ಭಾರತೀಯ ಜನತಾ ಪಾರ್ಟಿಯಿಂದ ಕುರುಬ ಸಮಾಜಕ್ಕೆ ಅನ್ಯಾಯ: ಸಂತೋಷ

ಲೋಕದರ್ಶನ ವರದಿ

ಶಿರಹಟ್ಟಿ 02: ಬಿ.ಎಸ್ ಯಡಿಯೂರಪ್ಪನವರು ಇಂದಿನ ಮುಖ್ಯಮಂತ್ರಿಗಳಾಗಿದ್ದಾರೆಂದರೆ ಅದಕ್ಕೆ ಕುರುಬ ಸಮಾಜದ ಕೊಡುಗೆ ಅಪಾರವಾದದ್ದು ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಯಡಿಯೂರಪ್ಪನವರು ನಮ್ಮ ಸಮಾಜದ ಎಚ್. ವಿಶ್ವನಾಥ, ಎಂ.ಟಿ.ಬಿ ನಾಗರಾಜ್, ಆರ್ ಶಂಕರ, ಭೈರತಿ ಬಸವರಾಜ ಇವರಿಂದ ಇದ್ದ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರವನ್ನು ಗೆಲ್ಲಿಸಲು ಶತ ಪ್ರಯತ್ನ ಪಟ್ಟವರನ್ನು ಕಡಗಣಿಸಿ ಯಡಿಯೂರಪ್ಪನವರು ಸೋತಿರುವ ಲಕ್ಷ್ಮಣ ಸವದಿ ಅವರನ್ನು ಈ ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. 

ಹಾಲಿ ವಿಧಾನ ಸಭೆ ಸದಸ್ಯರಾದ ಈ ಮೇಲ್ಕಾಣಿಸಿದ ಇವರನ್ನು ತಕ್ಷಣ ಸಚಿವರನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರದ ಮುಖ್ಯ ಹುದ್ದೆಗಳನ್ನು ನೀಡಬೇಕು. ಒಂದು ವೇಳೆ ಇವರನ್ನು ಕಡೆಗಣನೆ ಮಾಡಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಕುರುಬ ಸಮಾಜದ ಹೋರಾಟ ಹಾಗೂ ರೂಪು ರೇಷೆಗಳನ್ನು ಹಮ್ಮಿಕೊಳ್ಳುವ ಮೂಲಕ ಯಡಿಯೂರಪ್ಪನವರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಗದಗ ಜಿಲ್ಲಾ ಕುರುಬರ ಒಕ್ಕೂಟದ ಜಿಲ್ಲಾಧ್ಯಕ್ಷ ಸಂತೋಷ ಕುರಿ ಆಗ್ರಹಿಸಿದ್ದಾರೆ.