ಇಸ್ರೇಲ್ ವಾಯುದಾಳಿ: ಬಂಕರ್ನಲ್ಲಿ 500 ಮಿಲಿಯನ್ ಡಾಲರ್ ನಗದು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆ
ಟೆಲ್ ಅವೀವ್ 22: ಇಸ್ರೇಲ್ ವಾಯುದಾಳಿ ನಡೆಸಿದ ಅಲ್ ಸಹೇಲ್ ಆಸ್ಪತ್ರೆಯ ಕೆಳಗಿರುವ ಬಂಕರ್ನಲ್ಲಿ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.
ಈ ಬಂಕರ್ನಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅಡಗಿದ್ದ.
ಈ ದಾಳಿಯ ಉದ್ದೇಶವು ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ತನ್ನ ಕಾರ್ಯಾಚರಣೆಗಳಿಗೆ ಧನಸಹಾಯ ನೀಡುವ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಾಗಿತ್ತು ಎಂದು ಇಸ್ರೇಲ್ ಬಹಿರಂಗಪಡಿಸಿದೆ.