ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನ

ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನ International Day for the Elimination of Violence against Women

ಲೋಕದರ್ಶನ ವರದಿ 

ಬೆಳಗಾವಿ 27: ಫ್ಯಾಮಿಲಿ ಪ್ಲಾನಿಂಗ್  ಅಸೋಸಿಯೇಷನ್ ಆಫ್ ಇಂಡಿಯಾ, ಬೆಳಗಾವಿ ಶಾಖೆ  ಹಾಗೂ  ಮಹಿಳಾ ಕಲ್ಯಾಣ ಸಂಸ್ಥೆಯ  ಶಕ್ತಿ  ಸದನ ದೇವರಾಜ ಅರ್ಸ್‌ ಕಾಲೋನಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ದಿ.25ರಂದು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನವನ್ನು  ಮಹಿಳಾ ಕಲ್ಯಾಣ ಸಂಸ್ಥೆ ಶಕ್ತಿ ಸದನ ದೇವರಾಜ ಅರ್ಸ್‌ ಕಾಲೋನಿಯಲ್ಲಿ ಅವಲೋಕಿಸಲಾಯಿತು.   

ಸಮಾಜದಲ್ಲಿ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ  ವಿರೋಧಿ ದಿನದ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಜಾಥಾ ಕಾರ್ಯಕ್ರಮವನ್ನು ಪ್ರೊ. ಅಶ್ವಿನಿ ಪಿ. ಪರಬ, ಸದಸ್ಯರು ಎಫ್‌. ಪಿ. ಎ. ಐ. ಬೆಳಗಾವಿ ಶಾಖೆ ಇವರು  ಚಾಲನೆಯನ್ನು ನೀಡಿದರು.   

ಜಾಥಾ ಕಾರ್ಯಕ್ರಮದ ನಂತರ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ವೇದಿಕೆಯ ಮೇಲಿನ ಗಣ್ಯರು ಉದ್ಘಾಟಿಸಿದರು.   

ಈ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ  ಪ್ರೊ. ಆಶ್ವಿನಿ ಪಿ. ಪರಬ, ಸದಸ್ಯರು  ಎಫ್‌. ಪಿ. ಎ. ಐ. ಬೆಳಗಾವಿ ಶಾಖೆ ಇವರು ಮಾತನಾಡುತ್ತಾ “ಎಲ್ಲಾ ಮಹಿಳೆಯರು ಮತ್ತು ಹುಡೀಗೀಯರು ಮೇಲೆ ನಡೆಯುವ ಡಿಜಿಟಲ್ ಹಿಂಸಾಚಾರವನ್ನು ಅಂತ್ಯಗೊಳಿಸಲು ಏಕತೆ ಹೊಂದೊಣಾ” ಎಂಬ 2025 ನೇ ವರ್ಷದ ಘೋಷ ವಾಕ್ಯ ದೊಂದಿಗೆ   ಈ ದಿನ  ಮಹಿಳೆಯರ ಅಸ್ತಿತ್ವ ಮತ್ತು ಸಮಾಜದಲ್ಲಿ ಅವರ ಸ್ಥಾನ-ಮಾನವನ್ನು ಗೌರವಿಸುವ ದಿನವಾಗಿದ್ದು, ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲೆ ನಡೆಯು ಹಿಂಸೆ ಮತ್ತು ದೌರ್ಜನ್ಯ ನಿವಾರಣೆಗಾಗಿ ಪ್ರತಿವರ್ಷ 25 ಸೆಪ್ಟೆಂಬರಂದು ಈ ದಿನವನ್ನು ಆಚರಿಸಲಾಗುವುದು. ಈ ದಿನವು   ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಮಹಿಳೆಯರು ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕೆಂದು ತಿಳಿಸುತ್ತಾ ಮಹಿಳೆಯರಗಾಗಿ ಇರುವ ಹಕ್ಕುಗಳು ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗ್ಗೆ, ವರದಕ್ಷಿಣೆ ಕಿರುಕಳದ ಕುರಿತು ಇರುವ ಕಾಯ್ದೆ, ಹಿರಿಯ ನಾಗರಿಕರಿಗೆ ಇರುವ ಕಾಯ್ದೆಗಳು ಬಗ್ಗೆ ವಿವರಿಸಿ ಈ ಕಾಯ್ದೆಗಳನ್ನು ಸದುಪಯೋಗ ಪಡೆದು ಕೊಳ್ಳಬೇಕು. ಕೆಲವಮ್ಮೆ  ಈ ಕಾಯ್ದೆಗಳು ದುರುಪಯೋಗ ಕೂಡ ಆಗುತ್ತದೆ. ಈ ಕಾನೂನನ್ನು ಸದುಪಯೋಗ ಪಡೆದು ಕೊಳ್ಳಬೇಕೆಂದು ತಿಳಿಸಿದರು.   

ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆ  ಕುರಿತು ಪೋಸ್ಟರ ಮೇಕಿಂಗ ಸ್ಪರ್ಧೆಯನ್ನು ಏಪರ್ಡಿಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.  

ಈ ಕಾರ್ಯಕ್ರಮದಲ್ಲಿ ಎಫ್‌. ಪಿ. ಎ. ಐ. ಬೆಳಗಾವಿ ಶಾಖೆ , ಮಹಿಳಾ ಕಲ್ಯಾಣ ಸಂಸ್ಥೆಯ ಸಿಬ್ಬಂದ್ಧಿವರ್ಗದವರು ಉಪಷ್ಠಿತರಿದ್ದರು.   

 ಈ ಕಾರ್ಯಕ್ರಮವನ್ನು ಪ್ರೇಮಕುಮಾರಿ ಹೆಚ್‌. ವ್ಹಿ. ಕಾರ್ಯಕ್ರಮ ಅಧಿಕಾರಿ, ಎಫ್‌. ಪಿ. ಎ. ಐ. ಬೆಳಗಾವಿ ಶಾಖೆ ನಿರೂಪಿಸಿದರು. ಯಮುನಾ ಇವರ ವಂದನಾರೆ​‍್ಣಯೊಂದಿಗೆ ಮುಕ್ತಾಯಗೊಳಿಸಲಾಯಿತು.