ಎಚ್. ಕೆ ಪಾಟೀಲ ಸೇವಾ ತಂಡದ ಪರೋಪಕಾರಿ ನಡೆಯ ಪ್ರೇರಣೆಯಿಂದ ಅಂಗಾಂಗ ದಾನ ನೋಂದಣಿಗೆ ಸ್ಫೂರ್ತಿ
Inspired by the philanthropic initiative of the H.K. Patil Seva Team, people are motivated to regist
ಲೋಕದರ್ಶನ ವರದಿ
ಗದಗ 31 : ಮುದ್ರಣ ನಗರಿಯಾದ ಗದಗ ಬೆಟಗೇರಿ ಅವಳಿ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಎಚ್ ಕೆ ಪಾಟೀಲ್ ಸೇವಾ ತಂಡವು ವಿವಿಧ ಕ್ಷೇತ್ರಗಳಲ್ಲಿ ತನ್ನದೇಯಾದ ವಿಶಿಷ್ಠ ಸೇವೆಯನ್ನು ನೀಡುತ್ತಾ ಬಂದಿರುತ್ತದೆ, ಅದು ಬಡಜನಸಾಮಾನ್ಯರ ಗಂಭೀರ ಖಾಯಿಲೆಗಳಿಗೆ ವೈದ್ಯಕೀಯ ನೆರವು, ಬಡ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವನ್ನೋದಗಿಸಿ ಸ್ವಾವಲಂಬಿ ಜೀವನಕ್ಕೆ ನೆರವು, ಶುದ್ಧ ನೀರಿನ ಪೂರೈಕೆ, ಅದರಂತೆ ಜಾಗತಿಕವಾಗಿ ಎಷ್ಟೋ ನಾಗರಿಕರು ಬಹು ಅಂಗಾಂಗಗಳ ವೈಫಲ್ಯದಿಂದ ಬಳಳುತ್ತಿರುವರು ಅವರಿಗೆ ಬಹು ಅಂಗಾಂಗಗಳ ದಾನದಿಂದಾಗಿ ಪುನರ್ಜ್ಜಿವನ ನೀಡಬಹುದಾಗಿದೆ. ಉದಾಹರಣೆಗೆ ಮೂತ್ರಪಿಂಡ, ಹೃದಯ, ಕಣ್ಣು, ಲಿವರ್ ಇತ್ಯಾದಿಗಳನ್ನು ನಾವುಗಳು ಸಂಪ್ರದಾಯದ ಮತ್ತು ಧಾರ್ಮಿಕ ವಿಧಿ-ವಿಧಾನಗಳ ಕಟ್ಟುಪಾಡುಗಳ ಬಂಧನಕ್ಕೋಳಗಾಗಿ ನಮ್ಮ ಅಮೂಲ್ಯವಾದ ದೇಹದ ಅಂಗಾಂಗಗಳಿಂದ ಎಂಟು ಜನರ ಜೀವಕ್ಕೆ ಆಧಾರವಾಗಬಹುದಾಗಿದೆ.
ಇದರ ಒಂದು ಅವಿಸ್ಮರಣೀಯ ಪರಿಕಲ್ಪನೆಯ ಅವಲೋಕನವನ್ನು ಸಮಸ್ತ ನಾಗರಿಕರಿಗೂ ಮನವರಿಕೆ ಮಾಡುವ ಸದುದ್ದೇಶದಿಂದ ಪ್ರತಿವರ್ಷ ಆಗಸ್ಟ್ 13 ರಂದು ವಿಶ್ವ ಅಂಗಾಂಗ ದಾನ ದಿನಾಚರಣೆಯನ್ನು ಹಾಗೂ ಭಾರತದಲ್ಲಿ ರಾಷ್ಟೀಯ ಅಂಗಾಂಗ ದಾನ ದಿನಾಚರಣೆಯನ್ನು ಪ್ರತಿವರ್ಷ ಆಗಸ್ಟ್ 3 ರಂದು ಆಚರಿಸಲಾಗುತ್ತದೆ. ಈ ಒಂದು ಪರೋಪಕಾರಿ ಪುಣ್ಯ ಪ್ರಾಪ್ತಿಯ ಸಮಾಜ್ಯೋನ್ಮುಖಿ ಸೇವೆಯಲ್ಲಿ ಎಚ್ ಕೆ ಪಾಟೀಲ್ ಸೇವಾ ತಂಡವು ತನ್ನ ತಂಡದ ಅಧ್ಯಕ್ಷರು ಸಂಯೋಜಕರು ಮತ್ತು ಕ್ಯಾಪ್ಟನಗಳ ನೆರವಿನೊಂದಿಗೆ ಅಂಗಾಂಗ ದಾನದ ನೋಂದಣಿಯ ಸೇವೆಯಲ್ಲಿ ನಿರತವಾಗಿರುತ್ತದೆ. ಸೇವಾ ಮನೋಭಾವನೆಯ ಪ್ರತಿಫಲವಾಗಿ ಸಮಸ್ತ ಕರ್ನಾಟಕ ರಾಜ್ಯದಲ್ಲಿಯೇ ಅಂಗಾಂಗ ದಾನ ನೋಂದಣಿಯಲ್ಲಿ ಗದಗ ಜಿಲ್ಲೆಯು ತೃತೀಯ ಸ್ಥಾನದಲ್ಲಿ ಮುನ್ನಲೆಯನ್ನು ಸಾಧಿಸಿರುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 