ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

International Women's Day- Vijaypur news

ವಿಜಯಪುರ 11: ಬಿ.ಎಲ್‌.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ವಿಜಯಪುರದ ಮಲ್ಲಿಕಾರ್ಜುನ ನಗರದ ಶ್ರೀ ಶಿವಶರಣ ಹರಳಯ್ಯ ಅಂಧರ ಸಂಸ್ಥೆಯ ಅಂಧರ ಪ್ರಾಥಮಿಕ ಶಾಲೆ ಮತ್ತು ವಸತಿ ನಿಲಯದಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. 

ಕಾಲೇಜಿನ ಫಾರ್ಮಾಸುಟಿಕ್ಸ್‌ ವಿಭಾಗದ ಪ್ರಾಧಾಪಕ ಡಾ. ಚಂದ್ರಶೇಖರ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆ ಮತ್ತು ವಸತಿ ನಿಲಯದ ಮಕ್ಕಳಿಗೆ ಹಣ್ಣು ಹಂಪಲು, ಚಾಕಲೇಟು ಹಾಗೂ ಬಿಸ್ಕೀಟುಗಳನ್ನು ವಿತರಿಸಲಾಯಿತು.  ಅಲ್ಲದೇ, ಕಾಲೇಜು ಮಹಿಳಾ ಸಬಲೀಕರಣ ಕಮಿಟಿ ಸದಸ್ಯರು ಮತ್ತು ಸಿಬ್ಬಂದಿ ಅಂಧ ಮಕ್ಕಳೊಂದಿಗೆ ಬೆರೆತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವದ ಕುರಿತು ಚರ್ಚೆ ನಡೆಸಿದರು.  ಮಕ್ಕಳು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡರು.   

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಶೆಟ್ಟಿ, ಕಾರ್ಯಕ್ರಮದ ಸಂಯೋಜಕಿ ಡಾ. ಸುನಂದಾ ನಂದಿಕೋಲ, ಮಹಿಳಾ ಸಬಲೀಕರಣ ಕಮಿಟಿ ಸಹಸದಸ್ಯರಾದ ಡಾ. ಸುಧಾ ಪಾಟೀಲ, ಅಶ್ವಿನಿ ಜಿ., ಧನವಂತಿ ರುಣವಾಲ, ಕವಿತಾ ನೇಸೂರ, ರೇಣುಕಾ ಸುನಗದ, ಭಂಡಾರಕವಟೆ ಮುಂತಾದವರು ಉಪಸ್ಥಿತರಿದ್ದರು.