ಲೋಕದರ್ಶನವರದಿ
ರಾಣೇಬೆನ್ನೂರು: ಪ್ರತಿಯೊಬ್ಬ ಭಾರತೀಯರು ರೋಗ ಮುಕ್ತರಾಗಿ ನಿರೋಗಿಗಳಾಗಬೇಕು ಅಂದಾಗ ಮಾತ್ರ ಭಾರವು ಸಮಗ್ರ ಅಭಿವೃದ್ಧಿಯತ್ತ ಸಾಗಿದಂತಾಗುತ್ತದೆ. ಬಾಬಾರಾಮ್ದೇವಜೀ ಅವರ ಕಲ್ಪನೆ, ಕನಸು ಇದಾಗಿದೆ. ಅದಕ್ಕಾಗಿಯೇ ರಾಜ್ಯವೂ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ನಿತ್ಯವೂ ಯೋಗ, ಧ್ಯಾನ, ಪ್ರಾಣಾಯಾಮ ಆರಂಭಗೊಂಡಿದ್ದು, ಅದರ ಮೂಲಕ ಸ್ವಸ್ಥ ಸಮಾಜ ನಿಮರ್ಾಣವಾಗುತ್ತಲಿದೆ ಎಂದು ರಾಜ್ಯ ಪತಂಜಲಿ ಯೋಗ ಸಮಿತಿಯ ಯುವ ಪ್ರಭಾರಿ ಹೊಸಪೇಟೆಯ ಕಿರಣ್ಜೀ ಹೇಳಿದರು.
ಅವರು ಶುಕ್ರವಾರ ನಗರದ ಆದಿಶಕ್ತಿ ದೇವಸ್ಥಾನ ಧ್ಯಾನ ಮಂದಿರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜನೆಗೊಂಡಿರುವ 12ನೇ ದಿವಸದ ಸಹಯೋಗ ಶಿಕ್ಷಕರ ತರಬೇತಿ ಕಾಯರ್ಾಗಾರದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ನಾಡಿನಲ್ಲಿ ಪ್ರತಿಯೊಂದು ಜಿಲ್ಲೆ ಮತ್ತು ಪ್ರತಿ ತಾಲೂಕಿನಲ್ಲಿಯೂ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಯೋಗ ಕೇಂದ್ರಗಳು ಆರಂಭಗೊಂಡಿದ್ದು, ಇದರ ಮೂಲಕ ನಿತ್ಯವೂ ಲಕ್ಷಾಂತರ ನಾಗರೀಕರು ಪಾಲ್ಗೊಂಡು ಯೋಗ ಧ್ಯಾನ ಮತ್ತು ಪ್ರಾಣಾಯಾಮ ಮಾಡುತ್ತಾ ಸ್ವಸ್ಥ ಮತ್ತು ಆರೋಗ್ಯಯುತ ಬದುಕು ಸಾಗಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು.
ತರಬೇತಿ ಪಡೆಯುತ್ತಿರುವ ಶಿಭಿರಾಥರ್ಿಗಳು ನಂತರದ ದಿನಗಳಲ್ಲಿ ಈ ಪರಿಪಾಠವನ್ನು ನಿತ್ಯವೂ ತಮ್ಮ ಬದುಕಿನ ಅವಿಭಾಜ್ಯದ ಒಂದು ಅಂಗವಾಗಿ ಅನುಸರಿಸಿಕೊಳ್ಳುವುದರ ಮೂಲಕ ಶಿಕ್ಷಕರಾಗಿ ತಮ್ಮ ಪಾಲಿನ ಕರ್ತವ್ಯವನ್ನು ನಿಭಾಯಿಸಲು ಬದ್ಧರಾಗಬೇಕಾಗುತ್ತದೆ. ಈ ಮೂಲಕ ಸಮಾಜಮುಖಿ ಕಾರ್ಯಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದ ಅವರು ಇದು ಪರರಿಗಾಗಿ ಎನ್ನುವುದಕ್ಕಿಂತ ತಮಗಾಗಿ ಮತ್ತು ತಮ್ಮಿಂದ ಪರರಿಗಾಗಿ ಎನ್ನುವುದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಸೇವಾಮುಖಿಗಳಾಗಲು ಮುಂದಾಗಬೇಕು ಎಂದು ಶಿಭಿರಾಥರ್ಿಗಳಿಗೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ರವೀಂದ್ರ ಬಿಜಾಪುರ ಅವರು ಶಿಬಿರವು ಇದೇ ಜುಲೈ 14ರಂದು ಆರಂಭಿಸಲಾಗಿದ್ದು, ಉದ್ದೇಶಿತ ಯೋಜನೆಯಂತೆ ಸಹಯೋಗ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿದ್ದು, ಸಮಿತಿಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ. ಮಳೆಗಾಲವಾದರೂ ಸಹ ಇದರತ್ತ ನಾಗರೀಕರು ಹರಿದು ಬರುವುದರ ಮೂಲಕ ತರಬೇತಿ ಪಡೆಯುತ್ತಿರುವುದರಿಂದ ಭವಿಷ್ಯದ ದಿನಗಳಲ್ಲಿ ಅವರೂ ಸಹ ನಮ್ಮಂತೆ ಸೇವಾಮುಖಿಗಳಾಗಲಿದ್ದಾರೆ ಎನ್ನುವ ಆತ್ಮ ತೃಪ್ತಿ ಮತ್ತು ಸಂತೋಷ ನಮ್ಮೆಲ್ಲ ಸದಸ್ಯರಿಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್ ಅಧ್ಯಕ್ಷ ಆರ್.ಎನ್.ರಾಠೋಡ, ಯುವ ಪ್ರಭಾರಿ ಕೆ.ಜಿ. ದಿವಾಕರ ಮೂತರ್ಿ, ಕಾಯರ್ಾಲಯ ಪ್ರಭಾರಿ ಎಂ.ಬಿ.ಮೊಟಳ್ಳಿ, ಮಹಿಳಾ ಪ್ರಭಾರಿ ವಜ್ರೇಶ್ವರಿ ಲದ್ವಾ, ಯೋಗ ಶಿಕ್ಷಕರಾದ ಸುವಣರ್ಾ ಬಾನುವಳ್ಳಿ, ಡಾ|| ಪವನ್ ಬೆಳಕೇರಿ, ಸರೋಜಾ ಸುಣಗಾರ, ಕವಿತಾ ಕುಬಸದ, ಹೇಮಾ ತಾಳೂರ, ರೇಖಾ ಶಾಲಗಾರ, ಕೃಷ್ಣಮೂತರ್ಿ ಐರಣಿ, ಆರ್.ಬಿ.ಪಾಟೀಲ, ಪಾಂಡುರಂಗ ಪೂಜಾರ, ಲಲಿತಾ ಮೇಲಗಿರಿ, ಪಾಂಡುರಂಗ ರಾಂಪುರ ಸೇರಿದಂತೆ ಮತ್ತಿತರ ಸಾಧಕರು, ಸಹಯೋಗ ತರಬೇತಿ ಶಿಭಿರಾಥರ್ಿಗಳು ಪಾಲ್ಗೊಂಡಿದ್ದರು.