ಸ್ವಾತಂತ್ರ್ಯಯೋಧ ರಾಯಣಗೌಡರ ಮೂರ್ತಿ ಸ್ಥಾಪನೆಗೆ ಒತ್ತಾಯ

ವರದಿ : ಶಿವಾನಂದ ಬಳಿಗಾರ

ಯರಗಟ್ಟಿ 21: ಸ್ವತಂತ್ರ ರಾಷ್ಟ್ರ ನಿಮರ್ಾಣಕ್ಕಾಗಿ ದುಡಿದ ರತ್ನಗಳು ಹಲವಾರು  ಮತ್ತು  ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನೇಕ ಜನರು ಮನೆ ಮಠ ತೋರೆದು ತಮ್ಮ ಪ್ರಾಣ ನೀಡಿ ಹೋರಾಟ ಮಾಡಿದ ಧೀರರು ಸಾಕಷ್ಟೂ ಜನರು ಮಡಿದು ಹೋಗಿದ್ದಾರೆ. ಅಂತವರಲ್ಲಿ ಕನ್ನಡದ ಹೆಮ್ಮಯ ಪುತ್ರರಲ್ಲಿ ಒಬ್ಬರಾದ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದ ರಾಯನಗೌಡ ಪಾಟೀಲ ಹೆಸರಾದವರು.

ಜನನ : ಬೆಳಗಾಂವ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಮನೆತನದಲ್ಲಿ ರಾಯಣಗೌಡರು ಲಿಂಗನಗೌಡ - ಬಸಮ್ಮ ದಂಪತಿಗಳ ಪುಣ್ಯ ಉದರದಲ್ಲಿ ಎರಡನೇಯ ಮಗನಾಗಿ ಫೆಬ್ರುವರಿ.28.1910 ರಲ್ಲಿ ಜನಸಿದರು.      

ಶಿಕ್ಷಣ : ಗ್ರಾಮದ ಗುರು ಮಠದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಧಾರವಾಡದಲ್ಲಿ ಮಾದ್ಯಮಿಕ ಶಾಲೆ, ಕನರ್ಾಟಕ ಕಾಲೇಜನಲ್ಲಿ ಬಿ.ಎ ಪದವಿ ಪಡೆದು 1937 ರಲ್ಲಿ ಕಾನೂನು  ವ್ಯಾಸಂಗಕ್ಕೆಂದು ಮುಂಬಯಿಗೆ ಬಂದ ಸಂದರ್ಭದಲ್ಲಿ ಆಗ ತಾನೆ ಬ್ರಿಟೀಷರ್ ವಿರುದ್ದ ದೇಶ ಬಿಟ್ಟು ತೊಲಗಿ. ಆಂದೋಲನ ಬಿರುಗಾಳಿಯಂತೆ ದೇಶವನ್ನು ವ್ಯಾಪಿಸಿತ್ತು. ರಾಯಣಗೌಡರಿಗೆ ಮೊದಲೇ ಹೊರಾಟದ ಬಾಲ್ಯದ ನಂಟು ಇತ್ತು. ಮತ್ತೇ ಇದರಿಂದ ಪ್ರಚೋದಿತನಾಗಿ ವ್ಯಾಸಂಗ ಅಲ್ಲಿಗೆ ನಿಲ್ಲಿಸಿ ಗಾಂಧೀಜಿ, ವಲ್ಲಭಾಯಿ ಪಟೇಲ, ರಾಜೇಂದ್ರ ಪ್ರಸಾದರವರ ಘೋಷಣೆಗೆ ಗಮನ ಹರಿಸಿ ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದರು ಹಲವಾರಿ ಭಾರಿ ಸೆರೆವಾಸ ಅನುಭವಿಸಿದರು. ಇವರನ್ನು ಹಿಡಿದು ಕೂಟ್ಟವರಿಗೆ ಬಹುಮಾನ ಕೊಡುವದಾಗಿ ಬ್ರಿಟೀಷ್ ಅಧಿಕಾರಿಗಳು ಹೆಳಿದ್ದರು. ಅಲ್ಲದೆ ಬ್ರಿಟೀಷ್ ಸರಕಾರ ಗೌಡರ ಕುಟಂಬಕ್ಕೆ ಹಿಂಸೆ ನೀಡಹತ್ತಿತು ಗೌಡಕಿ ರದ್ದು ಮಾಡಿತ್ತು. ಆಸ್ತಿ ಜಪ್ತಿ ಮಾಡವದಾಗಿ ನೋಟಿಸ್ ಹಾಕಿದಾಗ ಮುಂದೆ ದಾರಿ ಕಾಣದೆ ಸವದತ್ತಿ ಮಾಮಲೆದಾರರಿಗೆ ಸ್ವ-ಮನಸ್ಸಿನಿಂದ ಶರಣಾಗತಿಯಾದನು. ಅವರನ್ನು ಬಂಧಿಸಿ ಬೆಳಗಾಂವ ಹಿಂಡಲಗಾ ಜೈಲಿಗೆ ಹಾಕಿತು. ತಂದೆಯ ಶವ ಸಂಸ್ಕಾರಕ್ಕೆ ಅಪ್ಪಣೆ ನೀಡದೆ ಬ್ರಿಟೀಷ್ ಅಧಿಕಾರಿಗಳು ಕ್ರೂರವಾಗಿ ನಡೆಸಿಕೊಂಡಿತು. ಮುಂದೆ 1944  ರಲ್ಲಿ ಜೇಲಿನಿಂದ ಬಿಡಗಡೆ ಯಾದರು. 

