‘ತೆರಿಗೆ ಬಾಕಿ ಎರಡು ತಿಂಗಳಲ್ಲಿ ತುಂಬುವವರಿಗೆ ಬಡ್ಡಿ ರಿಯಾಯಿತಿ’
Interest discount for those who pay tax arrears within two months
ಸಿಂದಗಿ 28: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆ ಡಾ.ಶಾಂತವೀರ ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಬರುವ ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆ ತೆರಿಗೆ ಬಾಕಿ ಹಣವನ್ನು ಎರಡು ತಿಂಗಳ ಒಳಗಾಗಿ ಹಣ ತುಂಬುವವರಿಗೆ ಬಡ್ಡಿ ರಿಯಾಯಿತಿ ನೀಡಲಾಗುವುದು, ಭೋಜಾ ದಾಖಲಿಸುವ ಹಣ ಹೊರೆಯಾಗಿತ್ತು. ಸಾಲಗಾರರಿಗೆ ಹೊರೆ ಕಡಿಮೆ ಮಾಡಲು ಎಷ್ಟೇ ಸಾಲ ಪಡೆದಿದ್ದರೂ ಆ ಆಸ್ತಿಯ ಮೇಲೆ ಭೋಜಾ ದಾಖಲಿಸಲು 500 ರೂ. ದರ ನಿಗದಿ ಮಾಡಲಾಗಿದೆ. ಇದರಿಂದ ಸಾಲಗಾರರಿಗೆ ಅನಕೂಲಕರವಾಗುತ್ತದೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ 15ನೇ ಹಣಕಾಸಿನಲ್ಲಿ ಬಂದ ಅನುದಾನ 1.94 ಕೋಟಿ ರೂ. ಈ ಅನುದಾನವನ್ನು ಎರಡು ರೀತಿ ವಗೀಕರವಾಗುತ್ತದೆ. 1.16 ಕೋಟಿ ರೂ. ಟೈಮ್ ಗ್ರ್ಯಾಂಟ್‌ಗೆ ನಿಗದಿ ಮಾಡಲಾಗಿದೆ. ಈ ಹಣ ಬಳಕೆ ಮಾಡಲಾಗುವುದಿಲ್ಲ. ಉಳಿದ 78 ಲಕ್ಷ ರೂ. ಹಣದಲ್ಲಿ 23 ವವಾರ್ಡಗಳಿಗೆ ಹಂಚಿಕೆ ಮಾಡಿದರೇ ವಾರ್ಡನಲ್ಲಿ ಒಂದು ಚರಂಡಿ ನಿರ್ಮಾಣ ವಾಗುವುದಿಲ್ಲ. ಆದ್ದರಿಂದ ಎಲ್ಲ ಅಗತ್ಯವಿದೆಯೋ ಅಲ್ಲಿ ಅನುದಾನವನ್ನು ಬಳಕೆ ಮಾಡಲಾಗಿದೆ. ಸಿಂದಗಿ ಪುರಸಭೆ ಅಭಿವೃರ್ದಧಿಗೆ 25 ಕೋಟಿ ಅನುದಾನಕ್ಕೆ ಸರ್ಕಾರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಶಿಘ್ರದಲ್ಲಿ ಅನುದಾನ ಬಿಡುಗಡೆಯಾಗುತ್ತದೆ. ಈ ಅನುದಾನವನ್ನು ಎಲ್ಲ ವಾರ್ಡಗಳಿಗೆ ಅಭಿವೃದ್ಧಿಗಾಗಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಸದಸ್ಯರಾದ ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಬಸವರಾಜ ಯರನಾಳ, ಗೋಲ್ಲಾಳ ಬಂಕಲಗಿ, ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ ಇನ್ನೂಳಿದ ಸದಸ್ಯರು, ಹಿರಿಯ ಆರೋಗ್ಯ ನೀರೀಕ್ಷಕ ನಬಿರಸೂಲ ಉಸ್ತಾದ, ಅಧಿಕಾರಿ ಸಿದ್ದು ಅಂಗಡಿ, ಅಭಿಯಂತರ ದಯಾನಂದ ಇವಣಿ ಹಾಗು ಸಿಬ್ಬಂಧಿ ಸಭೆಯಲ್ಲಿ ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 