ಚಿನ್ನಾಭರಣ ದೋಚಿದ ಪರಾರಿಯಾಗಿದ್ದ ಅಂತರಾಜ್ಯ ಖದೀಮರ ಬಂಧನ
Interstate smuggler who stole gold jewellery arrested
ಬೆಳಗಾವಿ, 14 : ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಅಂತರರಾಜ್ಯ ಖದೀಮರನ್ನು ತಿಲಕವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಲಕ್ಷಾಂತರ ರೂ.ಗಳ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ನಾಗರಾಜ ಬಸಪ್ಪ ಹರಣಿಶಿಕಾರಿ (19), ಮನ್ ದೀಪಕ ರಾವುತ, (22) ಈ ಇಬ್ಬರು ಖದೀಮರು ಬಂಧಿತರಾಗಿದ್ದಾರೆ. ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನು ಬಿದ್ದ ತಿಲಕವಾಡಿ ಪೊಲೀಸರು ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ 9,15,000 ರೂ. ಮೌಲ್ಯದ 80.36 ಗ್ರಾಂ ಚಿನ್ನಾಭರಣ, 50 ಸಾವಿರ ಮೌಲ್ಯದ ಬೈಕ್, 60 ಸಾವಿರ ರೂ. ಮೌಲ್ಯದ 200 ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 10,25,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ತನಿಖೆ ನಡೆಸಿದ ಖಾಕಿ ಪಡೆ, ನಗರ ವಿವಿಧ ಕಡೆ ಚಿನ್ನಾಭರಣ ದೋಚಿರುವುದಾಗಿ ಕಿಡಿಗೇಡಿಗಳು ತಪ್ಪೋಪಿಕೊಂಡಿದ್ದಾರೆ.
ಈ ಖದೀಮರನ್ನು ಬಂಧಿಸಲು ತಿಲಕವಾಡಿ ಪೊಲೀಸ್ ಇನ್ಸ್‌ಪೆಕ್ಟರ್, ಪರಶುರಾಮ ಪೂಜೇರಿ, ಪಿಎಸ್‌ಐ ವಿಶ್ವನಾಥ ಘಂಟಾಮಠ, ಪ್ರಭಾಕರ ಡೊಳ್ಳಿ ಹಾಗೂ ಸಿಬ್ಬಂದಿಯವರಾದ ಮಹೇಶ ಪಾಟೀಲ, ಎಸ್.ಎಮ್.ಕರಲಿಂಗಣ್ಣವರ, ಲಾಡಜಿಸಾಬ ಮುಲ್ತಾನಿ, ನಾಗೇಂದ್ರ ತಳವಾರ, ಸತೀಶ ಗಿರಿರವರನ್ನೊಳಗೊಂಡ ತಂಡವು ಕಾರ್ಯಚರಣೆ ನಡೆಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 