ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ತೀವ್ರ ಶೋಧ ಕಾರ್ಯಾಚರಣೆ ಆರಂಭ

ಶ್ರೀನಗರ, ಫೆ 27, ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್ನಲ್ಲಿ ಭದ್ರತಾ ಪಡೆಗಳು ಗುರುವಾರ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.  ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನ ರಾಷ್ಟ್ರೀಯ ರೈಫಲ್ಸ್ , ಸಿಆರ್ ಪಿಎಫ್ ಮತ್ತು ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ಪಡೆಗಳು ಇಂದು ಬೆಳಿಗ್ಗೆ ಉಗ್ರರ ಅಡಗಿರುವ ಬಗ್ಗೆ ಸುಳಿವು ಪಡೆದ ತಕ್ಷಣವೇ ಶೋಪಿಯಾನ್ನ ಅಗ್ಲಾರ್ ಜೈನ್ಪೊರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.   ಭದ್ರತಾ ಪಡೆಗಳು ಈ ಪ್ರದೇಶದ ಎಲ್ಲಾ ನಿರ್ಗಮನ ಸ್ಥಳಗಳನ್ನು ಬಂದ್ ಮಾಡಿ,  ಮನೆ-ಮನೆಗೆ ಹೋಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇತ್ತೀಚಿನ ವರದಿಗಳು ಬರುವವರೆಗೆ  ಕಾರ್ಯಾಚರಣೆ ಮುಂದುವರೆದಿತ್ತು.   ಈ ಮಧ್ಯೆ, ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ತಡೆಯಲು ಪಕ್ಕದ ಪ್ರದೇಶಗಳಲ್ಲಿನ ಹೆಚ್ಚುವರಿ ಭದ್ರತಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಈ  ಪ್ರದೇಶದಲ್ಲಿ ನಿಯೋಜಿಸಲಾಗಿದೆ.