ಮೇ 1ರಂದು ಅಂಬಾಭವಾಯಿ ದೇವಸಸ್ಥಾನದಲ್ಲಿ ಮೂರ್ತಿಪ್ರಾಣ ಪ್ರತಿಷ್ಠಾಪನೆ

ಮೇ 1ರಂದು ಅಂಬಾಭವಾಯಿ ದೇವಸಸ್ಥಾನದಲ್ಲಿ ಮೂರ್ತಿಪ್ರಾಣ ಪ್ರತಿಷ್ಠಾಪನೆ Installation of idols at Ambabhavai Temple on May 1st

ನಾಳೆ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಗಳಿಂದ ಕಳಸಾ ರೋಹಣ ಸಹಸ್ರಾರ್ಜುನ ಸಮುದಾಯ ಭವನ ಉದ್ಘಾಟನೆ    

ಲಕ್ಷೇಶ್ವರ 30: ಪಟ್ಟಣದ 9ನೇ ವಾರ್ಡಿನಲ್ಲಿ ಬರುವ ಎಸ್‌ಎಸ್‌ಕೆ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಸಕಲ ಶಾಸ್ರೋಕ್ತವಾಗಿ ಹೋಮ, ಹವನ ಪೂಜೆಯೊಂದಿಗೆ ಗಣಪತಿ, ಸುಬ್ರಹ್ಮಣ್ಯ, ಸಿಂಹ, ಕೂರ್ಮ, ಶ್ರೀದೇವಿಯ ಪಾದುಕಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವುದು.  

ನಾಳೆ ಮೇ 1ರಂದು ಬೆಳಿಗ್ಗೆ 9 ಗಂಟೆಗೆ ಅಂಬಾಭವಾನಿ ದೇವಸ್ಥಾನದ ಕಳಸಾರೋಹಣವನ್ನು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ನೆರವೇರಿಸುವರು. ಸಹಸ್ರಾರ್ಜುನ ಸಮುದಾಯ ಭವನವನ್ನು ಅಖಿಲ ಭಾರತ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಸ್ವಾಮಿಸಾ ಲಕ್ಷ್ಮಣಸಾ ಖೋಡೆ ನೆರವೇರಿಸುವರು. ಎಎಸ್‌ಕೆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಡಾ.ಶಶಿಕುಮಾರ ವಿ. ಮೆಹರವಾಡೆ ನೂತನ ಗಣಪತಿ ದೇವಸ್ಥಾನಕ್ಕೆ ಪುಷ​‍್ಾರೆ್ಪಣ ಮಾಡುವರು. ರಾಜ್ಯಸಭಾ ಸದಸ್ಯ ನಾರಾಯಣಸಾ ಕೃಷ್ಣಾಸಾ ಭಾಂಡಗೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು.  

ಪಟ್ಟಣದ ಎಸ್‌ಎಸ್ ಕೆ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪರಶುರಾಮಸಾ ಕೃಷ್ಣಾಸಾ ಬದಿ ಅಧ್ಯಕ್ಷತೆ ವಹಿಸುವರು. ಶ್ರೀನಿವಾಸ ಹರಿಸಾ ಖೋಡೆ, ರಾಮಚಂದ್ರಸಾ ಕಬಾಡಿ, ಸತ್ಯನಾರಾಯಣಸಾ ಡಮಾಮ್, ಟಿ.ಎಂ. ಮೆಹರವಾಡೆ, ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್‌. ಗಡ್ಡದೇವರಮಠ, ಮಾಜಿ, ಸತೀಶ ಮೆಹರವಾಡೆ, ಹನಮಂತಸಾ ಕಾಟವಾ, ಅಶೋಕ ಕಾಟವೆ, ನಾಗೇಶ ಕಲಬುರ್ಗಿ, ನೀಲಕಂಠಸಾ ಜಡಿ, ವಿಠಲಸಾ ಲದ್ವಾ, ಕಾಶಿನಾಥಸಾ, ಭಾಟ್ಟಿ, ಅಂಬಾಸಾ, ಕಬಾಡಿ, ಮಂಜುನಾಥ ನಾರಾಯಣಸಾ ಕಬಾಡಿ, ಶಾಂತಾಬಾಯಿ ಗಣಪತಸಾ ಕಾಟವಾ, ವಿಶ್ವನಾಥ ಮಹಾಂತಶೆಟ್ಟರ, ಫಕ್ಕೀರಸಾ ಭಾಂಡಗೆ, ಶ್ರೀಕಾಂತಸಾ ಖಟವಟಿ, ಪ್ರಕಾಶ ಬಾಕಳೆ, ಭಾಸ್ಕರಸಾ ಜತೂರಿ, ಈಶ್ವರಸಾ ಮಾಧುಸಾ ಮೆಹರವಾಡೆ, ಲೋಕನಾಥ ಭೀಮಸೇನಸಾ ಕಬಾಡಿ ಅವರು ಸೇರಿದಂತೆ ಇನ್ನೂ ಅನೇಕ ಗಣ್ಯ ಮಾನ್ಯರು ಆಗಮಿಸಲಿದ್ದು ಸಮಸ್ತ ಅಂಬಾಭವಾನಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಕಮಿಟಿಯವರು ತಿಳಿದಿದ್ದಾರೆ.