ಸೈಬರ್ ಅಪರಾಧ ವಿರುದ್ಧ ಹೋರಾಟಕ್ಕೆ ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಕರಡು ನಿರ್ಣಯ

ವಿಶ್ವಸಂಸ್ಥೆ, ಡಿ 28,ಸೈಬರ್ ಅಪರಾಧ ವಿರುದ್ಧದ ಹೋರಾಟಕ್ಕೆ ಹೊಸ ಅಂತಾರಾಷ್ಟ್ರೀಯ ಕರಡು ನಿರ್ಣಯ ರೂಪಿಸಲು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ನಿರ್ಣಯವೊಂದನ್ನು ತೆಗೆದುಕೊಂಡಿದೆ. ನಿರ್ಣಯದ ಪರವಾಗಿ 79, ವಿರುದ್ಧವಾಗಿ 60 ದೇಶಗಳು ಸಹಿ ಹಾಕಿವೆ. ಉಳಿದಂತೆ 33 ದೇಶಗಳ ಸದಸ್ಯರು ಗೈರು ಹಾಜರಾಗಿದ್ದರು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಅಪರಾಧ ಉದ್ದೇಶಗಳಿಗೆ ಬಳಕೆಯಾಗುವುದನ್ನು ನಿಗ್ರಹಿಸಲು ಸಮಗ್ರ ಅಂತಾರಾಷ್ಟ್ರೀಯ ನಿರ್ಣಯಕ್ಕೆ ಕರಡು ರೂಪಿಸಲು ಅಂತರ ಸರ್ಕಾರಿ ಸಮಿತಿಯ ತಜ್ಞರು ಸಲಹೆ ನೀಡಲಿದ್ದಾರೆ. ಕರಡು ಕುರಿತ ಮುಂದಿನ ಪ್ರಕ್ರಿಯೆಗಳಿಗೆ ರೂಪುರೇಶೆ ಮತ್ತು ಕಾರ್ಯವಿಧಾನಗಳನ್ನು ರೂಪಿಸಲು 2020ರ ಆಗಸ್ಟ್ ನಲ್ಲಿ ಮೂರು ದಿನಗಳ ಸಾಂಸ್ಥಿಕ ಅಧಿವೇಶನವನ್ನು ನ್ಯೂಯಾರ್ಕ್‍ನಲ್ಲಿ ನಡೆಸಲು ಸಭೆ ತೀರ್ಮಾನಿಸಿದೆ. ಸಮಿತಿಗೆ ಬೆಂಬಲವಾಗಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಗತ್ಯ ಸಂಪನ್ಮೂಲಗಳನ್ನು ಒದಗಿಸುವಂತೆ ವಿಶ್ವಸಂಸ್ಥೆ ಮಹಾ ನಿರ್ದೇಶಕರಿಗೆ ಮನವಿ ಮಾಡುವ ನಿರ್ಣಯವನ್ನು ಸಭೆ ತೆಗೆದುಕೊಂಡಿದೆ. ಕರಡು ಬೆಂಬಲಿಸುವಂತೆ ಸಭೆ ರಷ್ಯಾ ಮತ್ತು ಚೀನಾಗೆ ಕರೆ ನೀಡಿದೆ.