ಸಮಾಜ ಸೇವೆ : ಜೈಲಿನಿಂದ ಬಂದು ಸ್ವಂತ ಬದುಕಿನ ಕಡೆಗೆ ಗಮನ ಕೊಡಲಿಲ್ಲಿ ರೈತರ ಅಭಿವೃದ್ದಿ ರೈತರ ಮಕ್ಕಳ ಶಿಕ್ಷಣದ ಬಗ್ಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಯತ್ನ, ಕನರ್ಾಟಕ ಕೃಷಿ ಸಮಾಜದ ಸದಸ್ಯರು, ಕನಾಟಕ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯ, ಜಾನಪದ ಸಾಹಿತ್ಯ ಬಗ್ಗೆ ಕಳಕಳಿ ಮತ್ತು ಕನರ್ಾಟಕ ಏಕೀಕರಣಕ್ಕಾಗಿ ಶ್ರಮ, ಮತ್ತು ರೈತ ಪರ ಆಸಕ್ತಿಯನ್ನು ಕಂಡು ಭಾರತ ಸಕರ್ಾರ 1960 ರಲ್ಲಿ ಕೃಷಿಯಲ್ಲಿ ಆದುನಿಕ ಅನುಭವ ವಿನಮಯಕ್ಕಾಗಿ ಅಮೇರಿಕಾ ದೇಶಕ್ಕೆ ಕಳಿಸಿತು.  

ಕಿತ್ತೂರ ಕೊಟೆಯ ಬಗ್ಗೆ ಅಭಿಮಾನ :  ಕಿತ್ತೂರ ಚೆನ್ನಮ್ಮನವರ ಅಪಾರ ಅಭಿಮಾನಿಯಾದ ರಾಯಣಗೌಡರು ಚೆನ್ನಮ್ಮನವರ ಇತಿಹಾಸ ಉಳಿಸಲು ಇತಿಹಾಸವನ್ನು ಹೆಕ್ಕಿ ತಗೆದು ಸಂಸ್ಥಾನದ ಬಗ್ಗೆ ಕನ್ನಡ ನಾಡಿನ ತುಂಬೆಲ್ಲಾ ಬೆಳಕಿಗೆ ತಂದ ದಿಮಂತ ದಿಟ್ಟ ಹೋರಾಟಗಾರ. ಮತು ್ತಮಲ್ಲಸರ್ಜನ ಕಾವ್ಯ, ಕಿತ್ತೂರ ಬಂಡಾಯ ಕೃತಿಗಳನ್ನು ನಾಡಿಗೆ ಅಪರ್ಿಸಿದರು. 

