ಕಾರ್ಮಿಕ, ನೌಕರರ ಭವಿಷ್ಯ ನಿಧಿ ಹಿತಾಸಕ್ತಿ ಮುಖ್ಯ: ರೂಪೇಶ

Interests of workers, employees' provident funds are important: Rupesh

ಬಾಗಲಕೋಟೆ 28: ಕಾರ್ಮಿಕರ ಹಾಗೂ ನೌಕರರ ಹಿತಾಶಕ್ತಿ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಬಿ.ವಿ.ವಿ. ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಭವಿಷ್ಯ ನಿಧಿ ಪ್ರಾದೇಶಿಕ ಕಾರ್ಯಾಲಯದ ಜಾರಿ ನಿರ್ದೇಶನ ಅಧಿಕಾರಿ ರೂಪೇಶ ಹೇಳಿದರು. 

ಅವರು ನಗರದ ಬಿ.ವಿ.ವಿ.ಸಂಘದ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಭಾರತ ಸರಕಾರದ ಭವಿಷ್ಯ ನಿಧಿ ರಾಯಚೂರ ವಿಭಾಗ, ಬಿ.ವಿ.ವಿ.ಸಂಘದ ನೌಕರರ ಕ್ಷೇಮಾಭಿವೃದ್ಧಿ ಕಾರ್ಯಾಲಯದ ಸಹಯೋಗದಲ್ಲಿ  ಹಮ್ಮಿಕೊಂಡ ಭವಿಷ್ಯನಿಧಿ ಹಿತಾಸಕ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. 

ಜನರ ಹಾಗೂ ಕಾರ್ಮಿಕರ, ನೌಕರರ ಅಹವಾಲುಗಳನ್ನು ಮಾನವಿಯ ಅನುಕಂಪದೊಂದಿಗೆ ಸ್ಪಂದಿಸಿ ಅವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅವರ ಹಿತಾಸಕ್ತಿಯನ್ನು ಕಾಪಾಡಬೇಕು, ಆ ನಿಟ್ಟಿನಲ್ಲಿ ಬಿ.ವಿ.ವಿ.ಸಂಘದ ಹಾಗೂ ಸಂಘದ ನೌಕರರ ಕ್ಷೇಮಾಭಿವೃದ್ಧಿಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು. 

ಪ್ರಛಂಧಕರಾದ ಶ್ರೀನಿವಾಸ ಹಾಗೂ ಶಾಮರಾವ ಅತಿಥಿಗಳಾಗಿ ಪಾಲ್ಘೊಂಡಿದ್ದರು. ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ. ಜಗನ್ನಾಥ ಚವ್ಹಾಣ ಅವರು ಮಾತನಾಡಿ ಮನೆ ಬಾಗೀಲಿಗೆ ಸರಕಾರ ಎನ್ನುವಂತೆ, ಪ್ರತಿತಿಂಗಳು ನಡೆಯುವ ಈ ಕಾರ್ಯಕ್ರಮದ ಸದುಪಯೋಗವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕು ಎಂದರು. 

ಪ್ರಾಸ್ತಾವಿಕವಾಗಿ ಬಿ.ವಿ.ವಿ.ಸಂಘದ ನೌಕರರ ಕ್ಷೇಮಾಭಿವೃದ್ಧಿ ಅಧಿಕಾರಿ ಎಚ್‌.ಎನ್‌.ಯಾದವಾಡ ಅವರು ಮಾತನಾಡಿ ಭವಿಷ್ಯನಿಧಿಯ ಹಿತಾಸಕ್ತಿ ಕಾರ್ಯಕ್ರಮದ ಉದ್ದೇಶ ಹಾಗೂ ಸಮಾಜಿಕ ಸುರಕ್ಷಾ ಯೋಜನೆಗಳನ್ನು ವಿವರಿಸಿದರು. 

ಐಕ್ಯೂಎಸಿ ಸಂಯೋಜಕರಾದ ನಾವದಗಿ, ಡಾ.ನಂಜುಂಡಸ್ವಾಮಿ, ಜಾಜಿಮಠ,ಐಕೆ ಮಠದ ಸೇರಿದಂತೆ ಅನೇಕರು ಇದ್ದರು. 

ಬಾಗಲಕೋಟೆ ಜಿಲ್ಲೆಯ ಶಾಲೆ ಕಾಲೇಜು, ಕಾರ್ಖಾನೆ- ಉದ್ದಿಮೆ ಮುಂತಾದ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಕಾರ್ಮಿಕರು ಹಾಗೂ ನೌಕರರ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಯಿತು.