ವಿದ್ಯಾರ್ಥಿನಿಲಯಗಳ ಪರೀಶೀಲನೆ: ಸ್ವಚ್ಛತೆ, ಆಹಾರಕ್ಕೆ ಆದ್ಯತೆ

ವಿದ್ಯಾರ್ಥಿನಿಲಯಗಳ ಪರೀಶೀಲನೆ: ಸ್ವಚ್ಛತೆ, ಆಹಾರಕ್ಕೆ ಆದ್ಯತೆ  Inspection of Hostels: Priority Given to Cleanliness and Food

ಗದಗ, ಆ. 6: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರು ಗದಗ ನಗರದ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರೀಶೀಲನೆ ನಡೆಸಿದರು.  ವಿದ್ಯಾರ್ಥಿನಿಲಯಗಳ ಸ್ವಚ್ಛತೆ, ಗುಣಮಟ್ಟದ ಆಹಾರ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿನಿಯರ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ತ್ವರಿತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಕುಡಿಯುವ ನೀರು, ಕಂಪ್ಯೂಟರ್‌ಗಳ ಕೊರತೆ, ಗ್ರಂಥಾಲಯ ಸೌಲಭ್ಯ, ಪ್ಯಾಡ್ ಬರ್ನಿಂಗ್ ಯಂತ್ರ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಲು ನಿರ್ದೇಶಿಸಿದರು. ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣದೊಂದಿಗೆ ಪ್ರಾಮಾಣಿಕತೆ, ಶಿಸ್ತು ಹಾಗೂ ಭ್ರಷ್ಟಾಚಾರ ವಿರೋಧಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.