ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆಯ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 17,   ಮಕ್ಕಳ ಸಹಾಯವಾಣಿ 1098, ಇಂದು ಮಿಂಚಿನ ಸಂಚಾರದಂತೆ ಕಾರ್ಯನಿರ್ವಹಿಸುತ್ತಿದೆ , ಮಕ್ಕಳಿಗೆ ಸಂಕಷ್ಟ ಎದುರಾದಾಗ ಮಕ್ಕಳು ನೇರವಾಗಿ 1098 ಮಕ್ಕಳ ಸಹಾಯವಾಣಿಗೆ ಕರೆಮಾಡುತ್ತಿರುವುದು ಸಂತೊಷದ ಸಂಗತಿ ಎಂದು. ಜೆ ಟಿ ಲೋಕೇಶ ಮಕ್ಕಳ ರಕ್ಷಣಾ ಅಧಿಕಾರಿ ಮಕ್ಕಳ ರಕ್ಷಣಾ ಘಟಕ ಬೆಳಗಾವಿ ಇವರ ಅಭಿಪ್ರಾಯ ಪಟ್ಟರು ಇವರು ದಿನಾಂಕ 17/05/2019 ರಂದು ಶ್ರೀ ಸಿದ್ದಾರಾಮೇಶ್ವರ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರಿಯ ಮಕ್ಕಳ ಸಹಾಯವಾಣಿ ದಿನಾಚರಣೆಯ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದರು.

ಈ ಕಾರ್ಯಕ್ರಮವನ್ನು ಮಕ್ಕಳ ಸಹಾಯವಾಣಿ 1098 ಬೆಳಗಾವಿ, ಜಿಲ್ಲಾ ಅನುಷ್ಠಾನ ಸಂಸ್ಥೆ ಯುನೈಟೆಡ ಸಮಾಜ ಕಲ್ಯಾಣ ಸಂಸ್ಥೆ ಬೆಳಗಾವಿ ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶ್ರೀ ಸಿದ್ದಾರಾಮೇಶ್ವರ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆ ಜಿಲ್ಲಾ ಕಾನೊನು ಸೇವೆ ಪ್ರಾಧಿಕಾರ ಬೆಳಗಾವಿ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಸಂಯೊಜಕರಾದ ಎಮ್ ಕೆ ಕುಂದರಗಿ ಮಾತನಾಡಿ ಮಕ್ಕಳ ಸಹಾಯವಾಣಿ 1098 ಬೆಳೆದು ಬಂದ ಬಗೆ, ಇದರ ಕಾರ್ಯನಿರ್ವಹಣೆ ಮತ್ತು ಎಂಥ ಸಂದರ್ಭದಲ್ಲಿ ಸಹಾಯವಾಣಿಗೆ ಕರೆ ಮಾಡಬಹುದು ಎಂದುದನ್ನು ತಿಳಿಸಿದರು ಕಾರ್ಯಕ್ರಮದಲ್ಲಿ.  ವಿ ಸಿ ಹೊಸಮನಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಚಾರ್ಯ ರು  ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಕಾಲೇಜಿನ ತರಬೇತಿದಾರರಾದ ಎಮ್ ಎಸ್ ಹಿರೇಮಠ ನೆರವೇರಿಸಿದರು.

ಇಂಥ ಇನ್ನೊಂದು ಕಾರ್ಯಕ್ರಮ ಮದ್ಯಾಹ್ನ 3-00 ಗಂಟೆಗೆ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿಯಲ್ಲಿ ಜರುಗಿತು, ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಕರಾಗಿ ಆನಂದ ಲೋಬೊ ಸೇವಕ ಸಂಸ್ಥೆ ಬೆಳಗಾವಿ ಇವರು ಅಗಮಿಸಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗಾಗಿ ಇರುವ ಕಾನೊನುಗಳ ಬಗ್ಗೆ ಪರಿಚಯಿಸಿ ಕಾಲೇಜಿನ ಪ್ರಶಿಕ್ಷಣಾಥರ್ಿಗಳಿಗೆ ಪೋಕ್ಸೊ ಕಾಯ್ದೆ-2012 ಕುರಿತು ಉಪನ್ಯಾಸ ನೀಡಿದರು, ನಂತರ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಎನ್ ಕೆ ಕಾಳೆ ಮಾತನಾಡಿ ಮಕ್ಕಳ ಸಹಾಯವಾಣಿ 1098 ತುಂಬಾ ಉಪಯುಕ್ತವಾಗಿದೆ. 

ಈ ಸಹಾಯವಾಣಿಯಿಂದ ಇಂದು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳು ವರದಿಯಾಗುತ್ತಿವೆ, ಇಂಥ ಮಕ್ಕಳ ಸಹಾಯವಾಣಿ ದಿನಾಚರಣೆ ಮಾಡುತ್ತಿರುವುದು ಹೆಮ್ಮೆ ಅನಿಸುತ್ತಿದೆ ಎಂದರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರವಿ ಭಜಂತ್ರಿ ,  ಹಿರೇಮಠ ,ಮಕ್ಕಳ ರಕ್ಷಣಾಧಿಕಾರಿ ಜೆ ಟಿ ಲೋಕೇಶ , ಮಕ್ಕಳ ಸಹಾಯವಾಣಿ ಸಂಯೋಜಕ ಎಮ್ ಕೆ ಕುಂದರಗಿ , ತಂಡದ ಸದಸ್ಯರಾದ ಸುಧಾ ಗಟ್ಟಿ ,ಬಸವರಾಜ ನಿವರ್ಾಣಿ , ನಿಂಗಪ್ಪಾ ಮರಿಕಟ್ಟಿ , ರಾಜು ಬೊಜಪ್ಪಗೋಳ , ಶಿವಲೀಲಾ ಹಿರೇಮಠ ಉಪಸ್ಥಿತರಿದ್ದರು