ಕೆ.ಬಿ.ಜೆ.ಎನ್‌.ಎಲ್ ಅಧಿಕಾರಿಗಳ ಹಾಗೂ ಗುತ್ತಿಗೆದಾರನಿಂದ ರೈತ ಕುಟುಂಬಕ್ಕೆ ಅನ್ಯಾಯ

 ಕೆ.ಬಿ.ಜೆ.ಎನ್‌.ಎಲ್ ಅಧಿಕಾರಿಗಳ ಹಾಗೂ ಗುತ್ತಿಗೆದಾರನಿಂದ  ರೈತ ಕುಟುಂಬಕ್ಕೆ ಅನ್ಯಾಯ Injustice to the farmer family by KBJNL officials and the contractor

ಲೋಕದರ್ಶನ ವರದಿ 


ರೈತನಾದ ಮಂಜುನಾಥ ನಾಟಿಕಾರ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹ 

ಕೆ.ಬಿ.ಜೆ.ಎನ್‌.ಎಲ್ ಅಧಿಕಾರಿಗಳ ಹಾಗೂ ಗುತ್ತಿಗೆದಾರನಿಂದ  ರೈತ ಕುಟುಂಬಕ್ಕೆ ಅನ್ಯಾಯ 

ವಿಜಯಪುರ 09: ಕೆ.ಬಿ.ಜೆ.ಎನ್‌.ಎಲ್‌. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮಾಡಿದ ಎಡವಟ್ಟಿನಿಂದ ರೈತ ಕುಟುಂಬ ಬೀದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕಿದೆ ಕೂಡಲೇ ನಷ್ಟಗೊಂಡ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕಾ ಘೋಷ್ಠಿ ಉದ್ದೇಶಿಸಿ ಮಾತನಾಡಿದರು. 

ತಾಳಿಕೋಟಿ ತಾಲೂಕಿನ ಶರಣ ಸೋಮನಾಳ ಗ್ರಾಮದ ರೈತರಾದ ಮಂಜುನಾಥ ನಾಟೀಕಾರ ಅವರ ಸರ್ವೇ ನಂಬರ್ 163/3 ಜಮೀನಿನಲ್ಲಿ 2018-19 ಸಾಲಿನಲ್ಲಿ ಮುಳವಾಡ ಏತನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಯೂ ಸಂಪೂರ್ಣ ಕಳಪೆಯಿಂದಾಗಿ ಹೋಲದಲ್ಲಿ ಸಂಪೂರ್ಣ ನೀರು ನಿಂತು ಕಳೆದ 7 ವರ್ಷಗಳಿಂದ ಒಂದು ಕಾಳು ಕೂಡಾ ಬೆಳೆ ಬೆಳೆಯಲಾಗದೇ ನಷ್ಟ ಅನುಭವಿಸಿ ಆತ್ಮಹತ್ಯೆ ದಾರಿ ಹಿಡಿಯಬೇಕಿದೆ  

  ಈ ಕಾಮಗಾರಿಯೂ  ಸಂಪೂರ್ಣ ಕಳಪೆಯಿಂದ ಕೂಡಿದ್ದು, ಎಸ್ಟಿಮೆಂಟ್ ಪ್ರಕಾರ ಮಾಡದೇ ಬೇಕಾಬಿಟ್ಟಿ ಕಾಮಗಾರಿ ಮುಗಿಸಿ ಅಂದಾಜು 7 ಕೋಟಿ ಹಣವನ್ನ  ಸಂದಾಯ ಮಾಡಿಕೊಂಡಿರುವ ಗುತ್ತಿಗೆದಾರರು ನೀರು ಹರೆಯುವ ಕುರಿತು ಭೂಮಿಯ ಸಮತಳವನ್ನು ಗಮನಿಸದೇ  ಮನಸೋ ಇಚ್ಚೇ ಕಾಮಗಾರಿ ಮಾಡಿ ಮುಂದೆ ಹೋಗಬೇಕಿರುವ ನೀರು ಮರಳಿ ಈ ರೈತರ ಜಮೀನನಲ್ಲಿಯೇ ಸಂಗ್ರಹವಾಗಿ ಎಲ್ಲಾ ಕಡೆಯ ನೀರು ಇಲ್ಲಿಯೇ ಶೇಖರಣೆ ಆಗಿ ದೊಡ್ಡ ಕೆರೆಯಂತಾಗುತ್ತಿದೆ. 

ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ರೈತನ ಜಮೀನಿನಲ್ಲಿ 1972 ರಲ್ಲಿ ಕರೆಂಟ್ ವ್ಯವಸ್ಥೆ ಮಾಡಿಕೊಂಡಿದ್ದು ಜಮೀನಿನಲ್ಲಿ ಒಂದು ಬಾವಿ ಹಾಗೂ 2 ಬೋರವೆಲ್ ಇದ್ದು ಇದರಿಂದ  850 ಕ್ಕೂ ಅಧಿಕ ದಾಳಿಂಬೆ ಸೇರಿ ಹಲವಾರು ತೋಟಗಾರಿಕೆ ಬೆಳೆಗಳಿದ್ದರು ಕುಷ್ಕಿ ಭೂಮಿ ಎಂದು ನಮೂದಿಸಿ ಇಲ್ಲಿಯವರೆಗೆ ಯಾವುದೇ ಭೂ ಪರಿಹಾರ ನೀಡದೇ ರೈತ ಕುಟುಂಬಕ್ಕೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಮೋಸ ಮಾಡಿರುತ್ತಾರೆ.  

