ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು

ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು Irrigation facilities will be provided in the 2nd phase of the lift irrigation project

              ವಿಜಯಪುರ  23: ಸಾರವಾಡ ಮತ್ತು ಸುತ್ತಮುತ್ತಲಿನ ತೊನಶ್ಯಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಹಳ್ಳಿ, ಅತಾಲಟ್ಟಿ, ತೊರವಿ ಮುಂತಾದ ಗ್ರಾಮಗಳಿಗೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಇಂದು ಮಂಗಳವಾರ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ರೂ. 10 ಕೋ. ಅನುದಾನದಲ್ಲಿ ಸಾರವಾಡ - ಬಬಲೇಶ್ವರ ರಸ್ತೆಯ ಹಲಗಣಿ ಕ್ರಾಸ್ ವರೆಗೆ ಸುಧಾರಣೆ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ರೂ. 2 ಕೋ. ಅನುದಾನದಲ್ಲಿ ಸಾರವಾಡ ಹಿ ತೊನಶ್ಯಾಳ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ರೂ. 5 ಕೋ. ಅನುದಾನದಲ್ಲಿ ಸಾರವಾಡ - ದದಾಮಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ, ರೂ.2 ಕೋ. ವೆಚ್ಚದ ಡೋಣಿ ನದಿಯಲ್ಲಿರುವ ಹೂಳೆತ್ತುವ ಕಾರ್ಯಕ್ಕೆ ಚಾಲನೆ,

               ರೂ. 1 ಕೋ. ವೆಚ್ಚದಲ್ಲಿ ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ, ಎಂ.ಪಿ.ಎಸ್ ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಬಾಕಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಮಾಡಲಾಗುವುದು.  ಬಬಲೇಶ್ವರ ಮತಕ್ಷೇತ್ರದಲ್ಲಿ ಸಾರವಾಡ ಗ್ರಾಮ ಹೃದಯದಲ್ಲಿದೆ.  ಈ ಗ್ರಾಮಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ.  ಈ ಗ್ರಾಮಸ್ಥರ ಉಪಕಾರ ನನ್ನ ಮೇಲೆ ಇದೆ.  2018ರಲ್ಲಿ ಪ್ರದಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ಇಲ್ಲಿಗೆ ಬಂದು ನನ್ನನ್ನು ಸೋಲಿಸಲು ಭರ್ಜರಿ ಪ್ರಚಾರ ಮಾಡಿದರೂ ಸಾರವಾಡ ಗ್ರಾಮಸ್ಥರು ನನಗೆ 1600 ಮತಗಳ ಲೀಡ್ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.ಸಾರವಾಡ ಈಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಹಂತದಲ್ಲಿ ತಲಾ ರೂ. 50 ಲಕ್ಷದಂತೆ ಒಟ್ಟು ರೂ. 1 ಕೋ. ಅನುದಾನ ನೀಡುತ್ತೇನೆ.  ಮತಕ್ಷೇತ್ರದ 100 ಸರಕಾರಿ ಶಾಲೆಗಳ ಪೈಕಿ ಈಗಾಗಲೇ 58 ಶಾಲೆಗಳಲ್ಲಿ ಕ್ರೀಡಾ ಸಲಕರಣೆಗನ್ನು ಅಳವಡಿಸಲಾಗಿದೆ.  

                ಸಾರವಾಡದಲ್ಲಿ ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್‌.ಆರ್ ಅನುದಾನದಲ್ಲಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಮಾಡಲಾಗುವುದು.  ಬಾಲಕಿಯರ ಮತ್ತು ಉರ್ದು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು.  ಪ್ರಗತಿಪಥ ಯೋಜನೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ.  ಸಾರವಾಡದಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣ, ಡೋಣಿ ಸೇತುವೆ ಅಗಲೀಕರಣ ಮಾಡಲಾಗುವುದು.  ಗ್ರಾಮದಲ್ಲಿ ಮೂರು ಎಕರೆಯಲ್ಲಿ ಸುಸಜ್ಜಿತವಾಗಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ 123 ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು.  ದದಾಮಟ್ಟಿ- ಜುಮನಾಳ ಕ್ರಾಸ್ ರಸ್ತೆ ಅಭಿವೃದ್ಧಿ, ಬಸ್ ನಿಲ್ದಾಣ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಾಡಲಾಗುವುದು.  ಡೋಣಿ ನದಿ ಹೂಳೆತ್ತುವ ಯೋಜನೆ ಪರಿಷ್ಕೃತ ಯೋಜನೆಯನ್ನು ಕೇಂದ್ರ ಸರಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ.  ಒಂದು ವರ್ಷದೊಳಗೆ ಸಾರವಾಡ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ.  ಜಿಲ್ಲೆಗೆ ಐದಾರು ಕೈಗಾರಿಕೆಗಳು ಇಲ್ಲಿಗೆ ಬರಲಿವೆ. 

