ನವದೆಹಲಿ, ಆ 24 ಮಾಜಿ ವಿತ್ತ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಅತ್ಯಂತ ಕಠಿಣವಾದ ಜವಾಬ್ದಾರಿಯನ್ನು ಸಮತೋಲನ ಮತ್ತು ಉತ್ಸಾಹದಿಂದ ನಿರ್ವಹಿಸುವ ವಿಶಿಷ್ಟ ಸಾಮಥ್ರ್ಯವನ್ನು ಜೇಟ್ಲಿ ಹೊಂದಿದ್ದರು ಅವರ ನಿಧನದಿಂದ ಸಾರ್ವಜನಿಕ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಅವರ ಕುಟುಂಬ ವರ್ಗ ಹಾಗೂ ಸಹವತರ್ಿಗಳಿಗೆ ಸಂತಾಪವಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ
ಅದ್ಭುತ ವಕೀಲ, ಸಂಸದ ಮತ್ತು ಪ್ರಖ್ಯಾತ ಸಚಿವರಾಗಿ ಅರುಣ್ ಜೇಟ್ಲಿ ರಾಷ್ಟ್ರ ನಿಮರ್ಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ
ಆತ್ಮೀಯ ಗೆಳೆಯ ಹಾಗೂ ಅತ್ಯಂತ ಸನಿಹದ ಸಹವತರ್ಿಯಾಗಿದ್ದ ಜೇಟ್ಲಿ ನಿಧನಕ್ಕೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ
ಅವರ ನಿಧನದಿಂದ ದೇಶಕ್ಕೆ ಹಾಗೂ ವೈಯಕ್ತಿಕವಾಗಿ ಅಪಾರ ನಷ್ಟವಾಗಿದ್ದು, ಸಂತಾಪವನ್ನು ಸೂಚಿಸಲು ಯಾವುದೇ ಪದಗಳು ತೋಚುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ
ದೇಶದಲ್ಲಿ ಕ್ರಾಂತಿಕಾರಿ ಜಿಎಸ್ ಟಿ ಆಡಳಿತವನ್ನು ರೂಪಿಸುವಲ್ಲಿ ರಾಜಕೀಯ ಒಮ್ಮತವನ್ನು ತರುವಲ್ಲಿ ಜೇಟ್ಲಿ ತೀವ್ರವಾಗಿ ಶ್ರಮಿಸಿದರು ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಯನ್ನೂ ಸಹ ಪಡೆದಿದ್ದರು ಎಂದಿರುವ ವೆಂಕಯ್ಯ ನಾಯ್ಡು, ಅತ್ಯುನ್ನತ ಬುದ್ಧಿಜೀವಿ, ಸಮರ್ಥ ಆಡಳಿತಗಾರ ಮತ್ತು ಸಮಗ್ರತೆಯ ವ್ಯಕ್ತಿತ್ವ ಹೊಂದಿದ್ದ ಜೇಟ್ಲಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮುಖ ಖಾತೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ತಮ್ಮನ್ನು ಗುರುತಿಸಿಕೊಂಡರು ಎಂದು ತಿಳಿಸಿದ್ದಾರೆ.