ತೀರ್ಥಕುಂಡೆ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ತೀರ್ಥಕುಂಡೆ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ  International Women's Day celebrated in Tirthakunde village

ಲೋಕದರ್ಶನ ವರದಿ 

ಬೆಳಗಾವಿ 09: ಕ್ವಾಲಿಟಿ ಎನಿಮಲ್ ಫೀಡ್ಸ್‌ ಪ್ರೈವೇಟ್ ಲಿಮಿಟೆಡ್ನ ಸಿಎಸ್‌ಆರ್ ಉಪಕ್ರಮದಡಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಸಹಯೋಗದಲ್ಲಿ ತೀರ್ಥಕುಂಡೆ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.  

ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿನ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ್ತೂದಿ್ಪೈಹಿಸ್ಕಸ ಓಟ, ಕಣ್ಣು ಕಟ್ಟಿ ಡಬ್ಬಿ ಹೊಡೆಯುವ ಆಟ ಮತ್ತು ಸಂಗೀತ ಕುರ್ಚಿ ಸ್ಪರ್ಧೆ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ರಂಗೇರಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅವರ ಪ್ರತಿಭೆ ಮತ್ತು ಭಾಗವಹಿಸುವಿಕೆಯನ್ನು ಮೆಚ್ಚಿ ಬಹುಮಾನಗಳನ್ನು ವಿತರಿಸಲಾಯಿತು.  

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ವಾಲಿಟಿ ಎನಿಮಲ್ ಫೀಡ್ಸ್‌ ಪ್ರೈವೇಟ್ ಲಿಮಿಟೆಡ್ನ ಕಾನೂನು ಸಲಹೆಗಾರರಾದ ಶ್ರೀಮತಿ ಮಿನಾಲ್ ಮಾತನಾಡಿ, ಮಹಿಳೆಯರು ಸಾಮಾಜಿಕವಾಗಿ ಹೆಚ್ಚು ತೆರೆದುಕೊಳ್ಳಬೇಕು. ಇದರಿಂದ ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಬಹುದು. ಮನೆ ಕೆಲಸದ ಜೊತೆಗೆ ವಿವಿಧ ಗೃಹ ಕೈಗಾರಿಕೆಗಳನ್ನು ಮಹಿಳೆಯರು ಮನೆಯಿಂದಲೇ ಆರಂಭಿಸಬಹುದು. ಅಂತಹ ಪ್ರಯತ್ನಗಳಿಗೆ ನಮ್ಮ ಸಂಸ್ಥೆಯ ಪ್ರೋತ್ಸಾಹ ಸದಾ ಇರುತ್ತದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವೈಜಯಂತಿ ಎಂ. ಚೌಗಲಾ, ಶಕ್ತಿ ಸದನದ ಯೋಜನಾ ನಿರ್ದೇಶಕರಾದ ಶ್ರೀಮತಿ ಸುರೇಖಾ ಪಾಟೀಲ, ಕೆಪಿಎಸ್ ಯರಗಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಕಿರಣ್ ಚೌಗಲಾ, ತೀರ್ಥಕುಂಡೆ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಹಾದೇವ, ಟೈಲರಿಂಗ್ ಶಿಕ್ಷಕಿಯಾದ ಶ್ರೀಮತಿ ದೀಪಾ ಹಾಗೂ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಸರಿತಾ ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ಆರ್‌.ಜೆ. ಚೇತನ ನಿರೂಪಿಸಿದರು. ಆರ್‌.ಜೆ. ಮೀರಾ ವಂದಿಸಿದರು.