ಟ್ರ್ಯಕ್ಟರ ಮತ್ತು ಲಾರಿ ಚಾಲಕರಿಗೆ ಎಚ್ಚರಿಕೆ ನೀಡಿದ ಇನ್ಸಪೇಕ್ಟರ ಬಸವರಾಜ

Inspector Basavaraja warned tractor and lorry drivers

ಟ್ರ್ಯಕ್ಟರ ಮತ್ತು ಲಾರಿ ಚಾಲಕರಿಗೆ ಎಚ್ಚರಿಕೆ ನೀಡಿದ ಇನ್ಸಪೇಕ್ಟರ ಬಸವರಾಜ  

ಕುಂದರಗಿ 09: ತಾಲೂಕಿನ ಜಮ್ಮ ಶುಗರ್ಸ ಕಾರ್ಖಾನೆ ಕುಂದರಗಿ ಗೆ ಕಬ್ಬು ತುಂಬಿಕೊಂಡು ಹೋಗುವ ಟ್ರ್ಯಕ್ಟರ ಮತ್ತು ಲಾರಿ ಚಾಲಕರಿಗೆ ಬೀಳಗಿ ಪೋಲಿಸ್ ಇನ್ಸಪೇಕ್ಟರ ಬಸವರಾಜ ಹಳಬಣ್ಣವರ ರಸ್ತೆ ನಿಯಮ ಮತ್ತು ವಾಹನ ಸಂಚಾರ ನಿಯಮಗಳ ಬಗ್ಗೆ ಜಾಗ್ರತೆ ಮೂಡಿಸಲಾಯಿತು. 

ಈಗ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಪ್ರಾರಂಬಿಸಿದ್ದು ಲಾರಿ, ಟ್ರ್ಯಕ್ಟರ ಮತ್ತು ಚಕ್ಕಡಿಗಳ ಮೂಲಕ ಕಬ್ಬು ರವಾನಿಸಲಾಗುತ್ತದೆ ಆದರೆ ಚಾಲಕರು ರಸ್ತೆ ಮತ್ತು ಸಂಚಾರ ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಕರ್ಕಶವಾದ ಶಬ್ದದಿಂದ ಸೌಂಡ ಸಿಸ್ಟಮ್ ಅಳವಡಿಕೆ , ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತು ವಾಹನಗಳಿಗೆ ಕಡ್ಡಾಯವಾಗಿ ವಿಮೆ, ಚಾಲಕರ ವಾಹನ ಚಾಲನಾ ಪರವಾಣಿಗೆ ಹಾಗೂ ರಿಫಲೆಕ್ಟರ ಅಳವಡಿಕೆ ಮೂದಲಾದ ನಿಯಮಗಳ ಕುರಿತು ಜಾಗ್ರತೆ ಮೂಡಿಸಿಲಾಯಿತು. ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು, ಜಮ್ಮ ಶುಗರ್ಸ ಕಾರ್ಖಾನೆ ಸಿಬ್ಬಂದಿಗಳು ಮತ್ತು ವಾಹನ ಚಾಲಕರು ಉಪಸ್ಥಿತರಿದ್ದರು