ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ

International Women's Day program launched

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ  

ಬ್ಯಾಡಗಿ 19 :ಮಹಿಳಾ ದಿನಾಚರಣೆಯನ್ನು  ಮಹಿಳೆಯರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಮಹಿಳೆಯರ ಸಮಾನ ಹಕ್ಕುಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆ ಮತ್ತು ಸಂತಾನೋತ್ಪತ್ತಿ ಹಕ್ಕುಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತದೆ ಎಂದು ಹಿರಿಯ ದಿವಾನಿ ನ್ಯಾಯಾಧೀಶರಾದ ಅಮುಲ್ ಹಿರೇಕುಡಿ ಹೇಳಿದರು.ಮಂಗಳವಾರ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಹಿಳಾ ದಿನಾಚರಣೆಯ ಇತಿಹಾಸವನ್ನು ನೋಡುವುದಾದರೆಇಂದು ಮಹಿಳೆಯರ ಸಾಧನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಪ್ರಮುಖವಾಗಿ ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಬುದ್ಧಿಶಕ್ತಿಯಿಂದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ತಂದು ಕೊಟ್ಟಿದ್ದಾರೆಂದರು.ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಮಾತನಾಡಿಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಯಾವುದೇ ಒಂದು ದೇಶಕ್ಕೆ ಅಥವಾ ಗುಂಪಿಗೆ ಅಥವಾ ಸಂಘಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವದಾದ್ಯಂತ ಇದನ್ನು ಆಚರಿಸುವುದರಿಂದ ಈ ದಿನಕ್ಕೆ ವಿಶೇಷವಾದ ಮಹತ್ವವಿದೆ ಮತ್ತು ಲಿಂಗ ತಾರತಮ್ಯ ಇರುವುದಿಲ್ಲವೆಂದರು.ದಿವಾನಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ ಮಹಿಳಾ ದಿನಾಚರಣೆಯ ಇತಿಹಾಸವನ್ನು ನೋಡುವುದಾದರೆಇಂದು ಮಹಿಳೆಯರ ಸಾಧನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಪ್ರಮುಖವಾಗಿ ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಬುದ್ಧಿಶಕ್ತಿಯಿಂದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ತಂದು ಕೊಟ್ಟಿದ್ದಾರೆಂದರು.ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ ಮಾತನಾಡಿ ಅಂತರರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ  ನೆನ್ನೆಯದಲ್ಲ. 1900 ನೇ ಇಸವಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಆಗಿನ ಸಂದರ್ಭದಲ್ಲಿ ಉದ್ಯಮಗಳ ಅಭಿವೃದ್ಧಿ ದಾಪುಗಾಲಿನಲ್ಲಿ ಸಾಗುತ್ತಿತ್ತು. ಜೊತೆಗೆ ಜನಸಂಖ್ಯೆ ಕೂಡ ಹೆಚ್ಚಾಗುತ್ತಿದ್ದ ದಿನಗಳು ಅವಾಗಿದ್ದವೆಂದರು.  ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ   ಭಾರತಿ ಕುಲಕರ್ಣಿ, ಎಸ್ ಹೆಚ್ ಕಾಟೇನಹಳ್ಳಿ, ಎಸ್ ಪಿ ಪೂಜಾರ, ಎಸ್ ಹೆಚ್ ಗುಂಡಪ್ಪನವರ, ವೈ ಎಸ್ ಅರ್ಕಾಚಾರಿ, ಅಂಗನವಾಡಿ ಹಿರಿಯ ಮೇಲೆ ವಿಚಾರಕರಾದ  ಸಾವಿತ್ರಾ ಬೇಲಿ  ಉಪಸ್ಥಿತರಿದ್ದರು