ವೀರಯೋಧ ದಿ. ರಾಜಶೇಖರ ಗೋಟ್ಯಾಳ ರವರ ಮೂರ್ತಿ ಪ್ರತಿಷ್ಠಾಪಣೆ
Installation of the statue of the heroic warrior Late. Rajashekar Gotyal
ಚಡಚಣ, 01 : ತಾಲ್ಲೂಕಿನ ಬರಡೋಲ ಗ್ರಾಮದ ವೀರಯೋಧ ದಿ. ಶ್ರೀ ರಾಜಶೇಖರ ಲಕ್ಷಣ. ಗೋಟ್ಯಾಳ ರವರ 50 ನೇ ಜನ್ಮದಿನದ ಸವಿ ನೇನಪಿಗಾಗಿ ಬರಡೋಲ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಯೋಧನ ಮೂರ್ತಿ ಪ್ರತಿಷ್ಠಾಪಣೆ ಬುಧವಾರ ವಿಜೃಂಭಣೆಯಿಂದ ಜರುಗಿತು.ಬರಡೋಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಯೋಧನ ಮೂರ್ತಿಯನ್ನು ತೇರೆದ ರಥದಲ್ಲಿಟ್ಟು ನೂರಾರು ಜನಸ್ತೋಮದ ಸಮ್ಮುಖದಲ್ಲಿ ಭಾರತ ಧ್ವಜ ಹಿಡಿದು ಭಾರತ ಮಾತೆಗೆ ಜೈ-ಘೋಷ ಹಾಕುತ್ತ ಮೆರವಣಿಗೆ ಮಾಡಲಾಯಿತು.ಚಡಚಣ ವಿರಕ್ತ ಮಠದ ಶ್ರೀ ಮನಿಪ್ರ ಷಡಕ್ಷರಿ (ಮಲ್ಲಿಕಾರ್ಜುನ) ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದು, ಮೂರ್ತಿ ಪ್ರತಿಷ್ಠಾಪನಾ ಪೂಜೆಯನ್ನು ಬರಡೋಲದ ಗುರುಸ್ವಾಮಿ ಹಿರೇಮಠ ಸ್ವಾಮಿಗಳು ನೇರವೇರಿಸಿದರು.ದಿ.ಯೋಧ ರಾಜಶೇಖರ ಗೋಟ್ಯಾಳ ಅವರ ಮೂರ್ತಿ ಪ್ರತಿಷ್ಠಾಪಣೆಗೆ ತಗಲುವ ಎಲ್ಲ ಖರ್ಚನ್ನು ನಾಗಠಾಣ ಮಾಜಿ ಶಾಸಕರಾದ ಡಾ: ದೇವಾನಂದ ಚವ್ಹಾಣ ರವರ ಕೊಡಗೆ ಅಪಾರವಾಗಿದೆ ಎಂದು ದಿವಂಗತ ಯೋಧನ ಸಂಬಂಧಿಕರು ಹರ್ಷ ವ್ಯಕ್ತಪಡಿಸಿದರು.
