ಇನ್ನರ್ ವೀಲ್ ಕ್ಲಬ್ ಮೊದಲನೆಯ ಅಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ

Inner Wheel Club started building work on the first floor

ಇನ್ನರ್ ವೀಲ್ ಕ್ಲಬ್ ಮೊದಲನೆಯ ಅಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ 

ಕೊಪ್ಪಳ 09: ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಟ್ಟಡ ದ ಮೊದಲನೇ ಅಂತಸ್ತಿನ ಕಾಮಗಾರಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತಾ ನಾಯಕ್ ರವರು  ಪೂಜೆ ಮಾಡಿ ಅಡಿಗಲ್ಲು ನೆರವೇರಿಸಿ ಚಾಲನೆ ನೀಡಿದರು. 

 ಸದರಿ ಕಾಮಗಾರಿ ಗೆ ಚಾಲನೆ ನೀಡುವ ಕಾರ್ಯಕ್ರಮದ ನೇತೃತ್ವ ಮತ್ತು ಅಧ್ಯಕ್ಷತೆಯನ್ನು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ವಹಿಸಿದ್ದರು.ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಪರವಾಗಿ ವಿಧಾನ ಪರಿಷತ್ ಸದಸ್ಯ ರಾದ ಹೇಮಲತಾ ನಾಯಕ್ ರವರಿಗೆ ಸನ್ಮಾನಿಸಲಾಯಿತು. ಕ್ಲಬ್ಬಿನ ಪದಾಧಿಕಾರಿಗಳಾದ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಉಪಾಧ್ಯಕ್ಷರಾದ ಮಧು ಶೆಟ್ಟರ್ ಖಜಾಂಚಿ ಆಶಾ ಐಎಸ್‌ಓ ಮಧು ನಿಲೋಗಲ್ ಸಂಪಾದಕಿ ನಾಗವೇಣಿ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ,ರಾಧಾ ಕುಲಕರ್ಣಿ ತ್ರಿಶಾಲ ಪಾಟೀಲ್ ಪಾರ್ವತಿ ಪಾಟೀಲ್ ಸುಜಾತಾ ಪಟ್ಟಣಶೆಟ್ಟಿ ನಿಜತಾ ತಂಬ್ರಳ್ಳಿ ಮತ್ತು ಪದ್ಮ ಜೈನ್ ಹಾಗೂ ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ ಹಂಚಾಟೆ ಅಲ್ಲದೆ ಸದಸ್ಯರಾದ ವಿದ್ಯಾ ಲತಾ ಉಲ್ಲತ್ತಿ ಹೇಮಾ ಬಳ್ಳಾರಿ ತ್ರಿವೇಣಿ ಲತಾ ಪಟ್ಟಣಶೆಟ್ಟಿ ಶೋಭಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು