ಚನ್ನವೀರೇಶ್ವರ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನ
Installation of the statue of Channaveereshwara Mahaswamy
ವಿಜಯಪುರ 17: ಚನ್ನವಿರೇಶ್ವರ ಅಕ್ಷರ ಕ್ರಾಂತಿ ನಾಡಿಗೆ ಶ್ರೇಷ್ಠವಾದದ್ದು ರಾಜ ಯೋಗಿಂದ್ರ ಮಹಾಸ್ವಾಮಿಗಳು ಶ್ರೀ ಚನ್ನವೀರೇಶ್ವರ ವಿದ್ಯಾ ವರ್ಧಕ ಸಂಘ ನಿಡೋಣಿ ಚನ್ನವೀರೇಶ್ವರ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹಳೆ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಶನಿವಾರ ದಿ. 15 ನವಂಬರ್ 2025 ರಂದು ಮುಂಜಾನೆ 9:00ಗೆ ವಿರಕ್ತಮಠದಿಂದ ಶಾಲಾ ಆವರಣದವರೆಗೆ ಕುಂಭಮೇಳ ಹಾಗೂ ಮೂರ್ತಿ ಮೆರವಣಿಗೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ಕುದುರೆ ಕುಣಿತಗಳ, ಮೆರವಣಿಗೆಯೊಂದಿಗೆ ಶಾಲಾ ಆವರಣದಲ್ಲಿ ಶ್ರೀ ಚನ್ನವೀರೇಶ್ವರ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆಯನ್ನು ಮಹಾರಾಜ ನಿರಂಜನ ಜಗದ್ಗುರು ರಾಜ ಯೋಗಿಂದ್ರ ಮಹಾಸ್ವಾಮಿಗಳ ಮೂರುಸಾವಿರ ಮಠ ಹುಬ್ಬಳ್ಳಿ ಇವರ ಅಮೃತ ಹಸ್ತದಿಂದ ಮೂರ್ತಿ ಅನಾವರಣ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಪರಮಪೂಜ್ಯರು ಸದಾಕಾಲವೂ ಬರದಿಂದ ಕೂಡಿದ ಈ ಭಾಗದಲ್ಲಿ ಅಕ್ಷರ ಕ್ರಾಂತಿ ಮಾಡಿದ ಚನ್ನವಿರೇಶ್ವರ ಮಹಾಸ್ವಾಮಿಗಳ ಸೇವೆ ಅನನ್ಯ .ಈ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿ ಇಂದು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು ಈ ಭಾಗದ ಜ್ಞಾನ ದಾಸೋಹ ಎಂಬ ಖ್ಯಾತಿ ಪಡೆದಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ದಲಿಂಗೇಶ್ವರ ಸ್ವಾಮಿಗಳು ವಹಿಸಿದರು. ಗಣ ಅಧ್ಯಕ್ಷ ಸ್ಥಾನ ವಹಿಸಿದ ಶ್ರೀಶೈಲ್ ಗೌಡ ಬಿ ಪಾಟೀಲ್ ರವರು ಮಾತನಾಡಿ ಈ ಭಾಗದಲ್ಲಿ ಕಡು ಬಡತನದಲ್ಲಿ ಇದ್ದ ಜನತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸದುದ್ದೇಶದಿಂದ ಪ್ರಾರಂಭಿಸಲಾದ ಈ ಶಿಕ್ಷಣ ಸಂಸ್ಥೆಯು ಇಂದು 37 ವರ್ಷಗಳ ಕಾಲ ಉಚಿತ ಶಿಕ್ಷಣ ನೀಡಿ ಸಹಸ್ರಾರು ಮಕ್ಕಳ ಪಾಲಿಗೆ ಕಲ್ಪವೃಕ್ಷವಾಗಿ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಆಡಳಿತ ಮಂಡಳಿಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು ಸಾಯಂಕಾಲ 4:00ಗೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 1988ರಿಂದ 2025 ರ ವರೆಗೆ ಸುಮಾರು 2500 ಹಳೆ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 