ಪಾಕಿಸ್ತಾನಿ ನುಸುಳುಕೋರರ ಪ್ರಯತ್ನ ವಿಫಲಗೊಳಿಸಿದ ಭಾರತೀಯ ಸೇನೆ

Indian Army thwarted the attempt of Pakistani infiltrators

ಶ್ರೀನಗರ 07:  ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನಿ ನುಸುಳುಕೋರರು ನಡೆಸಿದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದು ವರದಿಯಾಗಿದೆ.

ಫೆಬ್ರವರಿ 4-5ರ ರಾತ್ರಿ ಪಾಕಿಸ್ತಾನಿಗರು ಗಡಿಯೊಳಗೆ ನುಸುಳುತ್ತಿರುವ ಮಾಹಿತಿ ಪಡೆದ  ಭಾರತೀಯ ಸೇನೆ ಗಡಿ ನುಸುಳುವಿಕೆಯನ್ನು ತಡೆದಿದ್ದು ಇದೇ ವೇಳೆ 7 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಮೃತರ ಪೈಕಿ ಮೂವರು ಪಾಕಿಸ್ತಾನಿ ಸೇನಾ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಕಾಶ್ಮೀರ ಒಗ್ಗಟ್ಟಿನ ದಿನವನ್ನು ಆಚರಿಸುತ್ತಿದ್ದಾಗ, ಪಾಕಿಸ್ತಾನಿಗಳು ತಮ್ಮ ಭಾರತ ವಿರೋಧಿ ನಡೆಯನ್ನು ಮುಂದುವರಿಸಲು ಈ ಘಟನೆಯನ್ನು ನಡೆಸಿದರು. ಅದು ಭಾರತ ವಿರೋಧಿ ಕಾರ್ಯಸೂಚಿಯನ್ನು ಮುನ್ನಡೆಸುವ ಪ್ರಚಾರದ ಅಭಿಯಾನವಾಗಿತ್ತು.