ಯನ ಬದುಕಿನ ಅವಧಿ ಮುಖ್ಯವಲ್ಲ, ಬದುಕಿನ ರೀತಿ ಮುಖ್ಯ: ಒಡ್ಡೀನ

ಮನುಷ್ಯನ ಬದುಕಿನ ಅವಧಿ ಮುಖ್ಯವಲ್ಲ, ಬದುಕಿನ ರೀತಿ ಮುಖ್ಯ: ಒಡ್ಡೀನ It's not the length of a person's life that matters, it's the way they live it that matters: Oddee

ಲೋಕದರ್ಶನ ವರದಿ 

ಧಾರವಾಡ 30: ಮನುಷ್ಯನ ಬದುಕಿನ ಅವಧಿ ಮುಖ್ಯವಲ್ಲ, ಬದುಕಿನ ರೀತಿ ಮುಖ್ಯ. ಇನ್ನೊಬ್ಬರ ಒಳಿತಿಗಾಗಿ ಬಾಳುವುದೇ ಸಾರ್ಥಕ ಬದುಕು ಎಂದು ಕ.ವಿ.ವ.ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು. 

ಅವರು ಕಲ್ಯಾಣನಗರ ಶ್ರೀ ಸಿದ್ಧರಾಮೇಶ್ವರ ಪ್ರೌಢಶಾಲೆಯಲ್ಲಿ ಚಿಗಟೇರಿ ಕುಟುಂಬದವರು ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ದಾಸೋಹ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು.  

ಪ್ರೊ. ಲಿಂ. ವೀರಬಸಣ್ಣ ಚಿಗಟೇರಿ ಹಾಗೂ ಆನಂದ ಚಿಗಟೇರಿ ಇರ್ವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ ಬಡವಿದ್ಯಾರ್ಥಿಗಳ ಶ್ರೇಯೋಭಿಲಾಷೆಗಾಗಿ ಶ್ರಮಿಸಿದವರಾಗಿದ್ದರು. ದಾನ, ಧರ್ಮ, ಪರೋಪಕಾರದ ಇವರು ಎಲ್ಲರಂತೆ ಬದುಕದೆ ಎಲ್ಲರಿಗಾಗಿ ಬದುಕಿದ ಸಾರ್ಥಕ ಜೀವಿಗಳು. ಆನಂದ ಚಿಗಟೇರಿ ಓರ್ವ ಪ್ರತಿಭಾವಂತ ಪ್ರಾಧ್ಯಾಪಕರಾಗಿದ್ದರಲ್ಲದೆ ಕಿರಿಯ ವಯಸ್ಸಿನಲ್ಲಿಯೆ ಹಿರಿಯ ಸಾಧನೆ ಮಾಡಿದವರಾಗಿದ್ದರು. ಚಿಗಟೇರಿ ಕುಟುಂಬದವರು ಇರ್ವರ ಸ್ಮರಣೆಯಲ್ಲಿ ಪ್ರತಿವರ್ಷ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸುತ್ತಿರುವುದು ಅಭಿನಂದನೀಯವಾದದ್ದು ಎಂದರು.  

ನಿವೃತ್ತ ಪ್ರಾಧ್ಯಾಪಕ ಈಶಣ್ಣ ಮಾತನಾಡಿ, ಲಿಂ. ವೀರಬಸಣ್ಣ ಮತ್ತು ಆನಂದ ಚಿಗಟೇರಿ ಇರ್ವರೂ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತವರು. ವಿದ್ಯಾರ್ಥಿಗಳು ಇವರಂತೆ ಸಾಧಕರಾಗಬೇಕು. ಶಿಸ್ತು, ಸಮಯಪ್ರಜ್ಞೆಯೊಂದಿಗೆ ಓದಿ ವಿದ್ಯಾ ಸಂಪನ್ನರಾಗಬೇಕೆಂದು ಹೇಳಿದರು.  

ವೇದಿಕೆಯಲ್ಲಿದ್ದ ಶಾರದಾ ಚಿಗಟೇರಿ, ಕ.ವಿ.ವ.ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯೆ ಡಾ. ಶೈಲಜಾ ಅಮರಶೆಟ್ಟಿ ಮಾತನಾಡಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ನಾಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಧು ಕುರುಬಗಟ್ಟಿ ನಿರೂಪಿಸಿದರು. ನಂದಿತಾ ಪರಿಚಯಿಸಿದರು. ಲಕ್ಷ್ಮಿ ಕೆ. ವಂದಿಸಿದರು.  

ಲಿಂ. ವೀರಬಸಣ್ಣ ಮತ್ತು ಆನಂದ ಚಿಗಟೇರಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು.  

ಕಾರ್ಯಕ್ರಮದಲ್ಲಿ ಡಾ. ಅರುಣಾ ಹಳ್ಳಿಕೇರಿ ನಿರ್ಮಲಾ ಚಿಗಟೇರಿ, ಮಂಗಳಾ ಚಿಗಟೇರಿ, ಕವಿತಾ ಬಳ್ಳಾರಿ, ರಾಜೇಶ್ವರಿ ಚನ್ನೋಜಿ, ಮಮತಾ ಹುಲ್ಲೂರ, ಲಕ್ಷ್ಮಿ ಬಿರಾದಾರ, ರವಿ ಮಡಿವಾಳರ, ಸೇರಿದಂತೆ ಅನೇಕರಿದ್ದರು.