ಜೈನ ಮಂದಿರದಲ್ಲಿ ಶ್ರೀಮುನಿಸ್ರುವತ್ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಹುಂಡಿಯಾಭವನ ಲೋಕಾರೆ್ಣ
Installation of the idol of Sri Munisruvat Swami in the Jain temple and opening of Hundiya Bhavan to
ಲೋಕದರ್ಶನ ವರದಿ
ಕಂಪ್ಲಿ 16 : ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜೈನ್ ಮಂದಿರದಲ್ಲಿ ಶ್ರೀಮುನಿಸ್ರುವತ್ ಶ್ವೇತಾಂಭರ ಸಂಘದಿಂದ ಜೈನ್ ಸಮುದಾಯಾದ ಆರಾಧ್ಯದೇವರಾದ ಶ್ರೀಮುನಿಸ್ರುವತ್ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಹುಂಡಿಯಾ ಭವನ ಲೋಕಾರೆ್ಣ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜೈನ ಮುನಿಗಳಾದ ಶ್ರೀ ಅಭಯಶೇಖರ ಸೂರೀಶ್ವರಜೀ ಹಾಗೂ ಜೈನ ಸನ್ಯಾಸಿಗಳ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿದವು.ಬೆಳಿಗ್ಗೆ ಜೈನ ಮಂದಿರದಲ್ಲಿ ಶ್ರೀಮುನಿಸ್ರುವತ್ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆಯು ಶ್ರಿ ಅಭಯ ಶೇಖರ್ ಸೂರೀಶ್ವರಜಿ ಹಾಗೂ ಜೈನ ಸನ್ಯಾಸಿಗಳ ಅಮೃತ ಹಸ್ತದಿಂದ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿ, ಸಡಗರ ಸಂಭ್ರಮಗಳಿಂದ ಜರುಗಿದವುನಂತರ ಜೈನ ಗುರುಗಳಾದ ಶ್ರೀ ಅಭಯಶೇಖರ್ ಸೂರೀಶ್ವರಜಿ ಶುಭ ಆಶೀರ್ವಚನ ನೀಡಿ ಮಾನಸಿಕ ಶಾಂತಿ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ದೆ,ಭಕ್ತಿಯಿಂದ ನಡೆಸಿಕೊಂಡು ಹೋಗಬೇಕು,.
ನಂತರ ಕಂಪ್ಲಿಯ ಹುಂಡಿಯಾ ಕುಟುಂಬದವರು ಸಮಾಜಕ್ಕಾಗಿ ನಿರ್ಮಿಸಿರುವ ಹುಂಡಿಯಾ ಭವನವನ್ನು ಜೈನ ಗುರುಗಳಾದ ಶ್ರೀ ಅಭಯಶೇಖರ್ ಸೂರೀಶ್ವರಜಿ ನೇತೃತ್ವದಲ್ಲಿ ಹುಂಡಿಯಾ ಕುಟುಂಬದ ಹಿರಿಯರಾದ ಧನರಾಜ ಫಾರಸ್ ಮಲ್ ಹುಂಡಿಯಾ ಹಾಗೂ ಕುಟುಂಬದವರು ಲೋಕಾರೆ್ಣಗೊಳಿಸಿದರು.ನಂತರ ಗುರುಮಠದಲ್ಲಿ ಶ್ರೀಅಭಯಶೇಖರ ಸೂರೀಶ್ವರಜಿ ಅವರಿಂದ ಪ್ರವಚನ ಕಾರ್ಯಕ್ರಮ ಹಾಗೂ ಸಂಗಿತಗಾರರಿಂದ ಭಕ್ತಿಗಿತೆ ಹಾಗೂ ಭಜನಾ ಕರ‌್ಯಕ್ರಮಗಳು ನಡೆದವು. ನಂತರ ಜೈನ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದವರಿಗೆ ಅನ್ನ ಸಂರ‌್ಪಣೆ ಜರುಗಿತು.
ಸ್ಥಳೀಯ ಶಾಸಕ ಜೆ.ಎನ್.ಗಣೇಶ ಅವರ ಅಳಿಯ ರಾಜೇಶಸಿಂಗ್ ದೇವರ ದರ್ಶನ ಪಡೆದುಕೊಂಡರು.ಈ ಕಾರ್ಯಕ್ರಮದಲ್ಲಿ ಶ್ರೀ ಮುನಿಸ್ರುವತ್ ಸ್ವಾಮಿ ಶ್ವೇತಾಂಬರ ಸಂಘದ ಅಧ್ಯಕ್ಷ ಜವೆರಿಲಾಲ್ ಬಾಗ್ರೇಚಾ, ಮನೋಹರ್ ಬಾಗ್ರೆಚಾ, ದನರಾಜ ಫಾರಸ್ ಮಲ್ ಹುಂಡಿಯಾ, ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್,ಮನು ಸಿಂಘ್ವಿ,ಅಮೃತ್ ಲಾಲ್ ದಂತೆವಾಡಿಯಾ, ಫತೇಕುಮಾರ್ ಭಾಫಣಾ, ಅಶೋಕ ದಾತೇವಾಡಿಯಾ, ಮುಖಂಡರಾದ ಕೆ.ಶ್ರೀನಿವಾಸರಾವ್, ಎ.ಸಿ.ದಾನಪ್ಪ, ಹೊನ್ನಳ್ಳಿ ಗಂಗಾಧರಗೌಡ, ಕೆ.ಮನೋಹರ, ಹಾಗೂ ಜೈನ ಸಮಾಜದ ಯುವಕ, ಯುವತಿಯರ ಸಂಘದ ಪದಾಧಿಕಾರಿಗಳು, ಮಹಿಳೆಯರು, ವಿವಿದ ಸಮಾಜಗಳ ಮುಖಂಡರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 