ಕಿತ್ತೂರ ಕೋಟೆ ಅರಮನೆಗಳ ಪುನರುಜ್ಜೀವನ ನೆನಪಿಗಾಗಿ ಕಿತ್ತೂರಿನಲ್ಲಿ ಮ್ಯೂಸಿಯಂ ನಿಮರ್ಿಸಿದ ಹೆಗ್ಗಳಿಕೆ ಗೌಡ್ರದು. ಮತ್ತು ಅಂದಿನ ಮುಖ್ಯಮಂತ್ರಿ ಎಸ್. ಆರ್. ಕಂಠಿಯವರಿಂದಿಲೇ ಕೋಟೆಯ ಸಂರಂಕ್ಷಣೆಯ ಕಾರ್ಯದ ಬಗ್ಗೆ ಉದ್ಟಟನೆ ಮಾಡಿಸಿದರು. 

ಚೆನ್ನಮ್ಮನ ಇತಿಹಾಸ ಸ್ಥಾಪಿಸಿದ ಹೆಗ್ಗಳಿಕೆೆ ಇವರದಾಗಿತ್ತು. ಇಂಥ ಅಪರೂಪದ ವ್ಯಕ್ತಿತ್ವದರಾಗಿದ್ದ ರಾಯಣಗೌಡರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದ್ದು. 

ಸಪ್ಪಂಬರ.2.1982 ರಂದು ಮರಣ ಹೂಂದಿದರು. 

ಹೇಳಿಕೆ : ತಲ್ಲೂರ ಗ್ರಾಮದ ಹಿರಿಯರು ಉದ್ಯಮಶೀಲ ಕಾಯಕಯೋಗಿ ಫಕೀರಪ್ಪ.ಬ.ಬಡಗೇರ ಅಭಿಪ್ರಾಯ : ಕಿತ್ತೂರ ಸಂರಕ್ಷಣೆ ಕೋಟೆ ಅರಮನೆಯ ಪುನರುಜ್ಜೀವನಕ್ಕೆ ಪ್ರಯತ್ನ ಹಾಗೂ ಚನ್ನಮ್ಮನ ಬಗ್ಗೆ ಅಪಾರ ಗೌರವ  ಇಟ್ಟಕೂಂಡಿದ್ದ. ಮಹಾಮಹಿಮರ ಬಗ್ಗೆ ಉತ್ಸವದಲ್ಲಿ ಚಚರ್ೆಯಾಗದೇ ಹೋಗುತ್ತಿರುವದು ವಿಷಾದನೀಯವಾದದ್ದು. ಕಿತ್ತೂರನಲ್ಲಿ ಒಂದು ಮೂತರ್ಿಯನ್ನು ಮಾಡಿಸಿಬೇಕು. ಮತ್ತು ಉತ್ಸವ ಕಮೀಟಿ ಗಮನಕ್ಕೆ ತಂದರೂ ಎನು ಪ್ರಯೋಜನವಾಗಿಲ್ಲ ಇಗಲಾದರೂ ಗಮನಹರಿಸಿ ಹೋರಟಗಾರರ ಸ್ಮರಣೆ ಅವಶ್ಯಕ. ಮತ್ತು ನನ್ನ ಕಳಕಳಿಯ ವಿನಂತಿ ಎನೆಂದರೆ ನಮ್ಮ ಗ್ರಾಮದ ದೇಸಾಯಿ ಮನೆತನ ಚನ್ನಮ್ಮನ ಸಂಬಂದಿಗಳೆ ಆಗಿರುವುದರಿಂದ ರಾಯನಗೌಡರ ಸ್ಮಾರಕ ಕಿತ್ತೂರಿನಲ್ಲಿ ಮಾಡಬೆಕು.