                 ವೈಜ್ಞಾನಿಕ ಕೃಷಿ ಕೈಗೊಳ್ಳಲು ಅಕ್ಷಯ ಕಲ್ಪ ಸಂಘಟನೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಹೈನುಗಾರಿಕೆ ಉತ್ತೇಜನ ನೀಡಲಾಗುವುದು ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಬಬಲೇಶ್ವರ ಮತಕ್ಷೇತ್ರ ರಾಜ್ಯದ 224 ಮತಕ್ಷೇತ್ರಗಳಲ್ಲಿ ಜನಪ್ರೀಯ ಮತ್ತು ಜನಾನುರಾಗಿಯಾಗಿದೆ.  ಇದಕ್ಕೆ ಸಚಿವ ಎಂ. ಬಿ. ಪಾಟೀಲ ಅವರು ಕಾರಣ.  ಅಭಿವೃದ್ಧಿಯ ಮೂಲಕ ಜನರಲ್ಲಿ ಮನಪರಿವರ್ತನೆ ಮಾಡಿದ್ದಾರೆ.  ಜಾತ್ಯತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ.  ತಾಯಿ ಹೃದಯದ ಜನನಾಯಕರಾಗಿದ್ದಾರೆ ಎಂದು ಹೇಳಿದರು.ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್‌. ಪಾಟೀಲ ಮಾತನಾಡಿ, ಕೆರೆ ತುಂಬುವ ಯೋಜನೆಯಿಂದ ನೀರಾವರಿ ಪ್ರಾರಂಭಿಸಿದ ಸಚಿವರು ಕೃಷ್ಣೆಯನ್ನು ಬಸವನಾಡಿಗೆ ತಂದು ಬರದ ನಾಡನ್ನು ಹಸಿರಿ ಬೀಡನ್ನಾಗಿ ಮಾಡಿದ್ದಾರೆ. ಅವರನ್ನು ಶಾಸಕರಾಗಿ ಪಡೆದ ಬಬಲೇಶ್ವರ ಮತಕ್ಷೇತ್ರದ ಜನ ಧನ್ಯರು.  ಸಿ.ಎಸ್‌.ಆರ್ ಅನುದಾನದ ಮೂಲಕ ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.

                    ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿ, ನೀರಿಲ್ಲದ ನಮ್ಮ ಭಾಗವನ್ನು ಸಚಿವರು ನೀರಾವರಿ ಮೂಲಕ ನಂದನವನ ಮಾಡಿ ನಮ್ಮ ಬಾಳನ್ನು ಬಂಗಾರವಾಗಿ ಮಾಡಿದ್ದಾರೆ.  ಈಗ ಕೈಗಾರಿಕೆ ಸಚಿವರಾಗಿ ಉದ್ಯೋಗ ಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು.ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ರಾಜಕೀಯ ಜೀವನದಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸಿದ ನಾಯಕರಾಗಿದ್ದಾರೆ.  ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಜನರು ವಿಜಯಪುರದಲ್ಲಿ ಬಂದು ನೆಲೆಸುತ್ತಿದ್ದಾರೆ ಎಂದು ಹೇಳಿದರು.ರೈತ ಕಂಟೆಪ್ಪ ಕಣಬೂರ ಮಾತನಾಡಿ, ಜನರ ಶ್ರೇಯೋಭಿವೃದ್ಧಿಗಾಗಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯ ವಾಲಿ ಸಚಿವ ಎಂ. ಬಿ. ಪಾಟೀಲ ಅವರ ಕುರಿತು ಸ್ವರಚಿತ ಕವನ ವಾಚಿಸಿದರು.

                 ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ  ಸೊಕ್ಕೆ ಅತಿಥಿಮಠದ ಶ್ರೀ ಜಸಾರಂಗಪ್ಪಯ್ಯ ಮಹಾಸ್ವಾಮಿಗಳು, ಸಾರವಾಡ ಹಿರೇಮಠ ಶ್ರೀ ರೇಣುಕಸ್ವಾಮಿಗಳು ಹಿರೇಮಠ, ಬಬಲೇಶ್ವರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಸದಾಶಿವ ಚಿಕರೆಡ್ಡಿ, ಶರಣಪ್ಪ ಬಿದರಿ, ಈಶ್ವರ ಇನಾಮದಾರ, ಡಾ. ಗಂಗಾಧರ ಸಂಬಣ್ಣಿ, ಗ್ರಾ. ಪಂ ಅಧ್ಯಕ್ಷ ಎಂ. ಎಸ್ ಪಾಟೀಲ, ಈಶ್ವರ​‍್ಪ ಚಿಕರೆಡ್ಡಿ, ಜಯಗೌಡ ಪಾಟೀಲ, ಶಶಿಧರ ಬಿದರಿ, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿ. ಎಸ್‌. ಪೋಲಿಸಪಾಟೀಲ, ಗದಿಗೆಪ್ಪ ಕಲಾದಗಿ, ಸಾರವಾಡ, ದದಾಮಟ್ಟಿ, ಕಣಮುಚನಾಳ ಗ್ರಾಮಸ್ಥರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.   ವಿಜಯಪುರ ಜಿಲ್ಲೆಯ ಬಬಲೇಶ್ವರ ತಾ1ಲೂಕಿನ ಸಾರವಾಡ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸಚಿವ ಎಂ. ಬಿ. ಪಾಟೀಲ ಅವರು ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿದರು. 

                  ಈ ಸಂದರ್ಭದಲ್ಲಿ   ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ  ಸೊಕ್ಕೆ ಅತಿಥಿಮಠದ ಶ್ರೀ ಜಸಾರಂಗಪ್ಪಯ್ಯ ಮಹಾಸ್ವಾಮಿಗಳು, ಸಾರವಾಡ ಹಿರೇಮಠ ಶ್ರೀ ರೇಣುಕಸ್ವಾಮಿಗಳು ಹಿರೇಮಠ,ಮುಖಂಡರಾದ ಈರಗೊಂಡ ಬಿರಾದಾರ, ಸದಾಶಿವ ಚಿಕರೆಡ್ಡಿ, ಶರಣಪ್ಪ ಬಿದರಿ, ಈಶ್ವರ ಇನಾಮದಾರ, ಡಾ. ಗಂಗಾಧರ ಸಂಬಣ್ಣಿ, ಗ್ರಾ. ಪಂ ಅಧ್ಯಕ್ಷ ಎಂ. ಎಸ್ ಪಾಟೀಲ, ಈಶ್ವರ​‍್ಪ ಚಿಕರೆಡ್ಡಿ ಮುಂತಾದವರು  ಮಹಿಳೆಯರು ಉಪಸ್ಥಿತರಿದ್ದರು.   3 ಂಟಿಜ 4 ಒಟಿಣಜಡಿ ಒಃಕ ಖಚಿಡಿಚಿತಿಚಿಜ ಃಣಟಠಿಣರಿಜ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾ1ಲೂಕಿನ ಸಾರವಾಡ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸಚಿವ ಎಂ. ಬಿ. ಪಾಟೀಲ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.  ಈ ಸಂದರ್ಭದಲ್ಲಿ   ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ  ಸೊಕ್ಕೆ ಅತಿಥಿಮಠದ ಶ್ರೀ ಜಸಾರಂಗಪ್ಪಯ್ಯ ಮಹಾಸ್ವಾಮಿಗಳು, ಸಾರವಾಡ ಹಿರೇಮಠ ಶ್ರೀ ರೇಣುಕಸ್ವಾಮಿಗಳು ಹಿರೇಮಠ,ಮುಖಂಡರಾದ ಈರಗೊಂಡ ಬಿರಾದಾರ, ಸದಾಶಿವ ಚಿಕರೆಡ್ಡಿ, ಶರಣಪ್ಪ ಬಿದರಿ, ಈಶ್ವರ ಇನಾಮದಾರ, ಡಾ. ಗಂಗಾಧರ ಸಂಬಣ್ಣಿ, ಗ್ರಾ. ಪಂ ಅಧ್ಯಕ್ಷ ಎಂ. ಎಸ್ ಪಾಟೀಲ, ಈಶ್ವರ​‍್ಪ ಚಿಕರೆಡ್ಡಿ ಮುಂತಾದವರು  ಮಹಿಳೆಯರು ಉಪಸ್ಥಿತರಿದ್ದರು.