ಕೂಡಲೇ ರೈತನಿಗೆ ಬರಬೇಕಾಗಿರುವ ಪರಿಹಾರವನ್ನು ಬಡ್ಡಿ ಸಮೇತವಾಗಿ ನೀಡಬೇಕು, ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಿ ಕಳೆದ 7 ವರ್ಷಗಳಿಂದ ನಷ್ಟಗೊಂಡಿರುವ ರೈತ ಕುಟುಂಬಕ್ಕೆ 2 ಕೋಟಿ ನಷ್ಟ ಪರಿಹಾರವನ್ನ ಗುತ್ತಿಗೆದಾರ ಕೊಡಬೇಕು ಜೊತೆಗೆ ಕಳಪೆಯಾಗಿರುವ ಕಾಮಗಾರಿಯನ್ನ ಮರು ಟೆಂಡರ್ ಕರೆದು ಮಾಡಬೇಕು, ಹಾಗೇ ಕಳಪೆ ಕಾಮಗಾರಿಯನ್ನು ವಿಕ್ಷಣೆ ಮಾಡಿರುವ ಇಂಜಿನಿಯರ ಹಾಗೂ ಇತರೆ ಅಧಿಕಾರಿಗಳನ್ನು ವಜಾ ಮಾಡಬೇಕು.  

ಒಂದು ವಾರದೊಳಗಾಗಿ ಈ ಮೇಲಿನ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಲಮಟ್ಟಿಯ ಸಿ.ಇ ಕಚೇರಿಯ ಮುಂದೆ ಒಂದು ದಿನದ ಸಾಂಕೇತಿಕ ಹೋರಾಟ ಮಾಡಲಾಗುವುದು ಆಗಲೂ ಪರಿಹಾರ ಸಿಗದಿದ್ದಲ್ಲಿ ಬೆಂಗಳೂರಿನ ಎಂ.ಡಿ ಕಚೇರಿಯ ಮುಂದೆ ರೈತ ಕುಟುಂಬದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅನಿರ್ಧಿಷ್ಟ ಹೋರಾಟ ಮಾಡಲಾಗುವುದು ಎಂದು ಈ ಪತ್ರಿಕಾ ಘೋಷ್ಠಿ ಮೂಲಕ ಎಚ್ಚರಿಸುತ್ತಿವೆ ಎಂದರು. 


ಕೋಟ : ಮಂಜುನಾಥ ನಾಟೀಕಾರ ನಷ್ಟಗೊಂಡ ರೈತ  

ಕಳೆದ 7 ವರ್ಷಗಳಿಂದ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ನೂರಾರು ಮನವಿ ಕೊಟ್ಟರು ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ, ಹೆಂಡತಿ 3 ಮಕ್ಕಳೊಂದಿಗೆ ಅವರುಗಳ ಆರೋಗ್ಯ, ಶಿಕ್ಷಣ, ದಿನನಿತ್ಯದ ಊಟ ಬಟ್ಟೆ ಬರೇ ಯಾವ ರೀತಿ ಮಾಡಬೇಕು ಎಂದು ಚಿಂತೆಗಿಡಾಗಿ ಆತ್ಮಹತೈಗೂ ಪ್ರಯತ್ನ ಮಾಡಿದ್ದೆನೆ  ಕೃಷಿಗಾಗಿ ಖಾಸಗಿ ಬ್ಯಾಂಕಗಳಲ್ಲಿ 15 ಲಕ್ಷ ಸಾಲ ಮಾಡಿ ಎನ್‌.ಪಿ.ಎ ಆಗಿದ್ದಾನೆ ಖಾಸಗಿ ಕೈಗಡವಾಗಿ 10 ಲಕ್ಷಕ್ಕೂ ಅಧಿಕ ಸಾಲ ಮಾಡಿ  ಸಾಲದ ಬಾಧೆ ತಾಳಲಾರದೇ ಆತ್ಮಹತ್ಯ ಒಂದೇ ದಾರಿ ಎಂದು ಈ ಕುಟುಂಬ ಅನೇಕ ಕಷ್ಟಗಳನ್ನು ಎದುರಿಸುತ್ತಿದೆನೆ ಕೂಡಲೇ ನನಗೆ ಪರಿಹಾರ ಕೊಟ್ಟು ಸಾಲದಿಂದ ಮುಕ್ತರಾಗಿಸಿ ಮತ್ತೆ ಮೊದಲಿನಂತೆ ಕೃಷಿ  ಮಾಡುತ್ತೇನೆ. 


ಈ ವೇಳೆ ರೈತನ ದೊಡ್ಡಪ್ಪ ತಿಪ್ಪಣ ನಾಟೀಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕರಾದ  ಜಕರಾಯ ಪೂಜಾರಿ, ಜಿಲ್ಲಾಸಂಚಾಲಕರಾದ ಸಂಗಪ್ಪ ಟಕ್ಕೆ, ಜಿಲ್ಲಾ ಉಪಾರ್ಧಯಕ್ಷರಾದ ಮಹದೇವ ಬನಸೋಡೆ, ನಗರ ಘಟಕ ಅಧ್ಯಕ್ಷರಾದ ಸಚೀನ ಸವನಳ್ಳಿ ಸೇರಿದಂತೆ ಇತರರು ಇದ್ದರು