ಜೀವನದಲ್ಲಿ ಉತ್ಸಾಹಕ ಬದುಕು ಮುಖ್ಯ: ಶಬ್ಬೀರ ಡಾಂಗೆ

It's important to live an enthusiastic life: Shabbir Dange

ಮಹಾಲಿಂಗಪುರ 17: ಜೀವನದಲ್ಲಿ ಒಳ್ಳೆಯ ಕಾರ್ಯ ಹಾಗೂ ಜೀವನೋತ್ಸಾಹ ಮುಖ್ಯ. ಜಾನತನದ ಜೊತೆಗೆ ಕಲೆ ಅನುಭವ ಇರಬೇಕು. ಎಂದು ಜಾನಪದ ಜಾಣ, ಕಲಾವಿದ ಶ್ರೀ ಶಬ್ಬೀರ ಡಾಂಗೆ ಹೇಳಿದರು. 

ಸ್ಥಳೀಯ ಕೆಎಎಲ್‌ಇ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿವೃಂದ ಮತ್ತು ಸಂಸ್ಕೃತಿಕ ವಿಭಾಗದ ವತಿಯಿಂದ ನಡೆದ ಸಂಸ್ಕೃತಿಕ ಸಂಭ್ರಮ 2025ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜೀವನದಲ್ಲಿ ಉತ್ಸಾಹದ ಬದುಕು ಜೊತೆಗೆ ಪ್ರೀತಿ ವಾತ್ಸಲ್ಯವಿರಬೇಕು. ತಂದೆ ತಾಯಿಯ ಪ್ರೀತಿಯ ಪಾತ್ರ ಬಹುಮುಖ್ಯವಾತದು ಒಳ್ಳೆಯ ಹೆಸರಿನೊಂದಿಗೆ ದೊಡ್ಡ ದೊಡ್ಡ ಹುದ್ದೆಯಲ್ಲಿ ವಿದ್ಯಾರ್ಥಿಗಳು ಬರಬೇಕು ಎಂದರು. 

ನಂತರ ಪ್ರಾಂಶುಪಾಲರಾದ ಕೆ ಎಂ ಅವರಾದಿ ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿಗಳು ಎಲ್ಲ ರಂಗಗಳಲ್ಲಿ ಹೆಸರು ಮಾಡಬೇಕು ಜೊತೆಗೆ ನಮ್ಮ ಕಾಲೇಜಿಗೆ ವೀರಾಗ್ರಣಿ ಪ್ರಶಸ್ತಿ ಸಲ್ಲುವಲ್ಲಿ ವಿದ್ಯಾರ್ಥಿಗಳ ಪಾತ್ರ ಮೆಚ್ಚುವಂತಹದು. ಚೆನ್ನಾಗಿ ಓದಿ ಉತ್ತಮ ಅವಕಾಶ ಪಡೆದು ಗೌರವಿತವಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.  

ಅದ್ದೂರಿ ಸಾಂಸ್ಕೃತಿಕ ಸಂಭ್ರಮ; 

ಮೂರು ದಿನಗಳ ಕಾಲ ನಡೆದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿನಿಯರು ಹಲವಾರು ಕ್ರೀಡಾ ಮತ್ತು ಸಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.ಕೊನೆಯ ದಿನ ಹಳ್ಳಿಯ ಸೊಬಗಣ್ಣ ಕಾಲೇಜಿನಲ್ಲಿ ತಂದರು.ಎತ್ತಿನಬಂಡಿ,ಕುದುರೆ ,ಬ್ಯಾಂಜ್ ಬಾರಿಸಿಕೊಂಡು ಕಾಲೇಜಿನಿಂದ ಬಸವೇಶ್ವರ ಸರ್ಕಲ್, ಡಬಲ್ ರೋಡ್ ನಲ್ಲಿ ಮೆರವಣಿಗೆ ಮೂಲಕ ತಮ್ಮ ಸಂಭ್ರಮವನ್ನು ಮೆರೆದರು. ನಂತರ ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರು. ಮುಖ್ಯ ಅತಿಥಿಗಳಿಗೆ ಸನ್ಮಾನ ನಡೆಯಿತು.ನಂತರ ಜಾನಪದ ಹಾಡಿನ ಸುರಿಮಳೆಯ ಜರುಗಿತು.  

ಈ ಸಂದರ್ಭದಲ್ಲಿ ಎಸ್ ಐ ಕುಂದಗೋಳ, ಎ ಬಿ ಅಂಗಡಿ, ಎಸ್ ಬಿ ಹುದ್ದಾರ, ಎಲ ಬಿ ತುಪ್ಪದ,ಬಿ ಎಂ ಅರಕೇರಿ,ಡಾ. ಎಸ್‌.ಡಿ ಸೋರಗಾಠ,ಸಿ ಎಂ ಐಗಳಿ,ಟಿ.ಟ ಡಿ ಡಂಗಿ, ಕು.ಎಸ್ ಟಿ ದಿವಾನಜಿ,ಆರ್ ಎಂ ಕಾಕಡೆ, ಪತ್ರಕರ್ತ ಮಹೇಶ ಮಣ್ಣಯ್ಯನವರಮಠ,ಸೇರಿದಂತೆ ಎಲ್ಲ ಉಪನ್ಯಾಸಕರು ಜೊತೆಗೆ ವಿದ್ಯಾರ್ಥಿವೃಂದ ಭಾಗವಹಿಸಿದ್ದರು.