ರಾಣೆಬೆನ್ನೂರಲ್ಲಿಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ
ರಾಣೇಬೆನ್ನೂರು 21: ಇಲ್ಲಿನ ದೊಡ್ಡಪೇಟೆ ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಾರ್ಚ್ 22 ರಂದು ಶನಿವಾರ ಸಂಜೆ 5, ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ತಾಲೂಕ ಘಟಕವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕರವೇ ಗಜ ಸೇನೆ ಪ್ರಶಸ್ತಿ ಪುರಸ್ಕಾರ ಸಮಾರಂಭವು ಆಯೋಜಿಸಿದೆ. ಅಲ್ಲದೆ ಬೆಂಗಳೂರು ಜಾನು ಮೆಲೋಡಿ ಇವೆಂಟ್ಸ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಆವರಗೂಳ್ಳಾ ಪುರ ವರ್ಗ ಹಿರೇಮಠದ ಓಂಕಾರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಪ್ರಕಾಶ್ ಕೋಳಿವಾಡ್ ಉದ್ಘಾಟಿಸುವರು. ತಾಯಿನಾಡು ದಿವಾಣಿ ನ್ಯಾಯಾಧೀಶ ಮೇಘಶ್ರೀ ದೀಪ ಬೆಳಗಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಅರುಣ್ ಕುಮಾರ ಪೂಜಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಗೌಡ ಶಿವಣ್ಣನವರ,ಚಲನಚಿತ್ರ ಗಾಯಕ ಶಶಿಧರ ಕೋಟೆ, ಚಿತ್ರನಟ ಅಂಕುಶ್ ಏಕಲವ್ಯ, ಗಾಯಕ ಮಹೇಶ್ ಬಿಲ್ಲಾಳ, ಜಿಲ್ಲಾಧ್ಯಕ್ಷ ಮಂಜುನಾಥ್ ಓಲೆಕಾರ್, ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಲಕ್ಷ್ಮಿ ಕದರ ಮಂಡಲಗಿ, ಕಾರ್ಯದರ್ಶಿ, ಗೌರಮ್ಮ ಬೆಲ್ಲದ, ಜಿಲ್ಲಾ ಉಪಾಧ್ಯಕ್ಷ ಇಂದಿರಾ ಬಡಿಗೇರ, ತಾಲೂಕಿನ ಅಧ್ಯಕ್ಷ ನೀಲಾಂಬಿಕ ನಿಡಗುಂದಿ, ಉಪಾಧ್ಯಕ್ಷೆ ಹಾಲಮ್ಮ ಹಿರೇಗೌಡ್ರು, ಸಂಚಾಲಕಿ ಸುಧಾ ಪಾಟೀಲ ತಾಲೂಕ ಅಧ್ಯಕ್ಷ ಕುಮಾರ್, ಸುಳ್ಳನವರ, ಜಿಲ್ಲಾ ಸಂಚಾಲಕ ಮಾಲತೇಶ ಬಿ.ಕೆ. ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದು ಕಾರ್ಯಕ್ರಮ ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.