ಜಯದೇವ ನಗರದಲ್ಲಿರುವ ದಾನೇಶ್ವರಿ ದೇವಸ್ಥಾನದಲ್ಲಿ ವಿಶ್ವ ಮಹಿಳಾ ದಿನಾಚರಣ
ಹಾವೇರಿ 12 :ಇಲ್ಲಿನ ಜಯದೇವ ನಗರದಲ್ಲಿರುವ ದಾನೇಶ್ವರಿ ದೇವಸ್ಥಾನದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಭಾ ತಾಯಿ ರಾಜಶೇಖರ್ ಮಾಗಾವಿ ವಹಿಸಿದ್ದರು. ನಂತರ ಮಾತನಾಡಿ ಹೆಣ್ಣು ಆಬಲೆ ಅಲ್ಲಾ ಸಬಲೆ ಎಲ್ಲ ರಂಗಗಳಲ್ಲಿಯೂ ಹೆಣ್ಣು ತನ್ನ ಸಾ ಮರ್ಥ್ಯವನ್ನು ಸಾಧಿಸಿ ಬಾಳುತ್ತಿದ್ದಾಳೆ. ಸಮಾನತೆಯ ಜೊತೆಗೆ ಒಗ್ಗಟ್ಟಿನಿಂದ ಸಹಬಾಳ್ವೆಯಿಂದ ಮುಂದುವರೆದರೆ ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಲೀಲಾವತಿ ಪಾಟೀಲ, ದಾನೇಶ್ವರಿ ದೇವಸ್ಥಾನದ ಟ್ರಸ್ಟ್ ಕಮಿಟಿಯ ನಿರ್ದೇಶಕರಾದ ಚಂಬಕ್ಕಾ ಯರೇಶಿಮೆ, ಗಿರಿಜಕ್ಕ ತಾಂಡೂರ, ನೇತ್ರಾವತಿ ಪಾಟೀಲ್.ಚಂಬಕ್ಕ ಹೊಸಮನಿ,ಸಿದ್ದುಮತಿ ನೆಲವಿಗಿ ಹಾಗೂ ಮಾಜಿ ನಗರಸಭಾ ಅಧ್ಯಕ್ಷರಾದ ಮಂಜುಳಾ ಕರಬಸಮ್ಮನವರ ಇನ್ನಿತರರಿಗೆ ಸನ್ಮಾನಿಸಲಾಯಿತು.ಶಶಿಕಲಾ ಅಕ್ಕಿ ಸಂಗಡಿಗರಿಂದ ಗರ್ಭ ನೃತ್ಯವನ್ನು,ಶ್ರೀಮತಿ ಅರುಂಧತಿ ಸವಣೂರ ಇವರಿಂದ ಜೋಗುತಿ ನೃತ್ಯ ಅತ್ಯಂತ ಸುಂದರವಾಗಿ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಸೌಭಾಗ್ಯ ಹಿರೇಮಠ ನಡೆಸಿಕೊಟ್ಟರು.ಕಾರ್ಯಕ್ರಮದ ಮುಕ್ತಾಯ ಹಂತದಲ್ಲಿ ಎಲ್ಲಾ ಮಹಿಳೆಯರಿಂದ ದಾನೇಶ್ವರಿ ತಾಯಿಗೆ ಮಹಾ ಪಂಚಾರುತಿ ನಡೆಯಿತು.