ಆದರೇ ಮಾಜಿ ಶಾಸಕರಾದ ಡಾ: ದೇವಾನಂದ ಚವ್ಹಾಣ ರವರು ಮುಖ್ಯವಾದ ಕೆಲಸಕ್ಕೆ ಶ್ಯಾಪೇಟಿಗೆ ಹೊಗಿದ್ದರಿಂದ ಈ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದರು.ಮತ್ತು ಪತ್ರಿಕೆಯ ಮುಖಾಂತರ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ದಿ.ಯೋಧ ರಾಜಶೇಖರ ಗೋಟ್ಯಾಳ ಅವರು 28.05.1975 ರಲೆಲಿ ಜನಿಸಿ 10 ನೇ ತರಗತಿ ಪಾಸಾದ ನಂತರ ಇಂಡಿಯನ್ ಆರ್ಮಿಯಲ್ಲಿ ಸೇರಿ ಸತತ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ನಂತರ ಇನ್ನು ಸೇವೆ ಮಾಡುವ ಸಲುವಾಗಿ ಅವರು ಇಂಡಿಯನ್ ರಿಸರ್ವ ಬೆಟಾಲಿಯನ್ ಪೋಲಿಸ್ ಇಲಾಖೆಯಲ್ಲಿ ಸೇರಿ ಸುಮಾರು ಮೂರು ವರ್ಷ ಗಳಾಗಿದ್ದವು.ಅದು ಹೆಚ್ಚಿನ ತರಬೇತಿ ಹಂತದಲ್ಲಿ ಝಾರ್ಖಂಡ ರಾಜ್ಯದಲ್ಲಿದ್ದಾಗ ಹೃದಾಯಾಘತದಿಂದಾಗಿ ವೀರ ಮರಣವನ್ನು 26.03.2922 ರಂದು ಸಂಭವಿಸಿತ್ತು ಮೃತ ಯೋಧನಿಗೆ ಪತ್ನಿ, ಒಬ್ಬ ಮಗನಿದ್ದು ಇಬ್ಬುರು ಹೆಣ್ಣು ಮಕ್ಕಳಿದ್ದಾರೆ, ತಂದೆ, ತಾಯಿ, ಸೋದರ, ಸಹೋದರಿ ಇದ್ದಾರೆ.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಧೋಂಡ ಅವರು ಸೈನಿಕರು ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಶ್ರಮಜೀವಿಯಾಗಿದ್ದು ದೇಶಕ್ಕೆ ಅವರ ಸೇವೆ ಅವಿಸ್ಮರಣೀಯವೆಂದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷರಾದ ಲಕ್ಷ್ಮಣ ಝಳಕಿ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಡಾ: ಉದಯ ಕಾರಜೋಳ, ಚಡಚಣ ತಾಲ್ಲೂಕಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂತುಗೌಡ ಎಸ್ ಪಾಟೀಲ, ಮಾಜಿ ಸೈನಿಕರಾದ ಬರಡೋಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ಅಂಬಿಗೇರ ಗ್ರಾಮದ ಮುಖಂಡರಾದ ಜಿ.ಪಂ.ಮಾಜಿ ಉಪಾಧ್ಯಕ್ಷರ ಶ್ರೀಶೈಲಗೌಡ ಬಿರಾದಾರ, ತಾ.ಪಂ.ಮಾಜಿ ಸದಸ್ಯ ರಾಜು ಝಳಕಿ, ವಕೀಲರಾದ ಗಜಾನಂದ ಪವಾರ, ನಿವೃತ್ತ ಪ್ರಾಚಾರ್ಯರಾದ ಎಸ್.ಎಲ್.ಮೇತ್ರಿ ಭೀಮರಾಯ ಮೇತ್ರಿ, ಅರ್ಜುನ ಮೇತ್ರಿ, ಚನ್ನಪ್ಪ ಗೋಟ್ಯಾಳ, ಚಡಚಣ ತಾ.ಪಂ.ಮಾಜಿ ಸದಸ್ಯ ರಾಮಣ್ಣಾ ಅವಟಿ, ಚಡಚಣ ಪ.ಪಂ. ಸದಸ್ಯರಾದ ಶ್ರೀಕಾಂತ ಗಂಟಗಲ್ಲ, ಚಂದ್ರಕಾಂತ ಕಲಮನಿ, ಚೇತನ ನಿರಾಳೆ, ಚಡಚಣ ಪ.ಪಂ.ನಾಮನಿರ್ದೇಶಿತ ಸದಸ್ಯ ವಾಸೀಂ ಮುಲ್ಲಾ , ವಿವಿಧ ಕಡೆಯಿಂದ ಆಗಮಿಸಿದ ಸೈನಿಕರಿಗೆ, ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಮಸ್ತ ಬರಡೋಲ ಗ್ರಾಮದ ಮುಖಂಡರು ಹಾಗೂ ಯುವಕರು ಸಹಕರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 