ಪೆರ್ರಿ ಭುಜಕ್ಕೆ ಗಾಯ

ಮೆಲ್ಬೊರ್ನ, ನ.18 :    ಸಿಡ್ನಿ ಸಿಕ್ಸರ್ಸ್ ಆಲ್ರೌಂಡರ್ ಎಲಿಸ್ ಪೆರ್ರಿ ಗಾಯದಿಂದ ಬಳಲುತ್ತಿದ್ದು, ಅವರು ಒಂದರಿಂದ ಮೂರು ವಾರ ಮೈದಾನದಿಂದ ದೂರ ಉಳಿಯುವ ನಿರೀಕ್ಷೆ ಇದೆ ಎಂದು ಸಿಡ್ನಿ ಸಿಕ್ಸರ್ಸ್ ಸೋಮವಾರ ಧೃಡಪಡಿಸಿದೆ.   

ಹೊಬಾರ್ಟ್ ತಂಡದ ವಿರುದ್ಧ ಮುಂಬರುವ ಪಂದ್ಯವನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ ಮತ್ತು ವಾರದ ನಂತರ ಹೆಚ್ಚಿನ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ.   

ನಿನ್ನೆ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದಲ್ಲಿ ಪೆರ್ರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ತಕ್ಷಣ ವೈದ್ಯರು ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುವ ವಿಶ್ವಾಸವನ್ನು ಮೂಡಿಸಿದ್ದಾರೆ.   

ಗಾಯ ಗಂಭೀರ ಸ್ವರೂಪದ ಬಗ್ಗೆ ಇನ್ನು ಖಚಿತ ಮಾಹಿತಿ ಲಭಿಸಿಲ್ಲ.  ಪೆರ್ರಿ ಅವರು ಡಿಸೆಂಬರ್ನಲ್ಲಿ ಡಬ್ಲ್ಯುಬಿಬಿಎಲ್ ಫೈನಲ್ಗೆ ಲಭ್ಯರಾಗಲಿದ್ದಾರೆ. ಸಿಕ್ಸರ್ಸ್ ತಂಡ ಒಂಬತ್ತು ಪಂದ್ಯಗಳಿಂದ 12 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.