ಇಂದಿನಿಂದ ಅಂತರ ವಲಯ ಪುರುಷರ ಕಬಡ್ಡಿ ಪಂದ್ಯಾವಳಿ

ಲೋಕದರ್ಶನವರದಿ

ಬ್ಯಾಡಗಿ17: ಬರುವ ಫೆ.18 ಮತ್ತು 19 ಎರಡು ದಿನಗಳ ಕಾಲ ಕನರ್ಾಟಕ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಪ್ರಥಮ ವಲಯ ಹಾಗೂ ಅಂತರ ವಲಯ ಪುರುಷರ ಕಬಡ್ಡಿ ಪಂದ್ಯಾವಳಿಗೆ ಪಟ್ಟಣದ ಬಿಇಎಸ್ಎಂ ಪದವಿ ಕಾಲೇಜು ಆವರಣ ದಲ್ಲಿ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.

 ಆತಿಥ್ಯ ವಹಿಸಿಕೊಂಡಿರುವ ಬಿಇಎಸ್ಎಂ ಪದವಿ ಕಾಲೇಜು, ಯುವಜನ ಸೇವಾ ಕ್ರೀಡಾ ಇಲಾಖೆ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಹಾಗೂ ಕವಿವಿ ದೈಹಿಕ ಉಪನ್ಯಾಸಕರ ಸಂಘ ಇವರ ಸಹಯೋಗದೊಂದಿಗೆ ಕಬಡ್ಡಿ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ.

 ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಹಾವೇರಿ ಮತ್ತು ಕಾರವಾರ ಜಿಲ್ಲೆಯ ಸುಮಾರು 30 ಕ್ಕೂ ಹೆಚ್ಚು ಕಾಲೇ ಜುಗಳ ಪುರುಷ ತಂಡಗಳು, 200ಕ್ಕೂ ಹೆಚ್ಚು ಕ್ರೀಡಾಪಟುಗಳು, ಸೇರಿದಂತೆ ರಾಷ್ಟ್ರಮಟ್ಟದ ತೀಪರ್ುಗಾರರು ಸದರಿ ಪಂದ್ಯಾ ವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುಸಜ್ಜಿತ ಮಣ್ಣಿನ ಅಂಕಣ: ಸುಮಾರು 50 ಕ್ಕೂ ಪಂದ್ಯಗಳು ನಡೆಯಲಿದ್ದು ಯುವಜನ ಸೇವಾ ಕ್ರೀಡಾ ಇಲಾಖೆಯ ಕಬಡ್ಡಿ ಕೋಚ್ ಮಂಜುಳ ಭಜಂತ್ರಿ, ಸ್ಥಳೀಯ ದೈಹಿಕ ಶಿಕ್ಷಕ ಶಶಿಧರ ಮಾಗೋಡ ಸೇರಿದಂತೆ ಶಿಕ್ಷಣ ಇಲಾಖೆ ಎ.ಟಿ.ಪೀಠದ, ಎಚ್.ಬಿ.ದಾಸರ, ಬಿ.ಬಸವರಾಜಪ್ಪ ತೀಪರ್ುಗಾರ ಮಲ್ಲಿಕಾಜರ್ುನ ಕೋಡಿಹಳ್ಳಿ ಇವರ ಮಾರ್ಗದರ್ಶನದಲ್ಲಿ ಸುಸಜ್ಜಿತವಾದ ಎರಡು ಮಣ್ಣಿನ ಅಂಕಣಗಳನ್ನು ಸಿದ್ಧಪಡಿಸಲಾಗಿದೆ.

ಸುಮಾರು 2 ಸಾವಿರ ಪ್ರೇಕ್ಷಕರು ಸೇರುವ ನೀರಿಕ್ಷೆ: ಕಬಡ್ಡಿ ಆಟವೆಂದರೆ ಪಟ್ಟಣದ ಜನರಿಗೆ ಇನ್ನಿಲ್ಲದ ಆಸಕ್ತಿ, ಹೀಗಾಗಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಪಂದ್ಯಾವಳಿಯನ್ನು ವೀಕ್ಷಿಸಲು ಸೇರುವ ನಿರೀಕ್ಷೆಯಿದ್ದು ಅಪ್ಪಟ ದೇಶೀಯ ಕಬಡ್ಡಿ ಆಟದ ರಸದೌತಣವನ್ನು ಸವಿಯಲಿದ್ದಾರೆ.

ಯುಮುಂಬಾ ತರಬೇತುದಾರ ರವೀಂದ್ರ ಶೆಟ್ಟಿ ವೀಕ್ಷಣೆ: ಪ್ರೋ-ಕಬಡ್ಡಿಯ ಖ್ಯಾತಿಯ ಯುಮುಂಬಾ ತಂಡದ ತರಬೇತುದಾರ ರವೀಂದ್ರ ಶೆಟ್ಟಿ ಬಿಇಎಸ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿದರು, ಕ್ರೀಡಾಪಟುಗಳು ಸೇರಿದಂತೆ ಅಂಕಣದ ಸಿದ್ಧತೆಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಸ್ಥಳೀಯ ತಂಡ ಫೇವರಿಟ್:ಆತಿಥೇಯ ಬಿಇಎಸ್ ಪದವಿ ಕಾಲೇಜು ಸೇರಿದಂತೆ ಭಟ್ಕಳ, ಹಾನಗಲ್ಲ ಹಾಗೂ ಕವಿವಿ ಪಿಜಿ ಪುರುಷ ತಂಡಗಳು ಪ್ರಶಸ್ತಿಯನ್ನು ಗೆಲ್ಲುವ ಫೇವರಿಟ್ ಎನಿಸಿದ್ದು ಪಂದ್ಯಾವಳಿಯು ಅತ್ಯಂತ ಕುತೂಹಲಕಾರಿಯಾಗಿ ನಡೆಯುವ ನಿರೀಕ್ಷೆಯಿದೆ.

 ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿದರ್ೇಶಕ ಡಾ.ಎಸ್.ಎನ್.ನಿಡಗುಂದಿ, ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆ ಕಾರ್ಯದಶರ್ಿ ಶಿವಾನಂದ ಮಲ್ಲನಗೌಡರ, ತೀಪರ್ುಗಾರರ ಮಂಡಳಿ ಛೇರ್ಮನ ಸಿ.ಜಿ.ಚಕ್ರಸಾಲಿ, ಪ್ರಾಚಾರ್ಯ ಕೆ.ಜಿ. ಖಂಡೇಬಾಗೂರ ಉಪನ್ಯಾಸಕರಾದ ಎಂ.ಜಿ.ನಂದರಗಿ ಸಿ.ಶಿವಾನಂದಪ್ಪ, ಕೆ.ಎಂ.ಕಟಗೀಹಳ್ಳಿ, ಎಸ್.ವಿ.ಉಜ್ಜಯನಿಮಠ, ಎನ್.ಎಸ್.ಪ್ರಶಾಂತ್, ಸುರೇಶ ಪಾಂಗಿ, ಪ್ರಭು ದೊಡ್ಮನಿ ಸಿಬ್ಬಂದಿಗಳಾದ ಮಾಧು ಸಂಕಣ್ಣನವರ, ಎಸ್.ಎಚ್.ಕುರಕುಂದಿ, ಸಂತೋಷ ಉದ್ಯೋಗಣ್ಣವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು