ಸನಾತನ ಧರ್ಮ ಉಳಿದರೆ ಭಾರತ ಉಳಿಯಲು ಸಾಧ್ಯ: ಸಿ.ಟಿ.ರವಿ
India can survive if Sanatan Dharma remains: C.T. Ravi
ಸನಾತನ ಧರ್ಮ ಉಳಿದರೆ ಭಾರತ ಉಳಿಯಲು ಸಾಧ್ಯ: ಸಿ.ಟಿ.ರವಿ
ತಾಳಿಕೋಟೆ 04: ಗಣಪ ನಮ್ಮ ಕೃಷಿ ಕುಟುಂಬದ ಆರಾದ್ಯ ದೈವವಾಗಿದ್ದು ನಾಡಿನ ಪ್ರತಿ ಹಿಂದುಗಳ ಮನೆಮನಗಳಲ್ಲಿ ವಿಘ್ನನಿವಾರಕನಾಗಿ ನೆಲೆಸಿದ್ದಾನೆ. ಈ ನಮ್ಮ ದೈವಭಕ್ತಿ ಮತ್ತು ದೇಶಭಕ್ತಿ ಒಂದಾದರೆ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಸಾಧ್ಯ ಎಂಬ ಕಾರಣದಿಂದ ಬಾಲಗಂಗಾಧರ ತಿಳಕರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಟಿ.ರವಿ ಹೇಳಿದರು.
ಅವರು ಪಟ್ಟಣದ ಹಿಂದೂ ಮಹಾಗಣಪತಿಯ 12ನೆಯ ವರ್ಷದ ಗನೇಶೋತ್ಸವದಂಗವಾಗಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಮತ್ತು ಭವ್ಯಶೋಭಾಯಾತ್ರೆಯ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಗುರುವಾರ ಮಾತನಾಡಿದರು.ಹಿಂದೂ ಸಂಸ್ಕೃತಿಯ ವಿನಾಶಕ್ಕೆ ಅನಾದಿ ಕಾಲದಿಂದಲೂ ನಿರಂತರವಾಗಿ ಹುನ್ನಾರ ನಡೆದಿದೆ. ಹಿಂದು ಜಾಗೃತನಾಗದಿದ್ದರೆ ಧರ್ಮವೂ ಇಲ್ಲ, ದೇಶವೂ ಉಳಿಯದು ಎಂದು ಎಚ್ಚರಿಸಿದರು. ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ಆಚರಣೆಗಳು, ಸಂಪ್ರದಾಯಗಳು ಉಳಿಸಲು ಜಾಗೃತರಾಗಿ ಎಂದರು. ಹಿಂದೂ ಸನಾತನ ಧರ್ಮ ಯಾರೋ ಒಬ್ಬರಿಂದ ಜನಿಸಿದ್ದಲ್ಲ, ಅದಕ್ಕೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಯಾವ ಜಾತಿಗಳೂ ಇಲ್ಲ, ಮೇಲು ಕೀಳಿಲ್ಲ. ವೃತ್ತಿಗಳೇ ಇಂದು ಜಾತಿಗಳಾಗಿ ಆರ್ಥಿಕ ಸಬಲತೆಗೆ ಹೋರಾಟ ನಡೆಸಿವೆ. ಜಾತಿ, ಅಸ್ಪೃಶ್ಯತೆ, ಅಸಮಾನತೆ ಅಳಿಯಬೇಕು. ನಾವು ಎಲ್ಲ ಋಷಿಶ್ರೇಷ್ಠರ, ಸಂತರ, ದಾರ್ಶನಿಕರ ಉತ್ತಮ ವಿಚಾರಗಳನ್ನೂ ಗೌರವಿಸುತ್ತೇವೆ. ನಮ್ಮದೇ ಶ್ರೇಷ್ಠ ಎಂದು ಇತರ ಧರ್ಮವನ್ನು ತುಳಿಯುವುದು ನಮ್ಮ ಧರ್ಮವಲ್ಲ ಇಂದು ಜಾತಿ ಸಂಘಟನೆಗಳು ಬಲಗೊಳ್ಳುತ್ತಿವೆ ಆದರೆ ಎಲ್ಲ ಜಾತಿಗಳಿಗೆ ಮೂಲತಾಯಿಯಾದ ಹಿಂದೂ ಧರ್ಮದ ಅವನತಿಯಾಗುತ್ತಿದ್ದರೂ ನಮ್ಮವರು ಸುಮ್ಮನಿರುವುದು ನೋವಾಗಿದೆ. ಪ್ರತಿ ಹಿಂದುವಿನಲ್ಲಿ ಹಿಂದೂತ್ವವು ಬಂಧುತ್ವವಾಗಿಸಲು ಈ ಗಣೇಶೋತ್ಸವವಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಮಹಾಮಂಡಳಿಯ ಗೌರವಾಧ್ಯಕ್ಷ ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಉಪಾಧ್ಯಕ್ಷ ಕೆಸರಟ್ಟಿಯ ಬಾಲಶಿವಯೋಗಿ ಸೋಮಲಿಂಗಶ್ರೀ ಮಾತನಾಡಿದರು.
ವೇದಿಕೆಯಲ್ಲಿ ಮಹಾಮಂಡಳಿಯ ಸ್ವಾಗತ ಸಮಿತಿ ಅಧ್ಯಕ್ಷ ವೈದ್ಯ ಡಾ.ವಿ.ಎಸ್.ಕಾರ್ಚಿ, ಉಪಾಧ್ಯಕ್ಷ ಶಿವಾಜಿ ಸೂರ್ಯವಂಶಿ, ಬಿಜೆಪಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಯುವಮುಖಂಡ ಉಮೇಶ ಕಾರಜೋಳ, ಗುರು, ರಾಜು ಹಂಚಾಟೆ, ಶ್ರೀನಿವಾಸ ಸೋನಾರ, ಇತರರಿದ್ದರು. ದಿನಕರ ಜೋಶಿ ಅವರು ವಂದೇ ಮಾತರಂ ಗೀತೆ ಹೇಳಿದರು, ಅರ್ಚಕ ಸಂತೋಷ ಭಟ್ಟ ಜೋಶಿ ಸ್ವಾಗತಿಸಿದರು. ತೇಜಶ್ವಿನಿ ಡಿಸಲೆ ನಿರ್ವಹಿಸಿದರು. ದಿಕ್ಸೂಚಿ ಭಾಷಣದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆ ಜರುಗಿತು. ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಹುಲಿವೇಷ ಕುಣಿತ, ಡೊಳ್ಳು ಕುಣಿತ ಗಮನ ಸೆಳೆದವು ಮಹಾಮಂಡಳಿಯು ಕಳೆದ ಒಂಬತ್ತು ದಿನಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭವ್ಯ ಅನ್ನ ಪ್ರಸಾದ ವ್ಯವಸ್ಥೆ ಮಾಡಿತ್ತು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 