ಫೆ 6 , ಮಂಗಳೂರು-ಕಾಚಿಗೂಡ-ಮಂಗಳೂರು ರೈಲಿನಲ್ಲಿ ಶಾಶ್ವತವಾಗಿ ಹೆಚ್ಚುವರಿಯಾಗಿ ಒಂದು ಸ್ಲೀಪರ್ ಬೋಗಿ ಅಳವಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ. ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲು ಸಂಖ್ಯೆ 17606 ಕಾಚಿಗೂಡ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ಸೇವೆಯ ದಿನಗಳು-ಮಂಗಳವಾರ ಮತ್ತು ಶುಕ್ರವಾರ)ನಲ್ಲಿ ಫೆ 4 ರಿಂದ ಜಾರಿಗೆ ಬರುವಂತೆ ಶಾಶ್ವತವಾಗಿ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚುವರಿಯಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆ ವಿಭಾಗೀಯ ಕಚೇರಿಯ ಪ್ರಕಟಣೆ ತಿಳಿಸಿದೆ. ಹಾಗೆಯೇ, ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲು ಸಂಖ್ಯೆ 17605 ಮಂಗಳೂರು ಸೆಂಟ್ರಲ್- ಕಾಚಿಗೂಡ ಎಕ್ಸ್ ಪ್ರೆಸ್ (ಸೇವೆಯ ದಿನಗಳು- ಬುಧವಾರ ಮತ್ತು ಶನಿವಾರ)ನಲ್ಲಿ ಫೆ 5 ಜಾರಿಗೆ ಬರುವಂತೆ ಶಾಶ್ವತವಾಗಿ ಹೆಚ್ಚುವರಿಯಾಗಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಹೆಚ್ಚಿಸಲಾಗಿದೆ. ರೈಲಿನಲ್ಲಿ ಪರಿಷ್ಕೃತ ಆಸನಗಳ ವರ್ಗ ಕೆಳಕಂಡಂತಿದೆ: ಎಸಿ 2-ಟೈರ್ ಬೋಗಿ ಒಂದು, ಎಸಿ 3-ಟೈರ್ ಬೋಗಿಗಳು-ಎರಡು, ಸ್ಲೀಪರ್ ಕ್ಲಾಸ್ ಬೋಗಿ -8, ಸಾಮಾನ್ಯ ಸೆಕೆಂಡ್ ಕ್ಲಾಸ್ ಬೋಗಿಗಳು -6, ಪ್ಯಾಂಟ್ರಿ ಬೋಗಿ -1 ಮತ್ತು ಸರಕು ಬೋಗಿಗಳು-2.