ಜೈನ್ ಸಮಾಜದಲ್ಲಿ ಹುಟ್ಟಿದ ದಿನದಿಂದ ಸಾಯುವವರೆಗೆ ಪಂಡಿತರ ಪಾತ್ರ ಬಹಳ ಮಹತ್ವದ್ದಿದೆ ಎಂದು ಇಂಡಿಯ ಚಂದ್ರಕಾಂತ ಉಪಾಧ್ಯೆ ಹೇಳಿದರು.
Indiya Chandrakant Upadhyay said that the role of scholars is very important in the Jain community f
ಜೈನ್ ಸಮಾಜದಲ್ಲಿ ಪಂಡಿತರ ಪಾತ್ರ ಬಹಳ ಮಹತ್ವದ್ದಿದೆ: ಉಪಾಧ್ಯೆ
ರಾಯಬಾಗ 13: ಜೈನ್ ಸಮಾಜದಲ್ಲಿ ಹುಟ್ಟಿದ ದಿನದಿಂದ ಸಾಯುವವರೆಗೆ ಪಂಡಿತರ ಪಾತ್ರ ಬಹಳ ಮಹತ್ವದ್ದಿದೆ ಎಂದು ಇಂಡಿಯ ಚಂದ್ರಕಾಂತ ಉಪಾಧ್ಯೆ ಹೇಳಿದರು.
ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಬಾಲಾಚಾರ್ಯ 108 ಡಾ.ಶ್ರೀ ಸಿದ್ಧಸೇನ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ರಾಜ್ಯ ಮಟ್ಟದ ಜೈನ ಪಂಡಿತ (ಉಪಾಧ್ಯೆ, ಪುರೋಹಿತರು), ಲೇಖಕ, ಸಾಹಿತ್ಯಕಾರ, ಇಂಜಿನಿಯರ್. ಸಿ.ಏ., ಸಂಗೀತಕಾರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಅಡುಗೆ ಮನೆಯೊಳಗೆ ಹೋಗಿ ಹೋಮ ಹವನ ಮಾಡುವ ಅಧಿಕಾರ ಅರ್ಚಕರಿಗೆ ಇರುತ್ತದೆ. ಹಾಗಾಗಿ ಈ ವೃತ್ತಿಯನ್ನು ಗೌರವಿಸಿ ಎಂದರು.ಗ್ರಾಮದಲ್ಲಿ ಜೈನರು ಒಕ್ಕಟ್ಟಾಗಿ ಸಮಾನ ಮನಸ್ಕರರು ಇದ್ದರೆ ಪೂಜೆ ಪುನಸ್ಕಾರಗಳು ಉತ್ತಮ ರೀತಿಯಲ್ಲಿ ಸಾಗುತ್ಯದೆ. ಪಂಡಿತರಾದವರು ಕಲಿಯುವುದನ್ನು ನಿಲ್ಲಿಸಬೇಡಿ ಶಾಸ್ತ್ರ, ಗ್ರಂಥಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕಿದೆ ಎಂದರು.ವಾಸ್ತು ಶಾಸ್ತ್ರ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಹೇಳುದಾದ್ರೆ ಜೈನ ಧರ್ಮ ಗರ್ಭ ಸಿದ್ಧಾಂತದ ಮೇಲಿದೆ. ನಿಮ್ಮ ಕರ್ಮ ಚೆನ್ನಾಗಿದ್ದರೆ ಸ್ಮಶಾನದಲ್ಲಿ ಮನೆ ಕಟ್ಟಿದರೂ ಶಾಂತವಾಗಿರುತ್ತದೆ. ಕರ್ಮವನ್ನು ಚೆನ್ನಾಗಿಟ್ಟುಕೊಳ್ಳಲು ಪ್ರಯತ್ನಿಸಿ ಎಂದು ತಿಳಿಸಿದರು.ಪಂಡಿತ (ಉಪಾಧ್ಯೆ, ಪುರೋಹಿತರು), ಲೇಖಕ, ಸಾಹಿತ್ಯಕಾರ, ಇಂಜಿನಿಯರ್. ಸಿ.ಏ., ಸಂಗೀತಕಾರರನ್ನು ಇದೇವೇಳೆ ಸನ್ಮಾನಿಸಲಾಯಿತು. ಮತ್ತು ಚಂದ್ರಕಾಂತ ಉಪಾಧ್ಯೆ ಅವರು ಪುರೋಹಿತರಿಗೆ ಉಪಯೋಗವಾಗಲೆಂದು ’ಅರಿಹಂತ ಅರ್ಚನಾ’ ಪುಸ್ತಕ ಬಿಡುಗಡೆ ಮಾಡಲಾಯಿತು. ಇದೇ ವೇಳೆ ವಿಫುಲ ಹವಳೆ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ಎಂಜನೀಯರ ಅಮರ ದುರ್ಗಣ್ಣವರ, ಅಜೀತ ಪಾಟೀಲ, ಅಜೀತ ಉಪಾಧ್ಯೆ, ಚಂದ್ರಕಾಂತ ಪಂಡಿತ, ಶಾಂತಿನಾಥ ಉಪಾಧ್ಯೆ, ನೇಮಿನಾಥ ಉಪಾಧ್ಯೆ, ಶಾಂತಿನಾಥ ಉಪಾಧ್ಯೆ, ಸಮ್ಮೇದ ಉಪಾಧ್ಯೆ, ಆಧಿನಾಥ ಉಪಾಧ್ಯೆ, ಪಾಸಗೌಂಡ ಪಾಟೀಲ, ರಾಜು ಭಯ್ಯಾ, ಭೂಪಾಲ ಉಪಾಧ್ಯೆ , ಪದ್ಮರಾಜ ಉಪಾಧ್ಯೆ, ಜಂಬು ಉಪಾಧ್ಯೆ ಸೇರಿದಂತೆ ಜೈನ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. ಆನಂದ ಉಪಾಧ್ಯೆ ಸ್ವಾಗತಿಸಿದರು. ಶಾಂತಿನಾಥ ಉಪಾಧ್ಯೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 