ವಿಶ್ವ ಮಾದಕ ವಸ್ತುಗಳ ಆಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

ವಿಶ್ವ ಮಾದಕ ವಸ್ತುಗಳ ಆಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ International Day Against Drug Trafficking

ಗಂಗಾವತಿ 26: ವಿಶ್ವ ಮಾದಕ ವಸ್ತುಗಳ ದುರುಪಯೋಗ ಮತ್ತು ಆಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ನಗರದಲ್ಲಿ ಗುರುವಾರ ಜಾಥಾ ಮೂಲಕ ಆಚರಿಸಲಾಯಿತು. ನಗರದ ಸೇ0ಟ್ ಫಾಲ್ಸ್‌ ಫಾರ್ಮಸಿ ಕಾಲೇಜು ವಿಧ್ಯಾರ್ಥಿಗಳು ಹಾಗೂ ಗಂಗಾವತಿ-ಕನಕಗಿರಿ-ಕಾರಟಗಿ ಸಂಯುಕ್ತ ತಾಲೂಕು ಓಷಧ ವ್ಯಾಪಾರಿಗಳು ಜಂಟಿಯಾಗಿ ಈ ಜಾಥಾವನ್ನು ಹಮ್ಮಿಕೊಂಡಿದ್ದರು. ನಗರದ ಬಸ್ ನಿಲ್ದಾಣದಿಂದ ಗಾಂಧೀ ಚೌಕವರೆಗೂ ನಡೆದ ಜಾಥಾ ಘೋಷಣೆಗಳೊಂದಿಗೆ ನಡೆಯಿತು.  

ಕರ್ನಾಟಕ ರಾಜ್ಯ ಓಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮಾತನಾಡಿ,ಅಫೀಮು-ಚರಸ್‌-ಗಾಂಜಾ ಇವುಗಳನ್ನು ಡ್ರಗ್ಸ್‌ ಗಳೆಂದು ಕರೆಯುಲಾಗುತ್ತದೆ. ಇವುಗಳಿಗೆ ಅಡಿಟ್ ಆದವರಿಗೆ, ಅವುಗಳ ಚಟ ಬಿಡಿಸಲು ಓಷಧಗಳನ್ನು ವೈಧ್ಯರು ಸೂಚಿಸುತ್ತಾರೆ. ವೈಧ್ಯರ ಪ್ರಿಸ್ಕ್ರಿಪ್ಶನ್ ಆಧಾರದ ಮೇಲೆ ಓಷಧಗಳನ್ನು ಮಾರಾಟ ಮಾಡಬೇಕು.ಅದು ಬಿಟ್ಟು ಅಂತಹ ಓಷಧಗಳನ್ನು ಕೇಳಿದವರಿಗೆಲ್ಲಾ ಕೊಡುವುದು ಕಾನೂನಿನ ಪ್ರಕಾರ ಅಪರಾಧ ಆದ್ದರಿಂದ ಓಷಧ ವ್ಯಾಪಾರಿಗಳು ಎಚ್ಚರಿಕೆಯಿಂದ ವ್ಯಾಪಾರ ಮಾಡಲು ಸೂಚಿಸಿದರು.  

ತೊಂದರೆ ಆಗಬಹುದೆಂದು ಅಂತಹ ಓಷಧಗಳನ್ನು ಖರೀಧಿಸುವುದನ್ನು ಹಾಗೂ ಮಾರಾಟ ಮಾಡದೇ ಇರುವುದು ಸರಿಯಲ್ಲ ಎಂದರು. ಕೊಪ್ಪಳ ವೃತ್ತದ ಸಹಾಯಕ ಓಷಧ ನಿಯಂತ್ರಕರಾದ ವೆಂಕಟೇಶ ರಾಠೋಡ ಮಾತನಾಡಿ ಓಷಧ ಮತ್ತು ಕಾಂತಿವರ್ಧಕ ನಿಯಮಗಳ ಪ್ರಕಾರ ವ್ಯವಹರಿಸುವಂತೆ ಕರೆ ನೀಡಿದರು.ಶೆಡ್ಯೂಲ್ಡ್‌ ಓಷಧಗಳನ್ನು ರೋಗಿಗಳಿಗೆ ನೇರವಾಗಿ ಮಾರಾಟ ಮಾಡಬಾರದು ಎಂದು ಹೇಳಿದರು.ಓಷಧ ವ್ಯಾಪಾರಿಗಳು ಕಟ್ಟು ನಿಟ್ಟಿನಲ್ಲಿ ನಿಯಮನುಸಾರ ಕಾರ್ಯನಿರ್ವಹಿಸಬೇಕು, ಶೆಡ್ಯೂಲ್ಡ್‌ ಓಷಧಗಳನ್ನು ವೈಧ್ಯರ ಸಲಹಾ ಚೀಟಿಗಳ ಆಧಾರದ ಮೇಲೆ ಮಾರಾಟ ಮಾಡಬೇಕು,ಅಮಲು ಬರಿಸುವ ಓಷಧಗಳ ಮಾರಾಟದಲ್ಲಿ ನಿಯಮಗಳನ್ನು ಪಾಲಿಸಬೇಕು ಎಂದು ನಗರ ಠಾಣೆಯ ಪಿ.ಐ.ಪ್ರಕಾಶ ಮಾಳೆ ಓಷಧ ವ್ಯಾಪಾರಿಗಳಿಗೆ ಕರೆ ನೀಡಿದರು. 

ಪೋಲಿಸ್ ಇಲಾಖೆಯು ಓಷಧ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ನಂತರ ಓಷಧ ವ್ಯಾಪಾರಿಗಳು ಜಾಗ್ರತರಾಗಿದ್ದಾರೆ,ನಿಯಮನುಸಾರ ವ್ಯಾಪಾರ ಮಾಡುತ್ತಿದ್ದಾರೆ.ಓಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಅಶೋಕಸ್ವಾಮಿ ಹೇರೂರ ಅವರು ಓಷಧ ವ್ಯಾಪಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಅಮಲು ಭರಿಸುವ ಓಷಧಗಳ ಮಾರಾಟದ ಮೇಲೆ ನಿಗಾ ವಹಿಸಿದ್ದಾರೆ ಎಂದು ಡಿ.ಎಸ್‌.ಪಿ.ಸಿದ್ದಲಿಂಗಪ್ಪ ಗೌಡ ಪಾಟೀಲ್ ಅಭಿಪ್ರಾಯ ಪಟ್ಟರು.ಓಷಧ ವ್ಯಾಪಾರಿಗಳು, ಫಾರ್ಮಸಿಸ್ಟಗಳು, ಫಾರ್ಮಸಿ ವಿಧ್ಯಾರ್ಥಿಗಳು,ಪೋಲಿಸ್ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.