ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಒಬ್ಬರೇ ಕಾರಣರಲ್ಲ

Innumerable leaders and workers contributed to the growth of Bharatiya Janata Party - BJP leader CT

ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಒಬ್ಬರೇ ಕಾರಣರಲ್ಲ ಅಸಂಖ್ಯಾತ ನಾಯಕರು, ಕಾರ್ಯಕರ್ತರು ಕಾರಣಿಭೂತರು - ಪತ್ರಿಕಾಘೋಷ್ಠಿಯಲ್ಲಿ ಭಾಜಪ ನಾಯಕ ಸಿ ಟಿ. ರವಿ ಅಭಿಮತ. 

ಮಹಾಲಿಂಗಪುರ : ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಒಬ್ಬರೇ ಕಾರಣರಲ್ಲ ಅಸಂಖ್ಯಾತ ನಾಯಕರು, ಕಾರ್ಯಕರ್ತರು ಕಾರಣಿಭೂತರಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕ ಸಿ ಟಿ. ರವಿ ಹೇಳಿದರು. 

ಭಾನುವಾರ ಪಕ್ಷದ ಆಪ್ತರ ಕಾರ್ಯಕ್ರಮಗಳಿಗೆ ವಿಶೇಷ ಆಮಂತ್ರಿತರಾಗಿ ಆಗಮಿಸಿ ಮಹಾಲಿಂಗಪುರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿ ಮಾತನಾಡಿದ ಅವರು, ದೇಶವಿರಲಿ ಅಥವಾ ಪಕ್ಷವಿರಲಿ ಸಿದ್ಧಾಂತಗಳಿಗೆ ಮತ್ತು ಪಕ್ಷ ನಿಷ್ಠೆಗೆ ಬದ್ಧರಾಗಿ, ಜನತೆಯ ಹಿತ ಬಯಸಿ ಕೆಲಸ ಮಾಡಬೇಕು.ರಾಜ ಪ್ರಭುತ್ವದಲ್ಲಿ ನಾವು ವಂಶ ಆಡಳಿತ ಕಾಣುತ್ತೇವೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು.ಇದು ಪ್ರಜಾಪ್ರಭುತ್ವ ಆಶಯವೂ ಕೂಡ ಆಗಿದೆ. 

ಈ ಮುಂಚೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರೀಯ ನಾಯಕರಾದ ಲಾಲಕೃಷ್ಣ ಅಡ್ವಾಣಿ ಮತ್ತು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಜಿ ಇನ್ನೂ ಅನೇಕರು ತಮ್ಮ ಬದುಕನ್ನು ಬದಿಗಿಟ್ಟು ಪಕ್ಷ ಕಟ್ಟುವಲ್ಲಿ ಶ್ರಮ ವಹಿಸಿಲ್ಲವೇ ಎಂದು ಅಪರೋಕ್ಷವಾಗಿ ತಮ್ಮದೆ ನಾಯಕರಿಗೆ ಟಾಂಗ್ ನೀಡಿ ಪತ್ರಕರ್ತರಿಗೆ ಮರು ಪ್ರಶ್ನೆ ಮಾಡಿದರು. 

ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದಲ್ಲಿ ನಾವೆಲ್ಲ ಕೇಂದ್ರ ವರಿಷ್ಠರ ಸಲಹೆ ಸೂಚನೆಗಳಿಗೆ ಬೆಲೆ ನೀಡಬೇಕು. ಆಗ ನಿರ್ಧಿಷ್ಟ ಗುರಿ ಮುಟ್ಟಲು ಸಾಧ್ಯ.ಇಲ್ಲವಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲ ನಗಣ್ಯವಾಗುತ್ತೇವೆ.ಈ ಪಾಠವನ್ನು ಈಗಾಗಲೇ ಕಳೆದ ಚುನಾವಣೆಯಲ್ಲಿ ಜನ ನಮಗೆ ಪಾಠ ಕಲಿಸಿದ್ದು, ನಾವೆಲ್ಲರೂ ಇದನ್ನು ಗಮನದಲ್ಲಿಟ್ಟುಕ್ಕೊಂಡು ಪಕ್ಷದ ಪುನಃಶ್ಚೇತನಕ್ಕೆ ಕೆಲಸ ಮಾಡಬೇಕು. 

ನಮ್ಮ ಪಕ್ಷದಲ್ಲಿ ಇತ್ತಿಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳ ಬಗ್ಗೆ ಎಲ್ಲ ಕಡೆಯ ಕಾರ್ಯಕರ್ತರು ಬೇಸರಗೊಂಡು ಇವೆ ಪ್ರಶ್ನೆಗಳನ್ನು ಕೇಳುತ್ತಿದ್ದು, ಉತ್ತರಿಸದೆ ನಾವು ಅಸಹಾಯಕರಾಗಿದ್ದೇವೆ. ಇದಕ್ಕೆ ಪರಿಹಾರ ರೂಪದಲ್ಲಿ ವೈಯಕ್ತಿಕವಾಗಿಯೂ ಎರಡೂ ಬನಗಳ ನಾಯಕರ ಜೊತೆ ಮಾತುಕತೆ ನಡೆಸಿದ್ದು ಪ್ರಗತಿಯಲ್ಲಿದೆ ಎಂದು ಬಿವೈವಿ ಮತ್ತು ಯತ್ನಾಳ ಬನಗಳನ್ನು ಹೆಸರಿಸದೆ ಹೇಳಿದರು.