ಭಾರತೀಯ ರೆಡ್ ಕ್ರಾಸ್ ಚುನಾವಣೆ: ಡಾ. ವ್ಹಿ.ಡಿ.ಡಾಂಗೆ ಪ್ಯಾನಲ್‌ಗೆ ಜಯ
Indian Red Cross Election: Dr. W.H.D. Dange panel wins
ಬೆಳಗಾವಿ 08: ಭಾರತೀಯ ರೆಡ್ ಕ್ರಾಸ್ ಚುನಾವಣೆಯಲ್ಲಿ ಡಾ. ವೆಂಕಣ್ಣ ಡಿ ಡಾಂಗೆಯವರ ನೇತೃತ್ವದ ಪ್ಯಾನಲ್ ಪೂರ್ಣ ಪ್ರಮಾಣದ ಜಯಗಳಿಸಿತು. ಅಕ್ಟೋಬರ 30ರಂದು ಜರುಗಿ ಫಲಿತಾಂಶ ನವೆಂಬರ್ 3ರಂದು ಘೋಷಿಸಲಾಯಿತು. ಡಾ. ವಿ.ಡಿ.ಡಾಂಗೆ, ಪ್ರವೀಣ ಹಿರೇಮಠ, ಪ್ರಿಯಾ ಪುರಾಣಿಕ, ಡಾ. ಸಂಜಯ ಸಿದ್ದಣ್ಣವರ, ಅಶೋಕ ಬದಾಮಿ, ದತ್ತಾತ್ರಯ ಮಿಸಾಳೆ, ರವೀಂದ್ರ ತೋಟಗೇರ, ಶಿವಬಸಪ್ಪ ಸಿದ್ನಾಳ, ಶಿವಾನಂದ ಮೂಲಿಮನಿ, ಲೆ. ಕರ್ನಲ್ ವಿನೋದಿನಿ ಶರ್ಮಾ ಆಯ್ಕೆಯಾಗಿದ್ದಾರೆ. ಬಿಮ್ಸ್ ಸಿ.ಇ.ಓ ಸಿದ್ದು ಹುಲ್ಲೋಳಿಯವರು ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಯಗಳಿಸಿದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಸಂಜೆ.7ಘಂಟೆಗೆ ಸಂಸ್ಥೆಯ ಕಛೇರಿಯಲ್ಲಿ ಕಾರ್ಯಕಾರಿ ಮಂಡಳಿ ಸಭೆ ಸೇರಿ ಡಾ. ವಿ.ಡಿ.ಡಾಂಗೆಯವರನ್ನು ಸರ್ವಾನುಮತದಿಂದ ಚೇರಮನ್‌ರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಡಾ. ಸಂಜಯ ಸಿದ್ದಣ್ಣವನವರ, ಕಾರ್ಯದರ್ಶಿಯಾಗಿ ಶಿವಾನಂದ ಮೂಲಿಮನಿ, ಖಜಾಂಚಿಯಾಗಿ ಲೆ. ಕರ್ನಲ್ ವಿನೋದಿನಿ ಶರ್ಮಾ, ಜಂಟಿ ಕಾರ್ಯದರ್ಶಿಯಾಗಿ ಪ್ರವೀಣ ಹಿರೇಮಠ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ದತ್ತಾತ್ರಯ ಮಿಸಾಳೆ ಯವರನ್ನು, ನೇಮಕ ಮಾಡಲಾಯಿತೆಂದು ಚೇರಮನ್ ಡಾಂಗೆ ತಿಳಿಸಿದರು. ರಾಜ್ಯ ವೀಕ್ಷಕರಾಗಿ ಮಹಾಂತೇಶ ಮೀರಾಪುರ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 