ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ‘ಭಾರತೀಯ ಮಹಿಳೆ ಅಂದು-ಇಂದು-ಮುಂದು’ ವಿಚಾರ ಸಂಕಿರಣ

International Women's Day: Symposium on 'Indian Women Then-Today-Future'

ಸಾಂಸ್ಕೃತಿಕ ಅಭಿಯಾನ-2025 

ಬೆಂಗಳೂರು 05: ಸುರ್ವೆ ಕಲ್ಚರಲ್ ಅಕಾಡೆಮಿ ತನ್ನ 32ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, 2025ರ ಮಾರ್ಚ್‌ 8ರ ಶನಿವಾರದಂದು, ಬೆಂಗಳೂರಿನ ನಯನ ರಂಗಮಂದಿರದಲ್ಲಿ, ಪೂರ್ಣ ದಿನ, 72ನೇ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಹಮ್ಮಿಕೊಂಡಿದೆ. 

50ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳು ನೃತ್ಯ ರೂಪಕಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಬೆಳಿಗ್ಗೆ 10ಕ್ಕೆ ಕರ್ನಾಟಕದ ಹೆಸರಾಂತ ನೃತ್ಯ ಶಾಲೆ ಸಾಯಿ ಆರ್ಟ್‌ ಇಂಟರ್‌ನ್ಯಾಷನಲ್ ಸಂಸ್ಥೆಯ ಅಧ್ಯಕ್ಷ ಶ್ರೀ ಸಾಯಿವೆಂಕಟೇಶ್ ಮತ್ತು ಡಾ. ಸುಪರ್ಣಾ ವೆಂಕಟೇಶ್‌ರವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಸಾನಿಧ್ಯವನ್ನು ಬೆಳಗಾವಿ ಜಿಲ್ಲೆ ಚಿಪ್ಪಲಕಟ್ಟಿಯ ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಂಸ್ಥೆಯ ಗೌರವ ಅಧ್ಯಕ್ಷೆ ಡಾ. ಸುಮತಿಶ್ರೀ ನವಲಿ ಹಿರೇಮಠ ಮತ್ತು ಚಲನಚಿತ್ರ ಕಲಾವಿದೆ ಶ್ರೀಮತಿ ಮೀನಾ, ಧಾರವಾಡದ ಸಾಹಿತಿ ಡಾ. ಸರಸ್ವತಿ ಕಳಸದ, ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಶ್ವೇತಾ ವೆಂಕಟೇಶ್ ಉಪಸ್ಥಿತರಿರುತ್ತಾರೆ. 

ಬೆಳಿಗ್ಗೆ 10 ರಿಂದ ಪ್ರಾರಂಭವಾಗಿ 5 ಗಂಟೆಯವರೆಗೆ ಭರತನಾಟ್ಯ, ಜಾನಪದ ನೃತ್ಯ, ಚಲನಚಿತ್ರ ನೃತ್ಯ, ವೆಸ್ಟ್ರನ್ ನೃತ್ಯ ಮತ್ತು ಹಲವು ನೃತ್ಯರೂಪಕ ಮತ್ತು ಸಮೂಹ ನೃತ್ಯಗಳನ್ನು ಸಾಂಸ್ಕೃತಿಕ ಪ್ರತಿಭೋತ್ಸವದಲ್ಲಿ ಪ್ರದರ್ಶನ ನಡೆಯಲಿದೆ. 

ಬೆಂಗಳೂರಿನ ಸಾಯಿ ಆರ್ಟ್‌ ಇಂಟರ್‌ನ್ಯಾಷರ್ ಸಂಸ್ಥೆಯಿಂದ ಶ್ವೇತಾ ವೆಂಕಟೇಶ್‌ರವರ ನೇತೃತ್ವದಲ್ಲಿ, 40ಕ್ಕೂ ಹೆಚ್ಚು ಮಕ್ಕಳು ನೃತ್ಯಸೌರಭ ಕಾರ್ಯಕ್ರಮ ನೀಡಲಿದ್ದಾರೆ.ಮಾಲೂರಿನ ಶ್ರೇಯಾಂಕ ಡ್ಯಾನ್ಸ್‌ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪ್ರಿಯಾಂಕ ವಿ.ಎಂ. ನೇತೃತ್ವದಲ್ಲಿ 15ಕ್ಕೂ ಹೆಚ್ಚು ಮಕ್ಕಳು ಭರತನಾಟ್ಯ ಸೇರಿದಂತೆ “ನೃತ್ಯಮಂಜರಿ” ವಿವಿಧ ನೃತ್ಯ ಪ್ರದರ್ಶನ ನಡೆಯಿಸಿಕೊಡಲಿದ್ದಾರೆ.  

ರಾಮನಗರದ ತೃಷ್ಣ ವಿ ಕುಮಾರ್ ರವರು ನೃತ್ಯಾಂಜಲಿ ಕಾರ್ಯಕ್ರಮ ನೀಡಲಿದ್ದಾರೆ. ಜೊತೆಯಲ್ಲಿ ಶ್ರೀ ಭುವನೇಶ್ವರಿ ಮಹಿಳಾ ಜಾನಪದ ಕಲಾಸಂಘ ಮಂಡಲಗೇರಿ ಇವರಿಂದ ಮೂಲ ಜನಪದ ಗಾಐನ ಪ್ರಸ್ತುತ ಪಡಿಸಲಿದ್ದು, ಪೂರ್ಣ ದಿನ ಗಾಯಕಿ ಅರುಣಾ ಎಂ. ಮತ್ತು ತೀರ್ಥಹಳ್ಳಿ ನವ್ಯ ಕುರುವಳ್ಳಿ ಇವರಿಂದ ಕರೋಕೆ ಗಾಯನ ಹಾಗೂ ಬೆಂಗಳೂರಿನ ಗಾಯಕಿ ಡಾ. ರಾಧಿಕ ಆರ್‌. ಚಿಂಚೋಳಿಯವರಿಂದ ಹಿಂದುಸ್ಥಾನಿ ಗಾಯನ ಮತ್ತು ಶಿವಮೊಗ್ಗದ ಸ್ಟ್ಯಾಂಡಪ್ ಕಮೆಡಿಯನ್ ಕವಿತಾ ಸುಧೀಂದ್ರರವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. 

ವಿಚಾರ ಸಂಕಿರಣ : ಸಂಜೆ 5.30 ರಿಂದ “ಭಾರತೀಯ ಮಹಿಳೆ ಅಂದು-ಇಂದು-ಮುಂದು” ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಸಾಹಿತಿ ರಾಜೇಂದ್ರ ಎಸ್‌. ಗಡಾದ, ಗದಗ ಮತ್ತು ಶ್ರೀಮತಿ ಡಿ. ನಳಿನಿ ಚಿಕ್ಕಮಗಳೂರು ಇವರು ವಿಷಯ ಮಂಡಿಸಲಿದ್ದಾರೆ. ದಿವ್ಯಸಾನಿಧ್ಯವನ್ನು ಉಡುಪಿಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಶ್ರೀ ರಮಾನಂದ ಗುರೂಜಿ ವಹಿಸಲಿದ್ದು, ಸಮಾರಂಭವನ್ನು ಮಾಜಿ ರಾಜ್ಯ ಸಭಾ ಸದಸ್ಯ ಮತ್ತು ಹಿರಿಯ ಕವಿಗಳಾದ ಡಾ. ಎಲ್‌. ಹನುಮಂತಯ್ಯ ಉದ್ಘಾಟಿಸಲಿದ್ದಾರೆ. ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಶ್ರೀ ಸಂಗಮೇಶ ಬಬಲೇಶ್ವರ ನಾಲ್ಕು ಗ್ರಂಥಗಳನ್ನು ಲೋಕಾರೆ​‍್ಣಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್‌. ಅರಸ್, ಚಲನಚಿತ್ರ ಕಲಾವಿದರಾದ ಶಂಕರಭಟ್ ಮತ್ತು ಶ್ರೀಮತಿ ಮೀನಾ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಮಾಜಿ ಸಚಿವೆ ಡಾ. ಲೀಲಾದೇವಿ ಆರ್‌. ಪ್ರಸಾದ್‌ರವರ “ಕಾಡಿ ಬೇಡದ ಬುತ್ತಿ” ಮತ್ತು ಮಕ್ಕಳ ಸಾಹಿತಿ ಎಂದೆ ಹೆಸರಾಗಿರುವ ಗದಗ ಜಿಲ್ಲೆ ರಾಜೇಂದ್ರ ಎಸ್‌. ಗಡಾದರವರ “ವಿಲೋಕನ” “ಸಂತಮ್ಮಣ್ಣ ರೈಟ್ ಸಹೋದರರು” “ವಚನಾವರಣ” ಎಂಬ ನಾಲ್ಕು ಕೃತಿಗಳು ಲೋಕಾರೆ​‍್ಣಗೊಳ್ಳಲಿವೆ. 

