ಚೆನ್ನೈ, ಆ 22 ಐಎನ್ಎಕ್ಸ್ ಮೀಡಿಯಾ ಹೂಡಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದ್ರಾಣಿ ಮುಖರ್ಜಿ ಮತ್ತು ಮಾಧ್ಯಮ ಸಂಸ್ಥೆ ಮುಖ್ಯಸ್ಥರಾಗಿದ್ದ ಪೀಟರ್ ಮುಖರ್ಜಿ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮಾಜಿ ಕೇಂದ್ರ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಚೆನ್ನೈನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ತಾವು ಇಂದ್ರಾಣಿ ಮುಖರ್ಜಿ ಅವರನ್ನು ದೆಹಲಿಯ ಹೋಟೆಲ್ ನಲ್ಲಿ ಭೇಟಿ ಮಾಡಿಲ್ಲ, ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಮತ್ತು ಅವರಿಗೆ ಸಹಾಯ ಮಾಡುವುದಾಗಿ ಯಾವುದೇ ರೀತಿಯ ಭರವಸೆ ಕೊಟ್ಟಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಇವರಿಬ್ಬರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಸಿಬಿಐ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಮೊದಲು ಕಾರ್ತಿ ಅವರನ್ನು , ನಂತರ ಈಗ ಅವರ ತಂದೆ ಚಿದಂಬರಂ ಅವರನ್ನು ಬಂಧನ ಮಾಡಿ, ಇಂದು ಅವರನ್ನು ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಿದೆ.