ನವದೆಹಲಿ, ಮೇ 29, ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 1.6 ಲಕ್ಷದ ಗಡಿ ದಾಟಿದ್ದು ಗರಿಷ್ಠ ಸಂಖ್ಯೆಯ ಕೊರೋನ ಸೋಂಕಿತರ ದೇಶಗಳ ಪೈಕಿ ಈಗ ಭಾರತ 9 ನೇ ಸ್ಥಾನಕ್ಕೇರಿದೆ. ಈ ಮಧ್ಯೆ ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಭಾರತ, ಚೀನಾವನ್ನು ಹಿಂದಿಕ್ಕಿದೆ ಎಂದು ಅಮೆರಿಕದ ಜಾನ್ ಹಾಕಿನ್ಸ್ ವಿಶ್ವವಿದ್ಯಾನಿಲಯ ಕಲೆ ಹಾಕಿದ ಅಂಕಿ ಅಂಶಗಳಿಂದ ದೃಢಪಟ್ಟಿದೆ.ಭಾರತದಲ್ಲಿ ಸೋಂಕಿನಿಂದ 4,711 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ಚೀನಾ (4,638)ವನ್ನು ಮೀರಿಸಿದೆ.ಒಟ್ಟು 17 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಬ್ರೆ ಜಿಲ್ , ರಷ್ಯಾ , ಬ್ರಿಟನ್, ಸ್ಪೇನ್, ಇಟೆಲಿ, ಫ್ರಾನ್ಸ್ ಮತ್ತು ಜರ್ಮನಿ ಭಾರತಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿವೆ. ಟರ್ಕಿ 10ನೇ ಸ್ಥಾನದಲ್ಲಿದ್ದು, ಇರಾನ್, ಪೆರು ಮತ್ತು ಕೆನಡಾ ಬಳಿಕ ಚೀನಾ 14ನೇ ಸ್ಥಾನದಲ್ಲಿದೆ.