ತೂಕ ಸಾಧನಗಳ ತಪಾಸಣೆ: ತಪ್ಪಿತಸ್ಥರಿಗೆ ದಂಡ
Inspection of weighing instruments: Fines for those found guilty
ಕೊಪ್ಪಳ 17: ಕೊಪ್ಪಳ ನಗರದಲ್ಲಿ ಬೀದಿ ಬದಿ ವ್ಯಾಪಾರಸ್ಥರ ತೂಕ ಮತ್ತು ಸಾಧನಗಳ ತಪಾಸಣೆಯನ್ನು ಮಾಡಲಾಯಿತು. ಕಾನೂನು ಮತ್ತು ಮಾಪನ ಶಾಸ್ತ್ರದ ನೀರೀಕ್ಷಕರಾದ ಎಂ. ಬದಿಯುದ್ದೀನ್ ಅಹಮದ್ ನವೀದ ಅವರು ತೂಕ ಮತ್ತು ಸಾಧನಗಳು ಸರಿಯಿಲ್ಲದ ವ್ಯಾಪಾರಸ್ಥರ ಮೇಲೆ ಮೊಕದ್ದಮೆ ದಾಖಲಿಸಿ ದಂಡ ವಿಧಿಸಿದರು.
ನಗರದ ಜವಾಹರರಸ್ತೆ, ಅಶೋಕ ಸರ್ಕಲ್ ಸೇರಿದಂತೆ ವಿವಿಧಡೆ ಬೀದಿ ಬದಿ ವ್ಯಾಪಾರಸ್ಥರುತೂಕ ಮತ್ತು ಸಾಧನಗಳು ಸರಿಯಾಗಿ ಇಟ್ಟುಕೊಂಡು ಗ್ರಾಹಕರಿಗೆ ಕಾಣುವಂತೆ ಇರಬೇಕು, ಬೀದಿ ಬದಿ ವ್ಯಾಪಾರಸ್ಥರು ಕಾನೂನು ಮತ್ತು ಮಾಪನ ಶಾಸ್ತ್ರ ನೀರೀಕ್ಷಕರ ಕಚೇರಿಗೆ ಹಾಜರಾಗಿ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳುವಂತೆ ಎಲ್ಲಾ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು, ಗ್ರಾಹಕರೊಂದಿಗೆ ಸೌಹಾರ್ದಿತವಾಗಿ, ಸೌಜನ್ಯದೊಂದಿಗೆ ವಿಶ್ವಾಸದಿಂದ ವ್ಯಾಪಾರ ಮಾಡುವಂತೆ,
ವ್ಯಾಪಾರಸ್ಥರಿಗೆ ತೂಕ ಮತ್ತು ಸಾಧನಗಳ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿದರು.ಇದೇ ಸಂದರ್ಭದಲ್ಲಿ ಖರೀದಿಸಲು ಬಂದ ಗ್ರಾಹಕರು ನೀರೀಕ್ಷಕ ಎಂ. ಬದಿಯುದ್ದೀನ್ ಅಹ್ಮದ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 