ಈ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅವರ ಜೀವಮಾನ ಸಾಧನೆಗಾಗಿ 2024ರ ಸಾಲಿನ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯನ್ನು, ಡಾ. ಲೀಲಾದೇವಿ ಆರ್‌. ಪ್ರಸಾದ್ (ಬೆಳಗಾವಿ ಜಿಲ್ಲೆ), ಸಿದ್ಧು ಯಾಪಲಪರವಿ (ರಾಯಚೂರು ಜಿಲ್ಲೆ),  ಸಿ.ಕೆ. ಜೋರಾಪುರ (ಬೆಳಗಾವಿ), ಡಾ. ಅಮ್ಮಸಂದ್ರ ಸುರೇಶ (ಮೈಸೂರು ಜಿಲ್ಲೆ), ಡಾ. ಜಗನ್ನಾಥರಾವ್ ಬಹುಳೆ (ಬೆಂಗಳೂರು), ಎನ್‌. ಕನ್ನಿಕಾಪರಮೇಶ್ವರಿ (ಕೋಲಾರ ಜಿಲ್ಲೆ), ವೀರಲೋಕ ಪ್ರಕಾಶನದ ಸಂಸ್ಥೆ ಪರವಾಗಿ ವೀರಕಪುತ್ರ ಶ್ರೀನಿವಾಸ (ಬೆಂಗಳೂರು), ವೈದ್ಯವಾರ್ತಾ ಪ್ರಕಾಶನ ಪರವಾಗಿ ಅಂಬ ಎಂ.ಜಿ.ಆರ್‌. ಅರಸ್ (ಮೈಸೂರು ಜಿಲ್ಲೆ) ರವರು ಪ್ರಶಸ್ತಿ ಪಡೆಯಲಿದ್ದಾರೆ. 

32ನೇ ವರ್ಷದ ಅಕಾಡೆಮಿ ಪ್ರಶಸ್ತಿಗಳ ಪ್ರದಾನ ನಡೆಯಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಡಾ. ಸರಸ್ವತಿ ಆರ್‌. ಕಳಸದ, ಧಾರವಾಡ ಮತ್ತು ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ವಿಜಯ ಕರ್ನಾಟಕ ಪತ್ರಿಕೆ ಛಾಯಾಗ್ರಾಹಕರಾದ ಗಣೇಶ್ ಕೆ.ಎಸ್, ಸ್ಟ್ಯಾಂಡ್‌ಅಪ್ ಕಮಿಡಿಯನ್ ಕವಿತಾ ಸುಧೀಂದ್ರ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರದ 25 ಗಣ್ಯರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.